Monday, January 19, 2015

ಕುಂಜತ್ತೂರು, ತೂಮಿನಾಡು ದಾರಿಯಾಗಿ ವ್ಯಾಪಕ ಅನಧಿಕೃತ ಮರಳು ಸಾಗಾಟ: ಲಾರಿ ಸಹಿತ ಓರ್ವ ಸೆರೆ

ಕುಂಜತ್ತೂರು, ತೂಮಿನಾಡು ದಾರಿಯಾಗಿ ವ್ಯಾಪಕ ಅನಧಿಕೃತ ಮರಳು ಸಾಗಾಟ: ಲಾರಿ ಸಹಿತ ಓರ್ವ ಸೆರೆ

ಮಂಜೇಶ್ವರ: ಮರಳು ಮಾಫಿಯಾಗಳು ಇದೀಗ ರಾತ್ರಿ ಹಾಗೂ ಮುಂಜಾನೆಗಳಲ್ಲಿ ಕುಂಜತ್ತೂರು ಒಳ ದಾರಿಯಾಗಿ ಬಂದು ಕುಂಜತ್ತೂರು ಜಂಕ್ಷನ್ ಮೂಲಕವಾಗಿ ಹಾಗೂ ಕುಂಜತ್ತೂರು ಪದವು ಒಳ ದಾರಿಯಾಗಿ ಬಂದು ಟೂಮಿನಾಡು ಜಂಕ್ಷನ್ ಗಳಲ್ಲಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿ ಬಳಿಕ ನಕಲಿ ಪಾಸನ್ನು ಬಳಸಿ ಕರ್ನಾಟಕದ ನೇತ್ರಾವತಿಯಿಂದ ತರಲಾದ ಅನಧಿಕೃತ ಮರಳನ್ನು ಕೇರಳಕ್ಕೆ ಕೊಂಡೊಯ್ಯುತ್ತಿರುವುದಾಗಿ ತಿಳಿದು ಬಂದಿದೆ.

ಕುಂಜತ್ತೂರು ಒಳ ದಾರಿಯಿಂದಾಗಿ ಬರುವ ಅನಧಿಕೃತ ಮರಳು ಲಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಲು ಪ್ರತಿಯೊಂದು ಲಾರಿಗೂ ಒಂದು ಸಾವಿರ ರೂ. ನಂತೆ ಸ್ಥಳೀಯ ಕೆಲವೊಂದು ಪುಡಾರಿಗಳಿಗೆ ನೀಡಬೇಕಾಗಿದೆ. ಒಂದು ರೀತಿಯ ಹಪ್ತಾ ರೀತಿಯಲ್ಲಿ ಇದೀಗ ಮರಳು ಸಾಗಾಟವಾಗುತ್ತಿದೆ. ಈ ಮಾಹಿತಿ ಅರಿತ ಮಂಜೇಶ್ವರ ಪೊಲೀಸರು ತಪಾಸಣೆ ನಡೆಸಿದಾಗ ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತಿದ್ದ ಲಾರಿ ಸಹಿತ ಚಾಲಕನನ್ನು ಸೆರೆ ಹಿಡಿಯಲಾಗಿದೆ. ಈ ಸಂಬಂಧ ಲಾರಿ ಚಾಲಕ ಮುಡಿಪು ಬಾಲಪುಣಿ ಪುಳ್ಕೂರು ನಿವಾಸಿ ಸುರೇಶ (26) ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಕರ್ನಾಟಕದ ನೇತ್ರಾವತಿ ಹೊಳೆಯಿಂದ ತರಲಾಗುತ್ತಿರುವ ಮರಳನ್ನು ತಲಪಾಡಿ ಗಡಿ ಪ್ರದೇಶದಿಂದಾಗಿ ತಂದು ಒಳ ಮಾರ್ಗದಲ್ಲಿ ಸಾಗಿ ಕೆದಂಬಾಡಿ ಪರಿಸರದಲ್ಲಿ ಶೇಖರಿಸಿ ಬಳಿಕ ರಾತ್ರಿ ಹಾಗೂ ಮುಂಜಾನೆ ವೇಳೆಗಳಲ್ಲಾಗಿ ತೂಮಿನಾಡು ಹಾಗೂ ಕುಂಜತ್ತೂರು ಜಂಕ್ಷನ್ ದಾರಿಯಾಗಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತದೆ. ಇದರಿಂದ ಮರಳು ಮಾಫಿಯಾಗಳು ಪ್ರತಿ ದಿನಗಳಲ್ಲಿ ಲಕ್ಷಾಂತರ ರೂ. ಜೇಬಿಗಿಳಿಸುತಿದ್ದಾರೆ.

Sunday, January 18, 2015

ಮಂಜೇಶ್ವರ:ಮದ್ರಸಾ ಅಧ್ಯಾಪಕನಿಂದ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಕರೆ: ಬೀಚ್ ನಲ್ಲಿ ಮೂರು ಮಕ್ಕಳ ತಾಯಿ ಜತೆ ಸಿಕ್ಕಿ ಬಿದ್ದ ಅಧ್ಯಾಪಕ

ಮಂಜೇಶ್ವರ:ಮದ್ರಸಾ ಅಧ್ಯಾಪಕನಿಂದ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಕರೆ: ಬೀಚ್ ನಲ್ಲಿ  ಮೂರು ಮಕ್ಕಳ ತಾಯಿ ಜತೆ ಸಿಕ್ಕಿ ಬಿದ್ದ ಅಧ್ಯಾಪಕ

ಮಂಜೇಶ್ವರ: ಚಪಲ ಚೆನ್ನಿಗರಾಯನಾದ ಮದ್ರಸಾ ಅಧ್ಯಾಪಕನೊಬ್ಬ ವಿದ್ಯಾರ್ಥಿಗಳಿಂದ ಅವರ ತಾಯಂದಿರ ಮೊಬೈಲ್ ನಂಬ್ರವನ್ನು ಪಡೆದು ತಡ ರಾತ್ರಿ ವೇಳೆಗಳಲ್ಲಿ ಅವರಿಗೆ ಗಾಳ ಹಾಕಿ ಬಲೆಗೆ ಬಿದ್ದ ಜೋಡಿಯೊಂದಿಗೆ ಬೀಚ್ ನಲ್ಲಿ ಊರವರ ಕೈ ಗೆ ಸಿಕ್ಕಿ ಬಿದ್ದ ಘಟನೆ ಮಂಜೇಶ್ವರ ಪರಿಸರದಲ್ಲಿ ನಡೆದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಮಂಜೇಶ್ವರ ಪರಿಸರದಲ್ಲಿರುವ ಮದ್ರಸಾವೊಂದರ ಅಧ್ಯಾಪಕನಾಗಿರುವ ಮಂಜೇಶ್ವರ ಕಡಂಬಾರ್ ನಿವಾಸಿಯಾಗಿರುವ ಅಧ್ಯಾಪಕನೋರ್ವ ಕಲಿಯಲು ಬರುತ್ತಿರುವ ವಿದ್ಯಾರ್ಥಿಗಳಿಂದ ಅವರ ತಾಯಂದಿರ ಮೊಬೈಲ್ ನಂಬ್ರವನ್ನು ಸಂಗ್ರಹಿಸುತಿದ್ದನೆನ್ನಲಾಗಿದೆ. ಈ ಸಂಗ್ರಹಿಸಿದ ಮೊಬೈಲ್ ಸಂಖ್ಯೆಗೆ ರಾತ್ರಿ ವೇಳೆ ಪೋನ್ ಮಾಡಿ ಅಸಭ್ಯವಾಗಿ ಮಾತನಾಡುತಿದ್ದನೆನ್ನಲಾಗಿದೆ. ಈ ಬಗ್ಗೆ ಕೆಲವೊಂದು ವಿದ್ಯಾರ್ಥಿಗಳ ತಾಯಂದಿರು ಅಧ್ಯಾಪಕನಿಗೆ ಆವಾಗಲೇ ಸರಿಯಾದ ಮರ್ಯಾದೆ ಕೊಟ್ಟರೆ, ಕೆಲವೊಂದು ತಾಯಂದಿರು ಈ ಚಪಲ ಚೆನ್ನಿಗರಾಯ ಅಧ್ಯಾಪಕನ ಬಲೆಗೆ ಬಿದ್ದಿದ್ದಾರೆ. ಇದರಂತೆ ಮೂರು ಮಕ್ಕಳ ತಾಯಿಯಾಗಿರುವ ಮಂಜೇಶ್ವರದ ಗೃಹಣಿಯೋರ್ವಳ ಜತೆ ಅಧ್ಯಾಪಕ ಬೀಚ್ ನಲ್ಲಿ ತಿರುಗಾಡುತಿದ್ದುದನ್ನು ಕಂಡ ಸ್ಥಳೀಯರು ಅಧ್ಯಾಪಕನನ್ನು ಪ್ರಶ್ನಿಸಿ ಗೂಸಾ ನೀಡಿ. ಮದ್ರಸಾದಿಂದ ಅಮಾನತುಗೊಳಿಸಿದ್ದಾರೆ. ಅಧ್ಯಾಪಕನ ಜತೆ ಸಿಕ್ಕಿ ಬಿದ್ದ ಗೃಹಣಿಯ ಪತಿ ಊರಲ್ಲಿಯೇ ಇರುವುದಾಗಿ ಹೇಳಲಾಗಿದೆ. ಈ ಚಪಲ ಚೆನ್ನಿಗರಾಯ ಅಧ್ಯಾಪಕ ಈ ಮೊದಲು ಕರ್ನಾಟಕದ ದೇರಳ ಕಟ್ಟೆ ಸಮೀಪದ ಕಿನ್ಯಾ ಎಂಬಲ್ಲಿರುವ ಮದ್ರಸಾವೊಂದರಿಂದ ಇದೇ ರೀತಿಯ ಕಾರಣದಿಂದ ಊರವರಿಂದ ಗೂಸಾ ತಿಂದು ಅಮಾನತು ಗೊಂಡವನಾಗಿರುವುದಾಗಿ ತಿಳಿದು ಬಂದಿದೆ. 

Saturday, January 17, 2015

ಮಂಜೇಶ್ವರ ಗ್ರಾ.ಪಂ. ನಲ್ಲಿ ಸಾಂತ್ವಾನ ಚಿಕಿತ್ಸಾ ಯೋಜನೆ ಕಾರ್ಯಕ್ರಮ

ಮಂಜೇಶ್ವರ ಗ್ರಾ.ಪಂ. ನಲ್ಲಿ ಸಾಂತ್ವಾನ ಚಿಕಿತ್ಸಾ ಯೋಜನೆ ಕಾರ್ಯಕ್ರಮ
ಮಂಜೇಶ್ವರ: ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಾ ಮನೆಯ ನಾಲ್ಕು ಕೋಣೆಯೊಳಗೆ ಬಂಧಿಯಾಗಿರುವ ವಿವಿಧ ರೀತಿಯ ರೋಗಪೀಡಿತರನ್ನು ಗುರುತಿಸಿ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಕರೆಸಿ ಅವರ ಮನಸ್ಸಿಗೆ ಮನರಂಜನೆಯನ್ನು ನೀಡುವ ನಿಟ್ಟಿನಲ್ಲಿ  ಮಂಜೇಶ್ವರ ಗ್ರಾ. ಪಂ. ಹಾಗೂ ಆರೋಗ್ಯ ಕೇಂದ್ರ ಮಂಗಲ್ಪಾಡಿ ಇದರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಬೆಳಿಗ್ಗೆ ಗ್ರಾ. ಪಂ. ಆವರಣದಲ್ಲಿ ಸಾಂತ್ವಾನ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.
ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಮುಶ್ರತ್ ಜಹಾನ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷೆ ಮುಂತಾಸ್ ಸಮೀರ ಉದ್ಘಾಟಿಸಿದರು. ವೇದಿಕೆಯಲ್ಲಿ ಪಂ. ಸದಸ್ಯರಾದ ಪ್ರಶಾಂತಿ, ಅಬ್ದುಲ್ಲ ಕಜೆ, ಅಲೀಮ, ಆರೋಗ್ಯಾಧಿಕಾರಿ ಪ್ರಭಾಕರ ರೈ, ಮಂಜೆಶ್ವರ ಬ್ಲಾಕ್ ಪಂ. ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ, ಮಾಜಿ ಪಂ. ಅಧ್ಯಕ್ಷ ಯು ಎ ಖಾದರ್ ಮೊದಲಾದವರು ಶುಭಾಶಂಶೆ ಗೈದರು.ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿ ಪಂಚಾಯತಿನಲ್ಲಿ ದಾಖಲಾಗಿರುವ  ವಿವಿಧ ರೀತಿಯ ರೋಗಕ್ಕೆ ತುತ್ತಾಗಿರುವ 227 ರೋಗಿಗಳ ಪೈಕಿ 150 ರೋಗಿಗಳು ಇದೀಗ ಬದುಕಿ ಉಳಿದಿದ್ದಾರೆ. ಶಿಬಿರಕ್ಕೆ ಅವರೆಲ್ಲರನ್ನು ಆಹ್ವಾನಿಸಿ ಒಬ್ಬೊಬ್ಬರಿಗಾಗಿ 5 ಕೆಜೆ ಅಕ್ಕಿ, 1.5 ಕೆ ಜಿ ಸಕ್ಕರೆ ಹಾಗೂ ಒಂದು ಹೊದಿಕೆಯನ್ನು ವಿತರಿಸಲಾಯಿತು. ರೋಗಿಗಳನ್ನು ಮನರಂಜನೆ ಗೊಳಿಸುವ ಸಲುವಾಗಿ ಎಸ್ ಎ ಟಿ  ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಪರಿಸರದ ಇತರ ಕ್ಲಬ್ ಗಳ ಸದಸ್ಯರು ಮನರಂಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜತೆಯಾಗಿ ರೋಗಿಗಳಿಗೆ ವೀಲ್ ಚೇಯರ್ ಹಾಗೂ ವಾಟರ್ ಬೆಡ್ ನ್ನು ಕೂಡಾ ವಿತರಿಸಲಾಯಿತು. ಅಂಗನವಾಡಿ ಅಧ್ಯಾಪಕರು, ಪ್ರತಿಭಾವಂತ ವಿದ್ಯಾರ್ಥಿಗಳು, ಮಾಪ್ಪಿಳಪ್ಪಾಟ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದ ಕ್ಲಬ್ ಸದಸ್ಯರಿಗೆ, ಹಾಗೂ ಇತರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಶಾಸ್ತ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿದ ಎಸ್ ಎ ಟಿ ಶಾಲಾ ನಾಲ್ಕನೇ ತರಗತಿ ಯ ವಿದ್ಯಾರ್ಥಿ ಶಿಲ್ಪಾ ಕೆ. ವೇದಿಕೆಯಲ್ಲಿ ನಡೆಸಿದ ಕಾರ್ಯಕ್ರಮ ಭಾರೀ ಮೆಚ್ಚುಗೆಯನ್ನು ಪಡೆಯಿತು.  ಪಂ. ಕಾರ್ಯದರ್ಶಿ ಧನಂಜಯ್ ಸ್ವಾಗತಿಸಿ ಹೆಲ್ತ್ ಇನ್ಸ್ ಪೆಕ್ಟರ್ ಎನ್ ಸುಕುಮಾರನ್ ವಂದಿಸಿದರು. 

Thursday, January 15, 2015

ದೂರು

ದೂರು ನೀಡಲು ಸಹಾಯ ಯಾಚಿಸಿ ಬಂದ ಗಲ್ಫ್ ಉದ್ಯೋಗಿಯೊಬ್ಬನಿಗೆ ಬೇಕಾದ ರೀತಿಯ ಎಲ್ಲಾ ಸಲಹಾ ಸೂಚನೆ ಹಾಗೂ ಸಹಾಯವನ್ನು ಮಾಡಿದೆ. ದೂರು ಕೂಡಾ ರವನೆಯಾಯಿತು. ದೂರು ಪ್ರತಿಫಲಿಸುವ ಮಧ್ಯೆ  ದೂರು ದಾತ ಅರ್ಧದಲ್ಲಿ ಕೈ ತೊಳೆದಿದ್ದಾನೆ. ಮೊದಲೇ ಹೇಳಿದ್ದೆ ಅರ್ಧದಲ್ಲಿ ಕೈ ತೊಳೆಯುವುದಾದರೆ ಗ್ರಾಹಕರ ವೇದಿಕೆಯ ಬಳಿ ಬರಬೇಡವೆಂದು, ಆದರೆ ಅವನ ಮನಸ್ಸಿನ ಗುಟ್ಟು ನಮಗೇನು ಗೊತ್ತು. ಪತ್ರಿಕೆಯಲ್ಲಿ ದೂರುದಾತನ ಹೆಸರು ಬಂತು. ಊರವರಿಂದ ಅವನಿಗೆ ಪ್ರಶಂಶೆ ಬಂತು. ಆದರೆ ಯಾರ ವಿರುದ್ದ ಹೋರಾಟ ಮಾಡಲು ಬಯಸಿದ್ದನೋ ಅದು ನಿಶ್ಯಭ್ದವಾಯಿತು. 

Monday, January 12, 2015

ಕಣ್ವತೀರ್ಥ: ಅನಧಿಕೃತ ಮಿನರಲ್ ವಾಟರ್ ಹೆಸರಲ್ಲಿ ವಂಚನೆ: ಸ್ಥಳೀಯರ ಆರೋಪ

ಕಣ್ವತೀರ್ಥ: ಅನಧಿಕೃತ ಮಿನರಲ್ ವಾಟರ್ ಹೆಸರಲ್ಲಿ ವಂಚನೆ: ಸ್ಥಳೀಯರ ಆರೋಪ

ಮಂಜೇಶ್ವರ: ಅನಧಿಕೃತ ಖನಿಜ ಜಲ (ಮಿನರಲ್ ವಾಟರ್) ಹೆಸರಿನಲ್ಲಿ ವ್ಯಕ್ತಿಯೋರ್ವ ಉತ್ತರ ಪ್ರದೇಶ ನಿವಾಸಿಯೋರ್ವನನ್ನು ಸೇರಿಸಿ ಕೊಂಡು ಜನರನ್ನು ವಂಚಿಸುತ್ತಿರುವುದಾಗಿ ಸ್ಥಳೀಯರಿಂದ ವ್ಯಾಪಕವಾದ ಆರೋಪ ಕೇಳಿ ಬಂದಿದೆ.

ತಲಪಾಡಿ ಸಮೀಪದ ಕೇರಳಕ್ಕೆ ಸೇರಿ ಕೊಂಡಿರುವ ಕಣ್ವ ತೀರ್ಥ ರಸ್ತೆಯಲ್ಲಿ ಖನಿಜ ಜಲ ಉತ್ಪಾಧಿಸಲು ಬೇಕಾದ ಯಾವುದೇ ಮಾನದಂಡವನ್ನು ಕೂಡಾ ಅನುಸರಿಸದೆ ಆರೋಗ್ಯಾಧಿಕಾರಿಗಳ ಜೇಬು ತುಂಬಿಸಿ ಸಾರ್ವಜನಿಕರೆದುರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ರೀತಿಯಲ್ಲಿ ದಂಧೆಯಲ್ಲಿ ನಿರತರಾಗಿರುವುದಾಗಿ ಆರೋಪಿಸಲಾಗಿದೆ. ರಸ್ತೆ ಬದಿಯಲ್ಲಿರುವ ಬಾವಿಯೊಂದರಿಂದ ತೆಗೆದ ನೀರಿಗೆ ಮಿನರಲ್ ವಾಟರ್ ಎಂಬ ಲೇಬಲ್ ಅಂಟಿಸಿ ಕರ್ನಾಟಕ ದ ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಗೆ ವಿತರಿಸುತ್ತಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ದಂಧೆ ನಡೆಯುತಿದ್ದರೂ ಇದೀಗ ಈ ವಿಷಯ ಬೆಳಕಿಗೆ ಬಂದಿದೆ. ಕೆಲವು ವರ್ಷಗಳಿಂದ ಗಡಿನಾಡು ಪ್ರದೆಶದಲ್ಲಿದ್ದ ಐಸ್ ಕ್ರೀಂ ಕಾರ್ಖಾನೆಗೂ ಇದೇ ನೀರು ಸರಬರಾಜು ಆಗುತಿತ್ತೆಂದು ಹೇಳಲಾಗಿದೆ. ಇದರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ಮಂಜೇಶ್ವರ ಗ್ರಾ. ಪಂ. ಕೂಡಾ ಮೌನವಾಗಿರುವುದು ಭಾರೀ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಪತ್ರಿಕೆಯು ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿದಾಗ ಸರಿಯಾದ ಮಾಹಿತಿ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾರೆ.

ಮಂಜೇಶ್ವರ ಅಭಿವೃದ್ದಿ ಕ್ರಿಯಾ ಸಮಿತಿ ಮಹಾ ಸಭೆ

ಮಂಜೇಶ್ವರ ಅಭಿವೃದ್ದಿ ಕ್ರಿಯಾ ಸಮಿತಿ ಮಹಾ ಸಭೆ
ಮಂಜೇಶ್ವರ: ಕಳೆದ ಕೆಲವು ವರ್ಷಗಳಿಂದ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಅಭಿವೃದ್ದಿಗೋಸ್ಕರ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಜೇಶ್ವರ ಅಭಿವೃದ್ದಿ ಕ್ರಿಯಾ ಸಮಿತಿ ಮಹಾ ಸಭೆ ಎಂ ಕೆ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಬಾನುವಾರ ಸಂಜೆ ಜರಗಿತು.

ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಡಾ. ರಮಾನಂದ ಬನಾರಿ ಉದ್ಘಾಟಿಸಿದರು. ಮಂಜೇಶ್ವರ ಪಾವೂರು ಚರ್ಚ್ ಫಾದರ್ ಅಲೋಶಿಯಸ್ ಮುಖ್ಯ ಭಾಷಣ ನೀಡಿದರು.  ಸಮಿತಿಯ ಕಳೆದ ಒಂದು ವರ್ಷದ ವರದಿಯನ್ನು ಬಷೀರ್ ಕನಿಲ ನೀಡಿದರು. ರಾಮ ಕೃಷ್ಣ ಭಟ್ ಸಮಿತಿಯ 2013 ಹಾಗೂ 2014 ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. ಬಿ ವಿ ರಾಜನ್, ಅಬ್ದುಲ್ಲ ಕಜೆ, ಹಮೀದ್ ಹೊಸಂಗಡಿ ಮೊದಲಾದವರು ಮಾತನಾಡಿದರು. 2015 -2016 ನೇ ಸಾಲಿನ ನೋತನ ಪಧಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಯಾಕೂಬ್ ಮೊಯ್ದೀನ್ ಕುಂಜತ್ತೂರು, ಉಪಾಧ್ಯಕ್ಷರುಗಳಾಗಿ ಕಜ ಅಬ್ದುಲ್ಲ, ಬಿ ರಾಜನ್ ಹಾಗೂ ರಶೀದ್. ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಭಟ್, ಕನಿಲ ಬಷೀರ್ ಹಾಗೂ ಮೊಹಮ್ಮದ್. ಕೋಶಾಧಿಕಾರಿಯಾಗಿ ಜೋರ್ಜ್ ಮೊಂತೇರೋ ರವರನ್ನು ಆಯ್ಕೆ ಮಾಡಲಾಯಿತು. ಹರೀಶ್ಚಂದ್ರ ಸ್ವಾಗತಿಸಿ ಯಾಕೂಬ್ ವಂದಿಸಿದರು.
 

Friday, January 9, 2015

ತೂಮಿನಾಡಿನಲ್ಲಿ ಹೊಸ ರೇಶನ್ ಕಾರ್ಡ್ ಗಳ ಅರ್ಜಿಗಳ ಭರ್ತಿಗೆ ಚಾಲನೆ

ತೂಮಿನಾಡಿನಲ್ಲಿ ಹೊಸ ರೇಶನ್ ಕಾರ್ಡ್ ಗಳ ಅರ್ಜಿಗಳ ಭರ್ತಿಗೆ ಚಾಲನೆ
ಕುಂಜತ್ತೂರು,ಜ.9: ನೂತನವಾಗಿ ರಚಿಸಲ್ಪಡುವ ರೇಶನ್ ಕಾರ್ಡ್ ಗಳ ಮಾಹಿತಿಯನ್ನು ದಾಖಲಿಸಲು ಆಯಾ ರೇಶನ್ ಅಂಗಡಿಗಳಲ್ಲಿ ವಿತರಿಸಲಾದ ಅರ್ಜಿಯನ್ನು ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ 2 ನೇ ವಾರ್ಡಿನ ಬಿ ಎಸ್ ಎನ್ ಎಲ್ ಕಚೇರಿಯ ಪಕ್ಕದಲ್ಲಿ ಭರ್ತಿ ಮಾಡಿ ನೀಡಲಾಗುತ್ತದೆ. ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆಯುವಂತೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಮುಶ್ರತ್ ಜಹಾನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಈ ತಿಂಗಳ 17 ನೇ ತಾರೀಕು ಅರ್ಜಿ ಹಿಂತಿರುಗಿಸಲು ಕೊನೆಯ ದಿನಾಂಕವಾಗಿದೆ. 

Wednesday, January 29, 2014

ಮಂಜೇಶ್ವರ್ ಟೈಮ್ಸ್ ನ್ನು ಹೊಸ ವಿನ್ಯಾಸಗಳೊಂದಿಗೆ ಮಂಜೇಶ್ವರವಾಣಿ ಯಾಗಿ ಪರಿವರ್ತನೆಪ್ರಿಯ ಓದುಗರೇ ಮಂಜೇಶ್ವರ ಗ್ರಾಹಕರ ವೇದಿಕೆಯ ವತಿಯಿಂದ ಸುದ್ದಿಗಳನ್ನು ಪ್ರಕಟಿಸಲಾಗುತಿದ್ದ ನಿಮ್ಮ ನೆಚ್ಚಿನ ಮಂಜೇಶ್ವರ್ ಟೈಮ್ಸ್ ನ್ನು ಹೊಸ ವಿನ್ಯಾಸಗಳೊಂದಿಗೆ ಮಂಜೇಶ್ವರವಾಣಿಯಾಗಿ ಪರಿವರ್ತನೆ ಗೊಳಿಸಲಾಗಿದೆ. ದಯವಿಟ್ಟು ಇನ್ನು ಮುಂದಕ್ಕೆ ನಿಮಗೆ ಕ್ಷಣ ಕ್ಷಣದ ಸುದ್ದಿಗಳಿಗಾಗಿ www.manjeshwaravani.co ಗೆ ಕ್ಲಿಕ್ ಮಾಡಿ- ಸಂ- ರಹಿಮಾನ್ ಉದ್ಯಾವರ 

Friday, July 19, 2013

ಮಂಜೇಶ್ವರ:ಈಜಲು ಹೋದ ವಿದ್ಯಾರ್ಥಿ ನೀರು ಪಾಲುಮಂಜೇಶ್ವರ: ಸಹಪಾಠಿಗಳೊಂದಿಗೆ ಈಜುಕೊಳಕ್ಕೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಗುರುವಾರ ಸಂಜೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಮೀಪದಲ್ಲಿ ನಡೆದಿದೆ .ಮೃತ ಪಟ್ಟ ವಿದ್ಯಾರ್ಥಿ ಉಪ್ಪಳ ಮುಸೋಡಿ ನಿವಾಸಿ ಉಪ್ಪಳ ಜಿ ಎಚ್.ಎಸ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶಂಶೀರ್(15) ಎಂಬವನಾಗಿದ್ದಾನೆ. ಬುಧವಾರ ಸಂಜೆ ಸಹಪಾಠಿಗಳೊಂದಿಗೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪಕ್ಕದಲ್ಲಿರುವ ಈಜುಕೊಳಕ್ಕೆ ತಲುಪಿದ ಈತ ಈಜಾಡುತ್ತಿರುವಾಗ ನೀರಲ್ಲಿ ಮುಳುಗಿ ಹೋಗಿದ್ದ ಹುಡುಕಾಡಿ ಮೃತ ದೇಹ ಪತ್ತೆಯಾಗದ ಕಾರಣ ಉಪ್ಪಳ ಅಗ್ನಿಶಾಮಕ ದಳದವರು ತಲುಪಿ ರಾತ್ರಿ 11ಗಂಟೆ ಸುಮಾರಿಗೆ ಮೃತದೇಹವನ್ನು ಮೇಲೆತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Friday, May 24, 2013

ಅಶ್ಲೀಲ ಪಠ್ಯ ಪುಸ್ತಕ: ಪಂಜಾಬ್ ಶಿಕ್ಷಣ ಸಚಿವರಿಂದ ತನಿಖೆಗೆ ಆದೇಶ

 ಮೇ -24-2013

ಚಂಡಿಗಢ: ಅಶ್ಲೀಲ ವಿಷಯಗಳನ್ನು ಹೊಂದಿರುವ ಪಠ್ಯಪುಸ್ತಕಗಳನ್ನು ಹೇಗೆ ಮಂಜೂರು ಮಾಡಲಾಯಿತೆಂಬ ಕುರಿತು ತನಿಖೆ ನಡೆಸುವಂತೆ ಪ್ರಾಥಮಿಕ ಶಿಕ್ಷಣ ಕಾರ್ಯದರ್ಶಿಗೆ ಆದೇಶ ನೀಡಲಾಗಿದೆಯೆಂದು ಪಂಜಾಬಿನ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ ಮಹಾ ನಿರ್ದೇಶಕ ಕಹನ್ ಸಿಂಗ್ ಪನ್ನು ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ಬಳಿಕ ಕಳುಹಿಸಲಾದ ಪಠ್ಯ ಪುಸ್ತಕಗಳು ಅಶ್ಲೀಲ ವಿಚಾರ ಒಳಗೊಂಡಿದ್ದು, ಕಳಪೆ ಮಟ್ಟದವುಗಳಾಗಿವೆ. ಅವು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲವು ಎಂಬುದನ್ನು ಶಿಕ್ಷಣ ಸಚಿವರು ಮನಗಂಡಿದ್ದಾರೆ. ಶೇ.70 ಪಠ್ಯ ಪುಸ್ತಕಗಳು ಕಳಪೆಯಾಗಿದ್ದು, ಸಂಪೂರ್ಣ ಅಪ್ರಸ್ತುತವಾಗಿವೆಯೆಂದು ಅವರು ಅಭಿಪ್ರಾಯಿಸಿದ್ದಾರೆಂದು ಶಿಕ್ಷಣ ಇಲಾಖೆಯ ವಕ್ತಾರರೊಬ್ಬರು ಹೇಳಿದ್ದಾರೆ.
ಭವಿಷ್ಯದಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕಗಳನ್ನು ಅಂತಿಮಗೊಳಿಸುವ ಮೊದಲು ಅತ್ಯಂತ ಎಚ್ಚರ ವಹಿಸುವಂತೆ ಸಚಿವ ಮಲುಕಾ ಭಾಷಾ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಭಾಷಾ ಇಲಾಖೆಯ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ಒಂದನ್ನು ಜಾರಿಗೊಳಿಸಿದ್ದು, 15 ದಿನಗಳೊಳಗೆ ಸ್ಪಷ್ಟೀಕರಣ ನೀಡುವಂತೆ ಕೇಳಲಾಗಿದೆಯೆಂದು ವಕ್ತಾರರು ತಿಳಿಸಿದ್ದಾರೆ.

ವಿಷಯದ ತನಿಖೆಗೆ ಪ್ರಾಥಮಿಕ ಶಿಕ್ಷಣದ ಪ್ರಧಾನ ಕಾರ್ಯದರ್ಶಿಯನ್ನು ನಿಯೋಜಿಸಲಾಗಿದೆ. ಈ ಪುಸ್ತಕಗಳನ್ನು ಬಿಡುಗಡೆಗೊಳಿಸಲು ಕಾರಣರಾದ ಎಲ್ಲ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆಯೆಂದು ಅವರು ಹೇಳಿದ್ದಾರೆ.

ಲಂಡನ್‌ನಲ್ಲಿ ನಡುಬೀದಿಯಲ್ಲೇ ಯೋಧನ ಬರ್ಬರ ಹತ್ಯೆ ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಿದ ಬ್ರಿಟಿಶ್ ಸರಕಾರ

ಲಂಡನ್‌ನಲ್ಲಿ ನಡುಬೀದಿಯಲ್ಲೇ ಯೋಧನ ಬರ್ಬರ ಹತ್ಯೆ ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಿದ ಬ್ರಿಟಿಶ್ ಸರಕಾರ
 ಮೇ -24-2013

ಇಬ್ಬರು ಹಂತಕರಿಗೆ ಪೊಲೀಸರ ಗುಂಡೇಟು
ಲಂಡನ್, ಮೇ 23: ಇಲ್ಲಿನ ಸೇನಾ ನೆಲೆಯೊಂದರ ಸಮೀಪದ ರಸ್ತೆಯಲ್ಲಿ ಸೈನಿಕನೊಬ್ಬನನ್ನು ಹಾಡುಹಗಲೇ ಇಬ್ಬರು ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಗುರುವಾರ ನಡೆದಿದೆ.ಯೋಧನ ಹತ್ಯೆಯನ್ನು ಕಟುವಾದ ಪದಗಳಲ್ಲಿ ಖಂಡಿಸಿರುವ ಬ್ರಿಟಿಶ್ ಪ್ರಧಾನಿ ಡೇವಿಡ್ ಕೆಮರೂನ್, ಇದೊಂದು ರಾಜಕೀಯ ಪ್ರೇರಿತ ದಾಳಿಯೆಂದು ಹೇಳಿದ್ದಾರೆ.
ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಹಂತಕರಿಬ್ಬರನ್ನೂ ಪೊಲೀಸರು ಗುಂಡಿಕ್ಕಿ ಗಾಯಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಸ್ಥಳೀಯ ಸುದ್ದಿಸಂಸ್ಥೆಗಳು ಇದೊಂದು ಭಯೋತ್ಪಾದಕ ದಾಳಿಯೆಂದು ಬಣ್ಣಿಸಿವೆ. ಲಂಡನ್‌ನಲ್ಲಿ ಯೋಧನ ಹತ್ಯೆಯ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ಕ್ಯಾಮರೂನ್ ತನ್ನ ಫ್ರಾನ್ಸ್ ಪ್ರವಾಸವನ್ನು ಮೊಟಕುಗೊಳಿಸಿ ಲಂಡನ್‌ಗೆ ವಾಪಾಸಾದರು ಹಾಗೂ ರಾಷ್ಟ್ರೀಯ ಭದ್ರತಾ ಸಮಿತಿಯ ತುರ್ತು ಸಭೆಯನ್ನು ಕರೆದರು.
ಫ್ರಾನ್ಸ್ ಪ್ರವಾಸದಲ್ಲಿದ್ದ ಕ್ಯಾಮರೂನ್ ಬ್ರಿಟನ್ ಯೋಧನ ಬರ್ಬರ ಹತ್ಯೆಗೆ ಅಘಾತ ವ್ಯಕ್ತಪಡಿಸುತ್ತಾ, ‘‘ ಇದೊಂದು ಅತ್ಯಂತ ಹೇಯವಾದ ಅಪರಾಧವಾಗಿದೆ’’ ಎಂದರು. ಈ ಪ್ರಕರಣದ ಹಿಂದಿರುವ ಸತ್ಯಾಂಶಗಳನ್ನು ತ್ವರಿತವಾಗಿ ಕಂಡುಹಿಡಿಯಲು ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಆದರೆ ಇದೊಂದು ಭಯೋತ್ಪಾದಕ ದಾಳಿಯಾಗಿರುವ ಬಗ್ಗೆ ಪ್ರಬಲವಾದ ಸುಳಿವುಗಳು ಲಭಿಸಿವೆಯೆಂದು ಅವರು ಹೇಳಿದರು.
ಯೋಧನ ಹತ್ಯೆಯ ಬಳಿಕ ಪೊಲೀಸರು ಘಟನೆ ನಡೆದ ಸ್ಥಳವಾದ ನೈಋತ್ಯ ಲಂಡನ್‌ನ ವೂಲ್‌ವಿಚ್ ಪ್ರದೇಶಕ್ಕೆ ದಿಗ್ಬಂಧನ ವಿಧಿಸಿದ್ದಾರೆ ಹಾಗೂ ಪೊಲೀಸ್ ಪಡೆಯ ಹೆಲಿಕಾಪ್ಟರ್ ಆ ಪ್ರದೇಶದ ಸುತ್ತಲೂ ಗಸ್ತು ತಿರುಗುತ್ತಿವೆ. ಹಾಡುಹಗಲೇ ನಡೆದ ಈ ಬರ್ಬರ ಹತ್ಯೆಯನ್ನು ಪ್ರತ್ಯಕ್ಷವಾಗಿ ಕಂಡ ವ್ಯಕ್ತಿಯೊಬ್ಬ ತನ್ನ ವಿಡಿಯೋದಲ್ಲಿ ಚಿತ್ರೀಕರಿಸಿದ ಘಟನೆಯ ದೃಶ್ಯಾವಳಿಯನ್ನು ಬ್ರಿಟನ್‌ನ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದೆ. ಘಟನೆಯ ಸ್ಥಳದಲ್ಲಿ ಹಂತಕನೊಬ್ಬ ರಕ್ತಸಿಕ್ತವಾದ ಚೂರಿಯೊಂದನ್ನು ಕೈಯಲ್ಲಿ ಹಿಡಿದುಕೊಂಡಿರುವ ದೃಶ್ಯವನ್ನು ಅದು ಪ್ರಸಾರ ಮಾಡಿದೆ.
ರೋಷತಪ್ತನಾಗಿದ್ದಂತೆ ಕಂಡುಬಂದ ಹಂತಕನು ‘‘ಈ ಕೃತ್ಯವನ್ನು ಮಹಿಳೆಯರು ಕೂಡಾ ನೋಡುವಂತಾದುದಕ್ಕೆ ತಾನು ಕ್ಷಮೆಯಾಚಿಸುತ್ತೇನೆ. ನಮ್ಮ ನಾಡಿನಲ್ಲಿ ನಮ್ಮ ಮಹಿಳೆಯರು ಕೂಡಾ ಇಂತಹದೇ ದೃಶ್ಯಗಳನ್ನು ನೋಡುತ್ತಿರುತ್ತಾರೆ’’ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ.
‘‘ ನೀವು ಸುರಕ್ಷಿತರಲ್ಲ. ನಿಮ್ಮ ಸರಕಾರವನ್ನು ಪದಚ್ಯುತಗೊಳಿಸಿ. ಅದಕ್ಕೆ ನಿಮ್ಮ ಬಗ್ಗೆ ಕಾಳಜಿಯಿಲ್ಲ’’ ಎಂದು ಅಪರಿಚಿತ ಹಂತಕನು ಬ್ರಿಟಿಶ್ ಜನತೆಗೆ ಬೆದರಿಕೆ ಹಾಕಿರುವುದನ್ನೂ ವಿಡಿಯೋ ಸೆರೆಹಿಡಿದಿದೆ. ಆತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧ ಸಂಘರ್ಷದಲ್ಲಿ ತೊಡಗಿರುವ ಅಮೆರಿಕ ನೇತೃತ್ವದ ಮೈತ್ರಿಪಡೆಯಲ್ಲಿ ಬ್ರಿಟಿಶ್ ಸೇನೆಯ ಉಪಸ್ಥಿತಿಯ ಬಗ್ಗೆ ಹೀಗೆ ಪ್ರಸ್ತಾಪ ಮಾಡಿರಬೇಕೆಂದು ಶಂಕಿಸಲಾಗಿದೆ.
ಪೊಲೀಸ್ ಗುಂಡೆಸೆತದಿಂದ ಗಾಯಗೊಂಡ ಇಬ್ಬರೂ ಹಂತಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಲಂಡನ್‌ನ ಸೇನಾಪಾಳಯದ ಬಳಿ ಬ್ರಿಟಿಶ್ ಯೋಧನ ಹತ್ಯೆಗೈದ ಇಬ್ಬರು ಹಂತಕರಲ್ಲಿ ಕನಿಷ್ಠ ಪಕ್ಷ ಒಬ್ಬನಾದರೂಆತ ಬ್ರಿಟನ್‌ನಲ್ಲಿ ಜನಿಸಿದ ನೈಜೀರಿಯನ್ ವಂಶಜನೆಂದು ಬ್ರಿಟಿಶ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆಸಿದವರಲ್ಲಿ ಒಬ್ಬಾತ 28 ವರ್ಷ ವಯಸ್ಸಿನವನಾಗಿದ್ದು, ಆತನ ಹೆಸರು ಮೈಕೆಲ್ ಅಡೆಬೊಲಾಜೊ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಹಂತಕರಿಬ್ಬರೂ ನೈಜೀರಿಯನ್ ಮೂಲದ ಕ್ರೈಸ್ತರಾಗಿದ್ದು, ಅವರು ಇಸ್ಲಾಂಗೆ ಮತಾಂತರಗೊಂಡಿದ್ದರೆಂದು ಬ್ರಿಟಿಶ್ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಪೊಲೀಸರು ಪೂರ್ವ ಬ್ರಿಟನ್‌ನ ಲಿಂಕನ್ ನಗರದ ಸಮೀಪದ ಗ್ರಾಮವೊಂದರಲ್ಲಿರುವ ಆತನ ಕುಟುಂಬಿಕರ ಮನೆಯ ಮೇಲೆ ದಾಳಿ ನಡೆಸಿತು.

ಸೌದಿ ಅರೇಬಿಯ: 27 ಸಾವಿರ ಭಾರತೀಯರಿಂದ ನಿರ್ಗಮನ ದಾಖಲೆಗೆ ಅರ್ಜಿ


ಮೇ -24-2013

ರಿಯಾದ್: ಕೊಲ್ಲಿ ಸಾಮ್ರಾಜ್ಯದಲ್ಲಿ ‘ನಿತಾಕತ್’ ಕಾನೂನು ಜಾರಿಗೊಂಡ ಬಳಿಕ ಸೌದಿಯಿಂದ ತೆರಳಲು ತನ್ನ ನಾಗರಿಕರಿಗೆ ಅನುಕೂಲವಾಗುವಂತೆ ಭಾರತ ಸರಕಾರವು ಇದೀಗ ದ್ವಿತೀಯ ಹಂತದಲ್ಲಿ 27 ಸಾವಿರಕ್ಕೂ ಅಧಿಕ ತುರ್ತು ಪ್ರಮಾಣ ಪತ್ರಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.
ರಿಯಾದ್‌ನಲ್ಲಿರುವ ಭಾರತೀಯ ದೂತಾವಾಸ ಹಾಗೂ ಸೌದಿ ಅರೇಬಿಯದಲ್ಲಿರುವ ಇತರ ಸಂಗ್ರಹ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿರುವ ಭಾರತೀಯರಿಗೆ ಎರಡನೆ ಹಂತ ತುರ್ತು ಪ್ರಮಾಣ ಪತ್ರ(ಇಸಿ)ಗಳ ಪರಿಶೀಲನೆ ಹಾಗೂ ವಿತರಣೆ ಪ್ರಕ್ರಿಯೆಗೆ ಸಂಬಂಧಿಸಿ ಭಾರತೀಯ ದೂತಾವಾಸವು ಪಟ್ಟಿಯೊಂದನ್ನು ಪ್ರಕಟಿಸಿದೆ.
‘‘ಪ್ರಸಕ್ತ ಘೋಷಿಸಲಾಗಿರುವ ಎರಡನೆ ಹಂತದ ತುರ್ತು ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ರಿಯಾದ್‌ನಲ್ಲಿ 24 ಸಾವಿರ ಅರ್ಜಿಗಳು ಹಾಗೂ ಪೂರ್ವ ಪ್ರಾಂತದಲ್ಲಿ 3,700ಕ್ಕೂ ಅಧಿಕ ಅರ್ಜಿಗಳು ಬಂದಿವೆ’’ ಎಂದು ದೂತಾವಾಸವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮೊದಲ ಹಂತದಲ್ಲಿ ಸೌದಿ ಅರೇಬಿಯದಲ್ಲಿರುವ ಸಂಗ್ರಹ ಕೇಂದ್ರಗಳಲ್ಲಿ 15 ಸಾವಿರ ತುರ್ತು ಪ್ರಮಾಣಪತ್ರ(ಇಸಿ) ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದೂ ಅದು ಹೇಳಿದೆ.
ಸೌದಿಯಲ್ಲಿ ‘ನಿತಾಕತ್’ ಕಾನೂನು ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಾರತೀಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದು, ಈಗಾಗಲೇ 60 ಸಾವಿರಕ್ಕೂ ಹೆಚ್ಚು ಮಂದಿ ನಿರ್ಗಮನ ತುರ್ತು ಪ್ರಮಾಣ ಪತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ.

‘ನಿತಾಕತ್’ ಕಾನೂನಿನನ್ವಯ ಸೌದಿಯ ಕಂಪೆನಿಗಳು ಉದ್ಯೋಗ ನೀಡಿಕೆಯಲ್ಲಿ ಶೇಕಡ 10ರಷ್ಟನ್ನು ಸೌದಿ ರಾಷ್ಟ್ರೀಯರಿಗೆ ಕಡ್ಡಾಯವಾಗಿ ಮೀಸಲಿಡಬೇಕಾಗಿದೆ. ಸೌದಿಯ ವಿದೇಶಾಂಗ ಸಚಿವ ಯುವರಾಜ ಸೌದ್ ಅಲ್ ಫೈಝಲ್ ಆಹ್ವಾನದ ಮೇರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಶಿದ್ ಶುಕ್ರವಾರ ಸೌದಿ ಅರೇಬಿಯಕ್ಕೆ ತೆರಳಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸೌದಿಗೆ ಭೇಟಿ ನೀಡುತ್ತಿದ್ದಾರೆ. ಮೇ 24ರಿಂದ 27ರವರೆಗೆ ತಮ್ಮ ಪ್ರವಾಸದ ವೇಳೆ ಸಲ್ಮಾನ್ ಖುರ್ಶಿದ್, ಹಲವು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

2008ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದ ವೇಳೆ ಪ್ರಣವ್ ಮುಖರ್ಜಿಯವರು ಗಲ್ಫ್ ಪ್ರವಾಸ ಕೈಗೊಂಡಿದ್ದರು. ಸೌದಿ ಅರೇಬಿಯಕ್ಕೆ ತೆರಳಿರುವ ಭಾರತದ ವಿದೇಶಾಂಗ ಸಚಿವರು ಅಲ್ಲಿನ ತಮ್ಮ ಸೋದ್ಯೋಗಿಯೊಂದಿಗೆ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿ ಮಾತುಕತೆ ನಡೆಸಲಿದ್ದಾರೆ. ಸೌದಿಯ ಮುಖಂಡರೊಂದಿಗಿನ ಮಾತುಕತೆಯ ವೇಳೆ ‘ನಿತಾಕತ್’ ವಿಚಾರವಾಗಿಯೂ ಅವರು ಪ್ರಸ್ತಾಪಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ಐಪಿಎಲ್ ಬೆಟ್ಟಿಂಗ್ ಹಗರಣ: ಶ್ರೀನಿವಾಸನ್ ಅಳಿಯನಿಗೆ ಸಮನ್ಸ್


ಮೇ -24-2013

ಮುಂಬೈ, ಮೇ 23: ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿಕೊಂಡಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅಳಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುನಾಥ್ ಮೈಯಪ್ಪನ್‌ಗೆ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕಳುಹಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ಮೊದಲು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರ ಮುಂದೆ ಹಾಜರಾಗುವಂತೆ ಗುರುನಾಥ್ ಮೈಯಪ್ಪನ್‌ಗೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಬೆಟ್ಟಿಂಗ್ ಹಗರಣದಲ್ಲಿ ಪೊಲೀಸರ ವಶದಲ್ಲಿರುವ ಬಾಲಿವುಡ್ ಸ್ಟಾರ್ ವಿಂದೂ ಅಲಿಯಾಸ್ ವೀರೇಂದ್ರ ದಾರಾಸಿಂಗ್ ರಣಧಾವ ವಿಚಾರಣೆಯ ವೇಳೆ ನೀಡಿರುವ ಹೇಳಿಕೆಯಂತೆ ಆತನನ್ನು ಮುಂಬೈ ಕ್ರೈಮ್ ಬ್ರಾಂಚ್‌ನ ಇಬ್ಬರು ಪೊಲೀಸ್ ಅಧಿಕಾರಿಗಳು ತನಿಖೆಗೆ ಗುರುವಾರ ಚೆನ್ನೈಗೆ ಕರೆ ತಂದಿದ್ದರು.
ಇದೇ ವೇಳೆ ಗುರುನಾಥ್ ಮೈಯಪ್ಪನ್ ಅವರ ಬೋಟ್ ಕ್ಲಬ್ ಮನೆಗೆ ತೆರಳಿದ ಪೊಲೀಸರು ಅವರ ಸೆಕ್ರೆಟರಿ ಮೂಲಕ ಸಮನ್ಸ್ ಕಳುಹಿಸಿದ್ದಾರೆ ಎಂದು ಮುಂಬೈ ಕ್ರೈಮ್ ಬ್ರಾಂಚ್‌ನ ಜಂಟಿ ಆಯುಕ್ತ ಹಿಮಂಶು ರಾಯ್ ಮಾಹಿತಿ ನೀಡಿದ್ದಾರೆ.

ಬೆಟ್ಟಿಂಗ್ ಹಗರಣದಲ್ಲಿ ತನ್ನ ಹೆಸರು ಕೇಳಿ ಬಂದ ನಂತರ ಗುರುನಾಥ್ ಕಾಣೆಯಾಗಿದ್ದಾರೆ. ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಹೊಸದಿಲ್ಲಿ ಇದ್ದಾರೋ? ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ ಮೇ 26ರಂದು ಕೋಲ್ಕತಾದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾಗಿಯಾಗಲು ಕೋಲ್ಕತಾಗೆ ತೆರಳಿದ್ದಾರೋ ? ಎನ್ನುವ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮೈಯಪ್ಪನ್‌ಗೆ ವಿಂದೂ ಆನೇಕ ಬಾರಿ ಕರೆ ಮಾಡಿರುವ ದಾಖಲೆ ಲಭಿಸಿದೆ.ಈ ಕಾರಣಕ್ಕಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ನನ್ನ ಅತ್ತಿಗೆ ಗೋವು ಸಾಕಿದ್ದು ಮೇ -24-2013
 ನನ್ನ ಅತ್ತಿಗೆ ಗೋವು ಸಾಕಿದ್ದು

ಬಿ. ಎಂ. ಬಶೀರ್

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ಮಾಜಿ ಶಾಸಕ ದಿವಂಗತ ಬಿ. ಎಂ. ಇದಿನಬ್ಬರ ಹಿರಿಯ ಸೊಸೆ) ತನ್ನ ಗಂಡನ ಮನೆಗೆ ಕಾಲಿಡುವಾಗ ಅವರ ಜೊತೆಯಾಗಿ ಬಂದದ್ದು ಒಂದು ಹಸು. ನನ್ನ ಅತ್ತಿಗೆಯ ತಂದೆಯ ಪ್ರಧಾನ ವೃತ್ತಿಯೇ ಗೋಸಾಕಣೆ, ಹೈನುಗಾರಿಕೆಯಾಗಿತ್ತು. ಆದುದರಿಂದ ಅತ್ತಿಗೆ ಬಾಲ್ಯದಿಂದಲೂ ಹಸುಗಳ ಜೊತೆಗೆ ಒಡನಾಟವಿಟ್ಟುಕೊಂಡಿದ್ದರು. ತನ್ನ ಮಗಳನ್ನು ಪತಿಯ ಮನೆಗೆ ಕಳುಹಿಸುವಾಗ ಒಂದು ಹಸುವನ್ನೇ ಮಗಳಿಗೆಂದು ಕೊಟ್ಟಿದ್ದರಂತೆ ಅವರ ತಂದೆ. ತವರು ಮನೆ ಕೊಟ್ಟ ಹಸುವಿನ ಜೊತೆಗೆ ಅವರು ಕವಿ ಇದಿನಬ್ಬರ ಮನೆಯ ಸೊಸೆಯಾದರು.ನಾನು ಕಂಡಂತೆ ಅತ್ತಿಗೆ ಶ್ರಮಕ್ಕೆ ಇನ್ನೊಂದು ಹೆಸರು. (ಅವರ ಹೆಸರು ಆಯಿಶಾ ಎಂದು. ಇದಿನಬ್ಬರ ಹಿರಿಯ ಮಗ ಬಿ.ಎಂ.ಬಾಷಾ ಅವರ ಪತ್ನಿ) ತನ್ನ  ಬದುಕಿನಲ್ಲಿ ಎದುರಾದ ಕಷ್ಟ ಪರಂಪರೆಯನ್ನೆಲ್ಲ ಹಸುಗಳ ಜೊತೆಗೇ ಹಂಚಿಕೊಂಡು ಕಳೆದವರು.
ಗಂಡನ ಮನೆಗೆ ಬಂದ ಆರಂಭದಲ್ಲಿ ಅವರಿಗೆ ಒಂಟಿತನ ಕಾಡಿದಾಗಲೆಲ್ಲ ಅಪ್ಪ ಕೊಟ್ಟ ಹಸುವೇ ಜೊತೆಯಾಗಿತ್ತಂತೆ. ಆಗ ಇದಿನಬ್ಬರು ಶಾಸಕರಾಗಿರುವ ಆರಂಭ. ಶಾಸಕರ ಪುತ್ರನಾಗಿದ್ದರೂ ಪತಿಯೂ ಆರಂಭದ ಜೀವನವನ್ನು ಸಂಕಷ್ಟದಲ್ಲೇ  ಕಳೆದವರು. ಇಂತಹ ಸಂದರ್ಭದಲ್ಲಿ ಅತ್ತಿಗೆ ತನ್ನ ಮನೆಯ ಹಿಂಭಾಗದಲ್ಲಿರುವ ಮೂವತ್ತು ಸೆಂಟ್ಸ್ ಜಾಗದಲ್ಲಿ ಗೋ ಸಾಕಣೆಯ ಕನಸು ಕಂಡರು. ಹೇಗೂ ತಂದೆ ಕೊಟ್ಟಿದ್ದ ಒಂದು ಹಸು ಇತ್ತು.
ಇದರ ಜೊತೆಗೆ ಇನ್ನಷ್ಟು ಹಸುಗಳನ್ನು ತಂದು ಸಾಕಿದರೆ ಹೇಗೆ ಎಂದು ಯೋಚಿಸಿದರಂತೆ. ಹಾಗೆ ಭೂಮಿಗಿಳಿಯಿತು ಅವರ ಗೋಸಾಕಣೆಯ ಕನಸು. ಇದು ಸುಮಾರು 30-40 ವರ್ಷಗಳ ಹಿಂದಿನ ಕತೆ.  ಅವರ ಕನಸು ನಿಧಾನಕ್ಕೆ ಭೂಮಿಯಿಂದೆದ್ದು ಗಿಡವಾಗಿ ಮರವಾಗಿ ಫಸಲು ಬಿಡತೊಡಗಿತು. ಮನೆಯ ಹಿತ್ತಲ ಆ 30 ಸೆಂಟ್ಸ್ ಜಾಗದಲ್ಲಿ ಸುಮಾರು 50 ವಿವಿಧ ತಳಿಯ ಹಸುಗಳನ್ನು ಸಾಕಿ ಉಳ್ಳಾಲದ ಆಸುಪಾಸಿನಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು.
ಒಂದು ಹಂತದಲ್ಲಿ ಪತಿಗೆ ಆರ್ಥಿಕ ಸಂಕಟಗಳು ಎದುರಾದಾಗ ಇವರ ಗೋಸಾಗಾಣೆಯೇ ಇಡೀ ಕುಟುಂಬಕ್ಕೆ ಆಧಾರವಾಗಿದ್ದುದನ್ನು ಅಣ್ಣ ಬಾಷಾ ಅವರು ಹಂಚಿಕೊಳ್ಳುತ್ತಾರೆ. ಇದಿನಬ್ಬರು ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅಲ್ಲಿನ ಖ್ಯಾತ ವೈದ್ಯರೊಬ್ಬರು ದೊಡ್ಡಪ್ಪನೊಂದಿಗೆ ಹಂಚಿಕೊಂಡಿದ್ದರು “ನಾನು ನಿಮ್ಮ ಮನೆಯ ಹಾಲು ಕುಡಿದು ಬೆಳೆದಿದ್ದೇನೆ ಸಾರ್” ಎಂದು. ಅತ್ತಿಗೆಯ ಹಟ್ಟಿಯ ಹಾಲು ಸುತ್ತಮುತ್ತಲೆಲ್ಲ ಅತ್ಯುತ್ತಮ ಹಾಲು ಎಂದು ಹೆಸರಾಗಿದೆ. ಅತ್ಯುತ್ತಮ ಹಾಲೆಂದೂ, ಔಷಧಿಗೆಂದೂ, ನೀರು ಬೆರಸದ ಹಾಲೆಂದೂ ಹೀಗೆ ವಿವಿಧ ಕಾರಣವನ್ನು ಮುಂದಿಟ್ಟು ಹಾಲು ಕೊಳ್ಳುವವರಿದ್ದಾರೆ.
ಈ ದನಗಳ ಜೊತೆಗೆ ಅತ್ತಿಗೆ ನಡೆಸಿದ ಹೋರಾಟ ಸಣ್ಣದೇನೂ ಅಲ್ಲ. ಅತ್ತಿಗೆಯ ಅತಿ ದೊಡ್ಡ ಸಮಸ್ಯೆಯೆಂದರೆ ಜಾಗದ ಕೊರತೆಯಾಗಿತ್ತು. ಅಷ್ಟು ಸಣ್ಣ ಜಾಗದಲ್ಲಿ 60 ಹಸುಗಳನ್ನು ಸಾಕುವುದು ಎಂದರೆ ಸಣ್ಣ ವಿಷಯವಲ್ಲ. ಅದರಲ್ಲೂ ವಿದೇಶಿ ತಳಿಯ ಹಸುಗಳೂ ಇದ್ದವು. ಹಟ್ಟಿಯನ್ನು ಸಂಪೂರ್ಣ ಆಧುನಿಕೀಕರಣಗೊಳಿಸಲಾಗಿತ್ತು. ನಳ್ಳಿ ನೀರು, ಬೆಳಕು ಇತ್ಯಾದಿಗಳೂ ಇದ್ದವು. ಸೆಗಣಿ, ಮೂತ್ರಗಳನ್ನು ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಇದ್ದವು. ಆದರೂ ಸೆಗಣಿಯ ವಾಸನೆ ಅಲ್ಪಸ್ವಲ್ಪ ನೆರೆಹೊರೆಗೆ ತೊಂದರೆ ನೀಡುವುದು ಸಹಜ.
ಮುಖ್ಯವಾಗಿ ಅತ್ತಿಗೆ ಗೋಸಾಕಣೆಯಲ್ಲಿ ಯಶಸ್ವಿಯಾಗಿ  ಕೈತುಂಬಾ ಸಂಪಾದಿಸುತ್ತಿರುವುದೂ ಕೆಲವರಲ್ಲಿ ಹೊಟ್ಟೆ ಕಿಚ್ಚು ಸೃಷ್ಟಿಸಿತ್ತು. ಪರಿಣಾಮವಾಗಿ ಸ್ಥಳೀಯ ಪಂಚಾಯತ್‌ಗಳಿಗೆ, ಪುರಸಭೆಗಳಿಗೆ, ಪರಿಸರ ಮಾಲಿನ್ಯ ವಿಭಾಗಕ್ಕೆ ತಳ್ಳಿ ಅರ್ಜಿಗಳು, ಗುಪ್ತ ದೂರುಗಳು ಹೋಗುವುದು ಹೆಚ್ಚಾಯಿತು. ಆಗಾಗ ಮನೆಗೆ ಅಧಿಕಾರಿಗಳು ದಾಳಿ ನಡೆಸುವುದು ಹಾಗೂ ವ್ಯವಸ್ಥಿತವಾದ ಹಟ್ಟಿಯನ್ನು ನೋಡಿ ಅಧಿಕಾರಿಗಳು ಮೆಚ್ಚಿ ಮರಳಿ ಹೋಗುವುದು ನಡೆದೇ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯೊಬ್ಬರು ಮನೆಯಲ್ಲೇ ಇಷ್ಟರ ಮಟ್ಟಿಗೆ ಹೈನುಗಾರಿಕೆ ನಡೆಸುವುದನ್ನು ತಡೆಯಲು ಯಾವ ಅಧಿಕಾರಿಗಳೂ ಸಿದ್ಧರಿರಲಿಲ್ಲ.
ಎಲ್ಲೂ ಯಶಸ್ವಿಯಾಗದೇ ಇದ್ದಾಗ ಕಿಡಿಗೇಡಿ ಗಳು ಆಗ ಶಾಸಕರಾಗಿದ್ದ ಇದಿನಬ್ಬರಿಗೇ ಅನಾಮಿಕ ಹೆಸರಿನಲ್ಲಿ ಪತ್ರ ಬರೆಯತೊಡಗಿದರು. ತನ್ನ ಮನೆಯವರಿಂದ ಇತರರಿಗೆ ತೊಂದರೆಯಾಗುವುದನ್ನು ಇದಿನಬ್ಬರು ಯಾವತ್ತೂ ಸಹಿಸುತ್ತಿರಲಿಲ್ಲ. ಇದಿನಬ್ಬ ಮತ್ತು ಅವರ ಪುತ್ರ ಬಾಷಾ ಅವರ ಮನೆ ಅಕ್ಕಪಕ್ಕ. ಹಾಗೆ ನೋಡಿದರೆ, ಹಟ್ಟಿಯ ಸೆಗಣಿಯ ವಾಸನೆ ಇದಿನಬ್ಬರ ಮೂಗಿಗೂ ಬಡಿದಿರಬಹುದು.
ಆದರೆ, ಶ್ರಮಕ್ಕೆ ಅಗಾಧ ಬೆಲೆ ನೀಡುತ್ತಿದ್ದವರು ದೊಡ್ಡಪ್ಪ. ಆದುದರಿಂದ ಅವರು ಅದನ್ನು ಮೆಚ್ಚುಗೆಯಿಂದಲೇ ನೋಡುತ್ತಿದ್ದರು. ಆದರೆ ಮನೆಗೇ ತಳ್ಳಿ ಅರ್ಜಿಗಳು, ದೂರು ಅರ್ಜಿಗಳು ಬಂದರೆ ಏನು ಮಾಡುವುದು? ಆಗ ಸ್ವತಃ ಇದಿನಬ್ಬರೇ ಹಿರಿಯ ಮಗನನ್ನ ಕರೆದು ಹಟ್ಟಿಯ ಕುರಿತಂತೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದರಂತೆ. ಈಗ ಮಗನಿಗೆ ಧರ್ಮ ಸಂಕಟ. ಇಂತಹ ಸಂದರ್ಭದಲ್ಲಿ ಇದಿನಬ್ಬರನ್ನು ಮೆಚ್ಚಿಸುವುದು ಹೇಗೆ? ಎನ್ನುವ ಸಮಸ್ಯೆ ಎದುರಾಯಿತು. ಆಗ ಅಣ್ಣ ನನ್ನನ್ನು ಕರೆದರು. ‘ಯಾವುದಾದರೂ ಹಿರಿಯ ಕವಿಗಳು ಗೋವುಗಳ ಕುರಿತಂತೆ ಬರೆದ ಕವಿತೆ ಇದೆಯ?” ಎಂದು ಕೇಳಿದರು.
ನಾನೂ ಆಲೋಚಿಸಿದೆ. ಅಣ್ಣನ ಸಮಸ್ಯೆ ನನಗೆ ಅರ್ಥವಾಯಿತು. ತಕ್ಷಣ ನಾನು ಕುವೆಂಪು ಬರೆದಿರುವ ‘ಗೊಬ್ಬರ’ ಕವಿತೆಯನ್ನು ಅಣ್ಣನಿಗೆ ನೀಡಿದೆ. ಅದರ ವಾಕ್ಯಗಳ ಅರ್ಥಗಳನ್ನು ಕೂಡ ಅದರಲ್ಲಿ ಅಣ್ಣನಿಗೆ ವಿವರಿಸಿದ್ದೆ. ಅಣ್ಣನಿಗೋ ತುಂಬಾ ಸಂತೋಷವಾಯಿತು. ಮುಖ್ಯವಾಗಿ, ಗೊಬ್ಬರದ ಕುರಿತಂತೆ ಹೀನಾಯವಾಗಿ ನೋಡುವ ಜನರನ್ನು ಉದ್ದೇಶಿಸಿ ಕುವೆಂಪು ಬರೆದ ಮೊದಲ ಕವಿತೆ ಅದು. ಒಂದು ರೀತಿಯ ವೊದಲ ಬಂಡಾಯ ಕವಿತೆ.
ಗೊಬ್ಬರದ ಬಗ್ಗೆ ಹೀನಾಯವಾಗಿ ನೋಡುವ ಎಲ್ಲರೂ ಒಂದಲ್ಲ ಒಂದು ದಿನ ಗೊಬ್ಬರವಾಗಲೇಬೇಕು ಎನ್ನುತ್ತಾ, ಗೊಬ್ಬರದ ಪ್ರಯೋಜನಗಳನ್ನು ಕುವೆಂಪು ಆ ಕವಿತೆಯಲ್ಲಿ ಎತ್ತಿ ಹಿಡಿಯುತ್ತಾರೆ. ಅಣ್ಣ ಒಂದು ಪತ್ರದ ಮೂಲಕ ಆ ಕವಿತೆಯನ್ನು ತಂದೆಗೆ ಕಳುಹಿಸಿಕೊಟ್ಟರಂತೆ. ದೊಡ್ಡಪ್ಪನಿಗೆ ಆ ಕವಿತೆ ನೋಡಿ ತುಂಬಾ ಖುಷಿಯಾಯಿತಂತೆ. ಆದರೂ ಆ ಕವಿತೆಯ ಹಿಂದೆ ನಾನು ಇದ್ದೇನೆ ಎನ್ನುವ ಅನುಮಾನ ಅವರಿಗೆ ಕಾಡಿತ್ತು ಎಂದು ನನಗೂ ಗೊತ್ತು. ಆದರೆ ನನ್ನಲ್ಲಿ ಅದನ್ನು ಯಾವತ್ತೂ ಅವರು ಪ್ರಶ್ನಿಸಿರಲಿಲ್ಲ.
ಇದಿನಬ್ಬರು ಅಲ್ಲಿಂದ ಯಾರ ದೂರನ್ನೂ ಕಿವಿಗೆ ಹಾಕುತ್ತಿರಲಿಲ್ಲವಂತೆ. ಇದಿನಬ್ಬರಿಗೆ ತನ್ನ ಸೊಸೆಯ ಕೆಲಸದ ಕುರಿತಂತೆ ಯಾವಾಗಲೂ ಹೆಮ್ಮೆಯಿತ್ತು. ನನ್ನಲ್ಲಿ ಹಲವು ಬಾರಿ ಹೇಳಿದ್ದರು “ನನ್ನ ಹಿರಿಯ ಸೊಸೆ ಇದ್ದಾಳಲ್ಲ. ಅವಳು ನಿನ್ನ ದೊಡ್ಡಮ್ಮನ ಹಾಗೆ, ಬಹಳ ಶ್ರಮಗಾರ್ತಿ. ಸ್ವಾಭಿಮಾನಿ. ನನ್ನ ಹಿರಿಯ ಮಗ ಸುಧಾರಣೆ ಯಾಗುವುದಕ್ಕೆ ಹಿರಿ ಸೊಸೆಯ ಕೊಡುಗೆ ತುಂಬಾ ದೊಡ್ಡದು” ಇದಿನಬ್ಬರ ಪತ್ನಿ ಅಂದರೆ ನನ್ನ ದೊಡ್ಡಮ್ಮನೂ ಶ್ರಮದ ಮೇಲೆ ಅಗಾಧ ನಂಬಿಕೆಯಿಟ್ಟವರು.
ಸೋಮಾರಿಗಳನ್ನು, ತಿಂದುಂಡು ಒರಗುವ ಹೆಂಗಸರನ್ನು ಕಂಡರೆ ಅವರಿಗಾಗುತ್ತಿರಲಿಲ್ಲ. ವೊದಲ ಚುನಾವಣೆಯಲ್ಲಿ ಇದಿನಬ್ಬರು ಸೋತರು. ಅತ್ತ ಸೊಸೈಟಿಯ ಕೆಲಸಕ್ಕೂ ರಾಜೀನಾಮೆ ನೀಡಿದ್ದರು. ಆಗ ತೆಂಗಿನ ನಾರಿನಿಂದ ಹಗ್ಗ ಮಾಡಿ ಮಾರಿ ಇಡೀ ಕುಟುಂಬವನ್ನು ಸಾಕಿ ಬೆಳೆಸಿದವರು ಇದಿನಬ್ಬರ ಪತ್ನಿ. ಅಂದರೆ ನನ್ನ ದೊಡ್ಡಮ್ಮ.ಅಂತೆಯೇ ಅತ್ತಿಗೆಯ ಬದುಕಿನಲ್ಲಿ ಗೋಸಾಕಣೆ ಅವಿನಾಭಾವವಾಗಿ ಬೆಸೆದಿತ್ತು. ಹಣ ಸಿಗುತ್ತದೆ ಎನ್ನುವುದು ಅವರಿಗೆ ಎಂದೂ ಮುಖ್ಯವಾಗಿರಲಿಲ್ಲ. ಅದು ಅವರ ಕುಟುಂಬದಿಂದ ಬಂದ ಬಳುವಳಿ. 
ಇಬ್ಬರು ಕೆಲಸಗಾರರನ್ನು ಇಟ್ಟುಕೊಂಡು ಅವರು ಆ ಹಟ್ಟಿಯನ್ನು ನಡೆಸುತ್ತಿದ್ದಾರೆ. ಇಂದಿಗೂ. ‘ಗೋವುಗಳನ್ನು ಸಂಬಾಳಿಸಬಹುದು. ಕೆಲಸಗಾರರನ್ನು ಸಂಬಾಳಿಸುವುದು ಕಷ್ಟ’ ಎನ್ನುತ್ತಾರೆ ಅತ್ತಿಗೆ. ಯಾಕೆಂದರೆ, ಕೆಲಸಗಾರರು ಈ ಕಷ್ಟದ, ಸೆಗಣಿ ಬಳಿಯುವ ಕೆಲಸಕ್ಕೆ ಹೆಚ್ಚು ಸಮಯ ನಿಲ್ಲುವುದಿಲ್ಲವಂತೆ. ಅದಕ್ಕಾಗಿ ದೂರದ ಊರಿಂದ ಅಂದರೆ ಬಿಜಾಪುರ ಆ ಕಡೆಯ ಕೆಲಸಗಾರರನ್ನು ಬಳಸಿಕೊಳ್ಳುತ್ತಿದ್ದರು. ಅವರೂ ಹೆಚ್ಚು ಸಮಯ ನಿಲ್ಲುತ್ತಿರಲಿಲ್ಲ.
ಅತ್ತಿಗೆಯ ಅತಿ ದೊಡ್ಡ ಸಮಸ್ಯೆಯೆಂದರೆ ಗೋವುಗಳಿಗೆ ಹುಲ್ಲುಗಳನ್ನು ಸಂಗ್ರಹಿಸುವುದು. ಹುಲ್ಲು ಬೆಳೆಸಲು ಅವರ ಹಿತ್ತಲಲ್ಲಿ ಹೆಚ್ಚು ಜಾಗವಿಲ್ಲ. ಗದ್ದೆಯಿಲ್ಲ. ದೂರದಿಂದ ಲೋಡ್‌ಗಟ್ಟಳೆ ಹುಲ್ಲನ್ನು ಕ್ರಯಕ್ಕೆ ತೆಗೆದುಕೊಂಡು ಬರಬೇಕಾಗಿತ್ತು. ಹುಲ್ಲನ್ನು ಹಣಕೊಟ್ಟೇ ತೆಗೆದುಕೊಳ್ಳಬೇಕು. ಅದನ್ನು ಮನೆಯಲ್ಲಿ ಸಂಗ್ರಹಿಸಿಡಬೇಕು. ಸುಮಾರು ೫೦ ದನಗಳಿಗೆ ಅದೆಷ್ಟು ಲೋಡು ಹುಲ್ಲುಗಳನ್ನು ಕೊಂಡರೂ ಸಾಕಾಗುವುದಿಲ್ಲ.
ಹಾಗೆಯೇ ಅವರ ಪತಿಯ ಮೂಲಕ ಬೇರೆ ತರಕಾರಿ ಅಂಗಡಿಗಳ ವೇಸ್ಟ್ ತರಕಾರಿಗಳು, ಅದರ ಸಾಗಾಟದ ಹುಲ್ಲುಗಳು ಇವುಗಳನ್ನೆಲ್ಲ ಬಳಸಿಕೊಂಡು  ಬೇರೆ ಬೇರೆ ರೀತಿಯಲ್ಲಿ ದನದ ಹೊಟ್ಟೆ ತುಂಬಿಸಬೇಕು. ಮುಂಜಾವು ನಾಲ್ಕು ಗಂಟೆಗೆ ಅತ್ತಿಗೆ ಏಳುತ್ತಾರೆ. ಕೆಲಸದವರನ್ನೂ ಎಬ್ಬಿಸಿ, ಈ ಹಟ್ಟಿಯ ಕೆಲಸ ಸಾಗುತ್ತದೆ. ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ಇದನ್ನು ಬಿಡದೆಯೇ ಪಾಲಿಸಿಕೊಂಡು ಬರುತ್ತಿದ್ದಾರೆ. ನಾನು ಕೇಳಿದ್ದೆ “ನಿಮ್ಮ ಹಟ್ಟಿಯಲ್ಲಿ ಹೋರಿಗಳು ಹುಟ್ಟಿದರೆ ಏನು ಮಾಡುತ್ತೀರಿ?”
ಅತ್ತಿಗೆ ಉತ್ತರಿಸುತ್ತಿದ್ದರು “ಏನು ಮಾಡಲಿಕ್ಕೆ ಆಗುತ್ತದೆ. ಹೋರಿಗಳನ್ನು ಇಟ್ಟುಕೊಂಡು ಗದ್ದೆ ಉಳುವುದಕ್ಕೆ ನಮ್ಮಲ್ಲಿ ಗದ್ದೆಯೂ ಇಲ್ಲ. ಈಗ ಯಾರೂ ಗದ್ದೆಗಳನ್ನು ಉಳುವುದಕ್ಕೆ ಹೋರಿಗಳನ್ನು ಬಳಸುವುದೂ ಇಲ್ಲ. ಹಟ್ಟಿಯಲ್ಲೇ ಎಷ್ಟು ಸಮಯ ಹೋರಿಗಳನ್ನಿಟ್ಟು ಹುಲ್ಲು ಹಾಕಿ ಸಾಕಬಹುದು? ಇರುವ ದನಗಳಿಗೇ ಇಲ್ಲಿ ಜಾಗವಿಲ್ಲ. ಒಂದು ಲೋಡ್ ಹುಲ್ಲಿಗೆ ಚಾರ್ಜ್ ಎಷ್ಟಾಗುತ್ತದೆ ಗೊತ್ತುಂಟಾ....? ಹೋರಿ ಕರು ದೊಡ್ಡದಾದ ಮೇಲೆ ಅದನ್ನು ಮಾರುತ್ತೇವೆ...ಹಾಗೆ ಮಾರಿ ಬಂದ ಹಣದಿಂದ ಇರುವ ದನಗಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ”
“ಹುಲ್ಲನ್ನೆಲ್ಲ ಕ್ರಯಕೊಟ್ಟು ತರಬೇಕಲ್ಲ, ದುಬಾರಿಯಾಗುವುದಿಲ್ಲವೆ?” ಎಂದರೆ ಅವರು ಇಲ್ಲ ಎನ್ನುತ್ತಾರೆ. ಅದರ ಹುಲ್ಲು, ಅದರ ಆಹಾರಕ್ಕೆ ಬೇಕಾದ ಉತ್ಪಾದನೆಯನ್ನು ಅವುಗಳೇ ಮಾಡುತ್ತವೆ. ಅದರ ಸೆಗಣಿ, ಮೂತ್ರ ಎಲ್ಲವೂ ಕೃಷಿಕರಿಗೆ ಬೇಕು. ಸೆಗಣಿ, ಮೂತ್ರಗಳನ್ನು ಸಂಗ್ರಹಿಸಿ, ಮಾರಿದರೆ ಬಂದ ಹಣ ಹಸುಗಳಿಗೆ ಬೇಕಾದ ಆಹಾರ ಒದಗಿಸಲು ಭಾಗಶಃ ಸಾಕಾಗುತ್ತದೆ.
ಈ ದನಗಳ ಜೊತೆಗೆ ಒಂದು ರೀತಿಯ ಬಾಂಧವ್ಯವನ್ನೂ ಅತ್ತಿಗೆ ಕಟ್ಟಿಕೊಂಡಿದ್ದಾರೆ. ಒಂದು ಹಸುವಿನ ಜೊತೆಗೆ ಅತ್ತಿಗೆಗೆ ತುಂಬ ಪ್ರೀತಿಯಿತ್ತಂತೆ. ಅದು ಅತ್ತಿಗೆ ಸ್ವತಃ ಆಹಾರ ಕೊಡದೇ ಇದ್ದರೆ ತಿನ್ನುತ್ತಲೇ ಇರುತ್ತಿರಲಿಲ್ಲವಂತೆ. ಅಂತಹ ಸಂದರ್ಭದಲ್ಲೇ, ಅತ್ತಿಗೆ ಕೆಲಸ ಮಾಡುತ್ತಿರುವಾಗ ಬಿದ್ದು ಕಾಲು ಮುರಿದುಕೊಂಡರು. ಆಸ್ಪತ್ರೆ ಸೇರಿದರು. ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲೇ ಇರಬೇಕಾಯಿತು. ಈ ಸಂದರ್ಭದಲ್ಲೇ ಅತ್ತಿಗೆಯ ಆ ಪ್ರೀತಿ ಪಾತ್ರ ಹಸುವಿನ ಆರೋಗ್ಯ ಕೆಟ್ಟಿತು. ಅತ್ತಿಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಹೊತ್ತಿಗೆ ಹಸು ಏನನ್ನೂ ತಿನ್ನದೇ ಸತ್ತೇ ಹೋಯಿತಂತೆ.
“ಕೆಲಸಗಾರರಷ್ಟೇ ನೋಡಿಕೊಂಡರೆ ಸಾಕಾಗುವುದಿಲ್ಲ. ನಾನು ಜೊತೆ ಜೊತೆಯಾಗಿಯೇ ಇರಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ನನಗೂ, ಹಸುಗಳಿಗೂ ಸಮಾಧಾನ” ಎಂದು ಅತ್ತಿಗೆ ಒಮ್ಮೆ ನುಡಿದಿದ್ದರು. ತನ್ನ ಗೋಸಾಕಣೆಯ ಬದುಕಿನ ಬಗ್ಗೆ ನೀನೇನಾದರೂ ಬರೆಯಲು ಕೂತರೆ, ದೊಡ್ಡ ಕಾದಂಬರಿಯಾದೀತು ಎನ್ನುತ್ತಾರೆ ಅತ್ತಿಗೆ. “ಅಣ್ಣ ನಿಮ್ಮ ಗೋಸಾಕಣೆಯಲ್ಲಿ ಹೇಗೆ ಸಹಾಯ ಮಾಡಿದ್ದಾರೆ...” ಎಂದು ಅತ್ತಿಗೆಯನ್ನು ಕೇಳಿದರೆ ಅವರು ತುಂಟತನದಿಂದ ಹೇಳುತ್ತಾರೆ “ಪ್ರತಿ ತಿಂಗಳು ಹಾಲಿನಿಂದ ಬಂದ ದುಡ್ಡನ್ನು ಎಣಿಸುವುದಕ್ಕೆ ಸಹಾಯ ಮಾಡುವುದು ಅವರೇ” ಅತ್ತಿಗೆಯ ಗೋಸಾಕಣೆಯ ಕನಸಿನ ಹಿಂದೆ ಅಣ್ಣನ ಬಲವಾದ ಬೆಂಬಲವಿದೆ. ಅದನ್ನು ಒಂದು ಉದ್ಯಮ ರೂಪಕ್ಕೆ ತಂದದ್ದು ನಿನ್ನ ಅಣ್ಣನೇ ಎಂದು ಅವರು ಹೇಳುತ್ತಾರೆ.
ಒಂದು ರೀತಿಯಲ್ಲಿ ಅತ್ತಿಗೆ ಎಂದೆಂದಿಗೂ ಸ್ವಾವಲಂಬಿಯಾಗಿಯೇ ಬದುಕಿದರು. ಇಂದಿಗೂ ಅವರು ಸ್ವಾವಲಂಬಿಯೇ ಆಗಿದ್ದಾರೆ. ಅದಕ್ಕೆ ಕಾರಣವೇ ಈ ಗೋಸಾಕಣೆ. ಕೆಲಸದವರ ಮೂಲಕ ವೊದಲು ಹಾಲನ್ನು ಮನೆಮನೆಗೆ ಸಾಗಿಸುತ್ತಿದ್ದರು. ಈಗ ಹಾಲನ್ನು ಸಾಗಿಸುವುದಕ್ಕಾಗಿಯೇ ವಾಹನವಿದೆ. ಈ ಗೋಸಾಕಣೆಯಲ್ಲಿ ಬಂದ ದುಡ್ಡಿನಿಂದ ಅವರು ತಮ್ಮ ಕುಟುಂಬಿಕರಿಗೆ ಬಹಳಷ್ಟು ನೆರವಾಗಿದ್ದಾರೆ.
ಪ್ರತಿ ರಮಝಾನ್‌ನಲ್ಲಿ ತಮ್ಮ ಹಣದಿಂದಲೇ, ಕುಟುಂಬಿಕರಿಗೆ ಝಕಾತ್ ನೀಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಬಡ ಕುಟುಂಬಸ್ಥರಿಗೆ  ಬಟ್ಟೆಗಳನ್ನು ಹಂಚುತ್ತಾರೆ. ಈಗ ಅತ್ತಿಗೆಯ ಹಿರಿಯ ಮಗ ಅಮೀರ್ ಅಮೆರಿಕದಲ್ಲಿ ಒಳ್ಳೆಯ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದಾನೆ. ಮಗ ಅಮೆರಿಕಕ್ಕೆ ಹೋಗಿ 15-20 ವರ್ಷಗಳಾಗಿವೆ. ಇನ್ನೊಬ್ಬ ಕಿರಿಯ ಮಗ ಹುರೈರ್ ಮಂಗಳೂರಲ್ಲೇ ಖ್ಯಾತ ಮೀನಿನ ಉದ್ಯಮಿ. ಪತಿಯೂ ಉದ್ಯಮಿ. ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಿದ್ದಾರೆ. ಈಗ ಅತ್ತಿಗೆಗೆ ವಯಸ್ಸಾಗಿದೆ. ಆರೋಗ್ಯವೂ ವೊದಲಿನಂತಿಲ್ಲ. ಆದರೆ ಹಟ್ಟಿಯನ್ನು ಮುಚ್ಚುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ.
“ಕೆಲಸಗಾರರು ಸಿಕ್ಕುವುದಿಲ್ಲ. ದೊಡ್ಡ ಸಮಸ್ಯೆಯಾಗಿದೆ. ಹೀಗೆ ಆದರೆ ಇದ್ದ ಹಸುಗಳನ್ನು ಮಾರಿ, ಹಟ್ಟಿಯನ್ನು ಮುಚ್ಚಬೇಕಾಗುತ್ತದೆ” ಹೀಗೆಂದು ಹಲವು ಬಾರಿ ನನ್ನಲ್ಲಿ ಅತ್ತಿಗೆ ಹೇಳಿದ್ದರು. ಆದರೆ ಈವರೆಗೂ ಹಟ್ಟಿಯನ್ನು ಮುಚ್ಚುವುದಕ್ಕೆ ಅವರಿಂದಾಗಲಿಲ್ಲ. ಆದರೆ ಹಿಂದಿನ ದಿನಗಳಿಗೆ ಹೋಲಿಸಿದರೆ, ಹಟ್ಟಿಯಲ್ಲಿ ದನಗಳ ಸಂಖ್ಯೆ ಕಡಿಮೆಯಾಗಿದೆ. ೬೦ ದನಗಳಿದ್ದಲ್ಲಿ ಇಂದು ಹೆಚ್ಚೆಂದರೆ 15 ದನಗಳಿವೆ.
ಅತ್ತಿಗೆ ಅವರ ಆರೋಗ್ಯ ವೊದಲಿನಂತಿಲ್ಲ. ವಯಸ್ಸೂ ಇದರ ಮೇಲೆ ದಾಳಿಯಿಟ್ಟಿದೆ. ಕೌಟುಂಬಿಕ ಸಮಸ್ಯೆಗಳೂ ಅವರನ್ನು ಕಾಡಿದೆ. ಇದೆಲ್ಲ ಕಾರಣದಿಂದ ಅವರು ಗೋಸಾಕಣೆಯನ್ನು ನಿಲ್ಲಿಸಬೇಕು ಎಂದು ಯೋಚಿಸುತ್ತಿದ್ದಾರೆ. ಮೊನ್ನೆ ಪತಿಯ ಜೊತೆಗೆ ಉಮ್ರಕ್ಕೆಂದು ಮಕ್ಕಾಕ್ಕೆ ಹೊರಟವರು ಫೋನ್‌ನಲ್ಲಿ ಹೇಳಿದ್ದರು “ಇಲ್ಲ ಇನ್ನು ನನ್ನಿಂದ ಸಾಧ್ಯವಿಲ್ಲ. ಕೆಲಸದವರು ಸರಿಯಾಗಿ ಸಿಗುವುದಿಲ್ಲ. ನೋಡಬೇಕು...ಸರಿಯಾಗದಿದ್ದರೆ ಮುಚ್ಚುವುದೇ...”
ಆದರೆ ಅತ್ತಿಗೆಯ ಮನಸ್ಸು ನನಗೆ ಗೊತ್ತು. ತಂದೆ ಕೊಟ್ಟ ಒಂದು ದನದೊಂದಿಗೆ ಮಾವನ ಮನೆಗೆ ಕಾಲಿಟ್ಟರು. ಮಾವ ಗಣ್ಯ ರಾಜಕಾರಣಿ, ಪತಿ ಎಂಎಲ್‌ಎ ಒಬ್ಬರ ಮಗ ಎನ್ನುವ ಯಾವ ಪ್ರತಿಷ್ಠೆಯೂ ಇಲ್ಲದೆ ಸೆಗಣಿ ಬಾಚಿ ತನ್ನ ಬದುಕನ್ನು ಕಟ್ಟಿಕೊಂಡವರು ಅತ್ತಿಗೆ. ಖಾಲಿ ಬದುಕಿಗೆ ಆಸರೆಯಾದ ಈ ಹಸುಗಳಿಲ್ಲದೆ ಸಮಯ ಕಳೆಯುವುದು ಅವರ ಪಾಲಿಗೆ ಅಷ್ಟು ಸುಲಭವಿಲ್ಲ. ಪ್ರತಿ ಕ್ಷಣವೂ ದುಡಿಮೆಯನ್ನೇ ಬದುಕಾಗಿಸಿ ಕೊಂಡ ಅತ್ತಿಗೆಗೆ ಎಲ್ಲಿ ಹೋದರು ನೆನಪು “ತನ್ನ ಹಸುಗಳದ್ದೇ...”. ಅಮೆರಿಕದಲ್ಲಿ ಮಗನ ಜೊತೆಗೆ ಇರಲು  ಹೋದವರು “ನನ್ನ ಹಸುಗಳನ್ನು ಬಿಟ್ಟು ತುಂಬ ಸಮಯ ವಾಯಿತು” ಎಂದು ಚಿಂತೆ ಮಾಡುತ್ತಿದ್ದರು. ಹಜ್‌ಗೆಂದು ಹೋದವರಿಗೂ ಹಸುಗಳದೇ ನೆನಪು. ಹೀಗಿರುವಾಗ ಅತ್ತಿಗೆ ತನ್ನ ಹಟ್ಟಿಯನ್ನು ಮುಚ್ಚುತ್ತಾರೆ ಎನ್ನುವುದನ್ನು ನನಗೆ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.                         

ಭಾರತದ ಹೆಮ್ಮೆ ಅನಂತಮೂರ್ತಿ


 ಮೇ -24-2013

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ಪ್ರಶಸ್ತಿ ಯಾರಿಗೆ ಸಿಗಬಹುದೆನ್ನುವ ಕುತೂಹಲದಲ್ಲಿ ಭಾರತವೂ ಭಾಗಿಯಾಗಿತ್ತು. ಅದಕ್ಕೊಂದು ಮುಖ್ಯ ಕಾರಣವಿತ್ತು. ಈ ಬಾರಿ, ಮ್ಯಾನ್ ಬೂಕರ್ ಪ್ರಶಸ್ತಿಯ ಅಂತಿಮ ಹತ್ತು ಜನರ ಪಟ್ಟಿಯಲ್ಲಿ ಭಾರತದ ಹಿರಿಯ ಲೇಖಕರೊಬ್ಬರ ಹೆಸರಿತ್ತು. ಕನ್ನಡಿಗರೂ ಈ ಬಾರಿ ಮ್ಯಾನ್ ಬೂಕರ್ ಪ್ರಶಸ್ತಿ ಪ್ರಕಟಣೆಯನ್ನು ತುದಿಗಾಲಲ್ಲಿ ನಿಂತು ಕಾಯು ತ್ತಿದ್ದರು. ಅದಕ್ಕೂ ಮಹತ್ತಾದ ಕಾರಣವಿತ್ತು. ಭಾರತವನ್ನು ಪ್ರತಿನಿಧಿಸಿದ್ದ ಆ ಹಿರಿಯ ಲೇಖಕ ಇನ್ನಾರೂ ಅಲ್ಲ. ಅವರು ಕನ್ನಡದ ಹೆಮ್ಮೆಯ ಯು.ಆರ್.ಅನಂತಮೂರ್ತಿ ಆಗಿದ್ದರು.
ಈ ಹಿಂದೆ ಭಾರತೀಯ ಲೇಖಕ ಅರವಿಂದ ಅಡಿಗ ಪಡೆದ ಬೂಕರ್‌ಗೂ ಇದಕ್ಕೂ ಮುಖ್ಯ ವ್ಯತ್ಯಾಸವಿದೆ. ಅದು ಕೃತಿಗೆ ನೀಡುವ ಪ್ರಶಸ್ತಿಯಾಗಿದ್ದರೆ, ಇದು ಲೇಖಕನ ಒಟ್ಟು ಬರಹಗಳು ಹಾಗೂ ಚಿಂತನೆಗಳನ್ನು ಗುರುತಿಸಿ ನೀಡುವ ಪ್ರಶಸ್ತಿ. ಎರಡು ವರ್ಷಕ್ಕೊಮ್ಮೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಲೇಖಕನ ಒಟ್ಟು ಕೃತಿಗಳನ್ನು ಆಧರಿಸಿ, ಈ ಪ್ರಶಸ್ತಿಯನ್ನು ನಿರ್ಧರಿಸಲಾಗುತ್ತದೆ.
ಸುಮಾರು ವರ್ಷಗಳ ಹಿಂದೆ ಭಾರತದ ಖ್ಯಾತ ಲೇಖಕಿ ಮಹಾಶ್ವೇತಾ ದೇವಿಯವರೂ ಈ ಬೂಕರ್ ಸ್ಪರ್ಧಾ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಗೌರವ ಮೊದಲ ಬಾರಿಗೆ ಕನ್ನಡಿಗನೊಬ್ಬನಿಗೆ ದೊರಕಿದೆ. ಅನಂತಮೂರ್ತಿಯವರಿಗೆ ಪ್ರಶಸ್ತಿ ದೊರಕದೆ ಇರಬಹುದು. ಆದರೆ, ಅಂತಿಮ ಪಟ್ಟಿಯಲ್ಲಿ ಹತ್ತು ಜನರಲ್ಲಿ ಗುರುತಿಸಿಕೊಂಡಿರು ವುದು ಸಣ್ಣ ಸಾಧನೆಯೇನೂ ಅಲ್ಲ. ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಚಿಂತನೆ ಯನ್ನು ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ್ದಾರೆ. ಸಕಲ ಭಾರತೀಯರು ಅನಂತ ಮೂರ್ತಿಯವರನ್ನು ಅಭಿನಂದಿಸಬೇಕಾದ ಸಂದರ್ಭ ಇದು.
  
ಅಷ್ಟೇ ಅಲ್ಲ, ತನಗೆ ಸಿಕ್ಕಿದ ಅವಕಾಶವನ್ನು ಅನಂತಮೂರ್ತಿ ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪ್ರಾದೇಶಿಕ ಕನ್ನಡದ ತುತ್ತೂರಿಯನ್ನು ಅವರು ಲಂಡನ್‌ನಲ್ಲಿ ಹಿರಿಯ ಸಾಹಿತಿಗಳ ನಡುವೆ ಮೊಳಗಿಸಿದ್ದಾರೆ. ಇದಕ್ಕಾಗಿ ನಾವು ಅನಂತಮೂರ್ತಿಯವರ ಕುರಿತಂತೆ ಹೆಮ್ಮೆ ಪಡಬೇಕಾಗಿದೆ. 'ಗಾರ್ಡಿಯನ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು, ಶಿವರಾಮ ಕಾರಂತ, ಕುವೆಂಪು ಮೊದಲಾದ ಹಿರಿಯ ಲೇಖಕರನ್ನು ಪ್ರಸ್ತಾಪಿಸಿದ್ದಾರೆ.
ತನ್ಮೂಲಕ, ಅವರು ಇಡೀ ಕನ್ನಡ ಸಾಹಿತ್ಯವನ್ನೇ ವಿಶ್ವದ ಮುಂದಿಟ್ಟರು. ಜೊತೆಗೆ ಕನ್ನಡವೆನ್ನುವ ಪ್ರಾದೇಶಿಕ ಭಾಷೆಯನ್ನು ಅವರು ಅಲ್ಲಿ ಎತ್ತಿ ಹಿಡಿದರು. ''ತೀರಾ ಅನಾರೋಗ್ಯದಿಂದ ನಾನು ಬಳಲುತ್ತಿದ್ದೇನೆ. ಆದರೆ ಈ ಸಮಾರಂಭಕ್ಕೆ ಬರಲೇಬೇಕು ಎಂದು ನಿರ್ಧರಿಸುವುದಕ್ಕೆ ಕಾರಣಗಳಿವೆ. ಮುಖ್ಯವಾಗಿ ಕನ್ನಡವೆನ್ನುವ ಪ್ರಾದೇಶಿಕ ಭಾಷೆಯನ್ನು, ಇಡೀ ಭಾರತೀಯ ಬರಹಗಾರರನ್ನು ಪ್ರತಿನಿಧಿಸಿ ಇಲ್ಲಿರುವುದು ಅತ್ಯಗತ್ಯ ಎನ್ನಿಸಿತು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ'' ಎಂದು ಅವರು ಅಲ್ಲಿ ತನ್ನ ಅಂತರಂಗವನ್ನು ತೋಡಿಕೊಂಡರು.
ಒಂದು ಭಾಷೆ ಮತ್ತು ಅದರೊಳಗಿನ ಸಾಹಿತ್ಯದ ಘನತೆ ಹೆಚ್ಚುವುದು ಇಂತಹ ಲೇಖಕರ ಮೂಲಕ. ಅನಂತಮೂರ್ತಿ ಈ ನಿಟ್ಟಿನಲ್ಲಿ ಕನ್ನಡದ ನಿಜವಾದ ಶಕ್ತಿ. 'ಕನ್ನಡಕ್ಕೆ ಕೇಂದ್ರ ಸರಕಾರ ಯಾಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು' ಎನ್ನುವುದಕ್ಕೆ ಉದಾಹರಣೆಯಾಗಿ ಅನಂತಮೂರ್ತಿಯವರಿದ್ದಾರೆ. ಲಂಡನ್‌ನಲ್ಲಿ ಅನಂತಮೂರ್ತಿಯವರ ಜೊತೆಗೆ ಮಿಂಚಿದುದು ಭಾರತ ಮಾತ್ರವಲ್ಲ, ಕನ್ನಡ ಭಾಷೆಯೂ ಕೂಡ. ಇಡೀ ಜಗತ್ತು ಕನ್ನಡ ಸಾಹಿತ್ಯದ ಕುರಿತು ಕಾದಂಬರಿಕಾರರ ಕುರಿತು ಹೊರಳಿ ನೋಡುವಂತೆ ಮಾಡಿದೆ ಅನಂತಮೂರ್ತಿಯವರ ಸಾಧನೆ.
ಕನ್ನಡದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹರಾಗುವ ಬರಹಗಾರರಿದ್ದಾರೆ. ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಸೇರಿವೆ. ಅವು ಕನ್ನಡದಲ್ಲಿವೆ ಎನ್ನುವ ಕಾರಣಕ್ಕಾಗಿಯಷ್ಟೇ ವಿಶ್ವದ ಕಣ್ಣು ಅವುಗಳ ಮೇಲೆ ಬಿದ್ದಿಲ್ಲ. ದೇವನೂರು ಮಹಾದೇವನವರ 'ಒಡಲಾಳ' ಎನ್ನುವ ಪುಟ್ಟ ಕೃತಿಗೆ ಸಾಟಿಯಾದ ಇನ್ನೊಂದು ಕೃತಿ ಎಲ್ಲಿದೆ? ಕನ್ನಡದ ಗ್ರಾಮೀಣ ಸಾರ ಸರ್ವಸ್ವವನ್ನು ಹೀರಿ ಒಡಮೂಡಿದ ಕೃತಿಯಿದು.
ಲಂಕೇಶ್, ತೇಜಸ್ವಿ, ಬೇಂದ್ರೆ, ಯಶವಂತ ಚಿತ್ತಾಲ, ದೇವನೂರು ಮಹಾದೇವ...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರು ವಿಶ್ವದ ಯಾವ ಲೇಖಕರನ್ನೂ ಸರಿಗಟ್ಟುವಂತಹವರು. ಇಂತಹ ಲೇಖಕರಿದ್ದಾರೆ ಎನ್ನುವುದು ಕನ್ನಡಕ್ಕೆ ಹೆಮ್ಮೆ. ಕನ್ನಡ ಸಾಹಿತ್ಯ ತೋಟದ ಒಂದು ಹೂವಿನ ಗಿಡವಷ್ಟೇ ಅನಂತಮೂರ್ತಿ. ಅನಂತಮೂರ್ತಿಯವರಿಗೆ ವಯಸ್ಸಾಗಿದೆ. ಜೊತೆಗೆ ದೈಹಿಕ ಆರೋಗ್ಯ ಸಂಪೂರ್ಣ ಕೆಟ್ಟಿದೆ.
ಆದರೂ ಅವರನ್ನು ಸಾಹಿತ್ಯ ಚಿರ ಯುವಕ ನನ್ನಾಗಿ ಇನ್ನೂ ಉಳಿಸಿ, ಬೆಳೆಸಿದೆ. ಮುಖದಲ್ಲಿ ಜೀವಂತಿಕೆ, ಬದುಕುವ ಚೈತನ್ಯ ಅವರಲ್ಲಿ ತುಂಬಿ ತುಳುಕುತ್ತಿದೆ. ಅವರ ಸೃಜನ ಶೀಲತೆ ಅವರ ಒಳಗಿನಿಂದ ಬಂದ ಚಿಲುಮೆ ಎನ್ನುವು ದಕ್ಕೆ ಇದೇ ಸಾಕ್ಷಿ. ಅನಾರೋಗ್ಯದ ಸಂದರ್ಭ ದಲ್ಲಿ ಸ್ವಸ್ಥ ಸಮಾಜಕ್ಕಾಗಿ ಸದಾ ಮಿಡಿಯು ತ್ತಿರುವವರು ಅನಂತಮೂರ್ತಿ. ಕಳೆದ ಚುನಾವಣೆಯ ಸಂದರ್ಭದಲ್ಲೂ, ಎಲ್ಲ ಟೀಕೆಗಳಿಗೂ ಸಡ್ಡು ಹೊಡೆದು, ಕೋಮುವಾದಿ ಪಕ್ಷದ ವಿರುದ್ಧ ಎದೆ ಸೆಟೆದು ನಿಂತವರು.
ಇಂದಿನ ಸಂದರ್ಭದಲ್ಲಿ ಅವರದು ಒಂಟಿ ಧ್ವನಿ. ಈ ಧ್ವನಿ ಸಕಲ ಕನ್ನಡಿಗರೊಳಗೂ ಪ್ರತಿಧ್ವನಿಸ ಬೇಕಾದ ಅಗತ್ಯವಿದೆ. ಅವರ ಜೀವಂತಿಕೆ ಕನ್ನಡದ ಹೊಸ ತಲೆಮಾರಿಗೆ ಸ್ಫೂರ್ತಿಯಾಗ ಬೇಕಾದ ಅಗತ್ಯವಿದೆ. ಅನಂತಮೂರ್ತಿ ನೂರ್ಕಾಲ ಬಾಳಲಿ. ಅವರ ಮೂಲಕ ಕನ್ನಡವೂ ಬಾಳಿ, ಬೆಳಗಲಿ.

Monday, May 13, 2013

ಸಿದ್ದರಾಮಯ್ಯ ತೀರಿಸಿಕೊಂಡ ಸೇಡುಸೋಮವಾರ - ಮೇ -13-2013

‘‘ಸೇ ಡಿನ ರಾಜಕಾರಣ ನಡೆಸುವುದಿಲ್ಲ’’ ಎಂದು ಭರವಸೆ ನೀಡಿದ್ದಾರೆ, ನಾಳಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಈ ಮಾತು ಯಾರನ್ನು ಉದ್ದೇಶಿಸಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ಹಂತದಲ್ಲಿ ತನ್ನ ರಾಜಕೀಯ ಹೋರಾಟವನ್ನೆಲ್ಲ ದೇವೇಗೌಡರು ಮತ್ತು ಅವರ ಮಕ್ಕಳ ಕಡೆಗೆ ಕೇಂದ್ರೀಕರಿಸಿದ್ದ ಸಿದ್ದರಾಮಯ್ಯ, ಅಧಿಕಾರ ಕ್ಕೇರುವ ಮುನ್ನ ಪಕ್ವತೆಯ ಮಾತನ್ನಾಡಿದ್ದಾರೆ. ಒಂದು ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಇದ್ದ ದೊಡ್ಡ ಟೀಕೆಯೆಂದರೆ, ಅವರು ತನ್ನ ಶ್ರಮವನ್ನು, ಸಾಮರ್ಥ್ಯವನ್ನು ಕೇವಲ ಗೌಡರು ಮತ್ತು ಅವರ ಮಕ್ಕಳ ವಿರುದ್ಧ ಬಳಸಿ ವ್ಯಯ ಮಾಡುತ್ತಿದ್ದಾರೆ ಎನ್ನುವುದಾಗಿತ್ತು. ರಾಜ್ಯದಲ್ಲಿ ನಿಜವಾದ ನಾಯಕನಾಗಿ ಮೆರೆಯುವ ಶಕ್ತಿ ಮತ್ತು ಸಾಮರ್ಥ್ಯವಿರುವ ಸಿದ್ದರಾಮಯ್ಯ, ತನ್ನೆಲ್ಲ ಮುತ್ಸದ್ದಿತನವನ್ನು ಬೇರೆಡೆಗೆ ವ್ಯಯ ಮಾಡುತ್ತಿದ್ದಾರಲ್ಲ ಎಂದು ಅವರ ಅಭಿಮಾನಿ ಗಳಿಗೆ ಖೇದವಿತ್ತು.
ಕಾಂಗ್ರೆಸ್‌ಗೆ ಸೇರಿದಾಗಲೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಿದ್ದರಾಮಯ್ಯ ಅತಿದೊಡ್ಡ ಅಡ್ಡಿಯಾಗಿದ್ದರು. ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್‌ನೊಳಗೆ ಕೆಲವರು ಕಾದು ಕುಳಿತಿದ್ದರು. ಈ ಬಾರಿ ಏನಾದರೂ ಮೈತ್ರಿ ಸರಕಾರ ನಿರ್ಮಾಣವಾಗಿದ್ದರೆ, ಸಿದ್ದರಾಮಯ್ಯ ಅವರಿಗೆ ದೊಡ್ಡ ಅನ್ಯಾಯ ವಾಗುತ್ತಿತ್ತು. ಕಾಂಗ್ರೆಸ್ ಒಂದು ವೇಳೆ ಜೆಡಿಎಸ್ ನಿಂದ ಸಹಾಯ ಪಡೆಯುವ ಸಂದರ್ಭ ಬಂದರೆ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬಾರದು ಎನ್ನುವುದೇ ಜೆಡಿಎಸ್‌ನ ಮೊದಲ ಬೇಡಿಕೆಯಾಗಿರುತ್ತಿ ತ್ತೇನೋ. ಅಷ್ಟೇ ಅಲ್ಲ, ಆ ಮೈತ್ರಿಯ ಪರಿಣಾಮವಾಗಿ ಸಿದ್ದರಾಮಯ್ಯ ಕಾಂಗ್ರೆಸ್ ನಿಂದಲೂ ಹೊರಗೆ ಹೆಜ್ಜೆಯಿಡುವ ಸಂದರ್ಭ ನಿರ್ಮಾಣವಾಗಿ ಬಿಡುತ್ತಿತ್ತು. ಆದರೆ ಅದೃಷ್ಟವಶಾತ್ ಕಾಂಗ್ರೆಸ್ ಬಹುಮತ ಪಡೆಯಿತು ಮಾತ್ರವಲ್ಲ, ಸಿದ್ದರಾಮಯ್ಯ ಅವರನ್ನು ನಿಜವಾದ ನಾಯಕರಾಗಿ, ಈ ಬಾರಿಯ ಫಲಿತಾಂಶ ಬಿಂಬಿಸಿತು. ಕಳೆದ ಒಂದೆರಡು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ತೀವ್ರವಾಗಿ ತೊಡಗಿಸಿ ಕೊಂಡರು.
ದೇವೇಗೌಡರು ಹೊರತು ಪಡಿಸಿದ ಇತರ ಸಮಸ್ಯೆಗಳನ್ನೂ ಅವರು ಗುರುತಿಸ ತೊಡಗಿದರು. ಮುಖ್ಯವಾಗಿ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯ ಕುರಿತಂತೆ ಅವರು ನಡೆಸಿದ ಹೋರಾಟದ ಫಲವಾಗಿಯೇ ಇಂದು ಸಿದ್ದರಾಮಯ್ಯ ರಾಜ್ಯದಲ್ಲಿ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ. ಸಿದ್ದರಾಮಯ್ಯ ರಾಜಕೀಯವಾಗಿ ದೇವೇಗೌಡರ ಮಕ್ಕಳಿಗಿಂತ ಎಷ್ಟೋ ಎತ್ತರ ಬೆಳೆದಿದ್ದಾರೆ. ಬಹುಶಃ ಇದಕ್ಕಿಂತ ದೊಡ್ಡ ಸೇಡು ಇನ್ನೊಂದಿಲ್ಲ. ಇಂದು ಮುಖ್ಯಮಂತ್ರಿಯಾಗಿ ಕಂಗೊಳಿಸುತ್ತಿರುವುದೇ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ತೀರಿಸಿದ ಅತ್ಯುತ್ತಮ ಸೇಡು. ಇನ್ನೂ ಹಳೆಯದನ್ನೇ ಮನಸ್ಸಿನಲ್ಲಿಟ್ಟು ಕೊಂಡು ರಾಜಕೀಯ ನಡೆಸಿದರೆ ಅದರಿಂದ ಸಣ್ಣಗಾಗುವವರು ಸಿದ್ದರಾಮಯ್ಯ ಅವರೇ ಆಗಿ ದ್ದಾರೆ. ಹಾಗೆಯೇ ಕರಾವಳಿಯಲ್ಲಿ ಇನ್ನೊಂದು ಹೇಳಿಕೆಯನ್ನೂ ನೀಡಿದ್ದರು. ‘‘ನಾನು ಮುಖ್ಯಮಂತ್ರಿಯಾದರೆ ಸಂಘಪರಿವಾರದ ನಾಯಕ ಪ್ರಭಾಕರ ಭಟ್ಟರನ್ನು ಬಂಧಿಸುತ್ತೇನೆ’’ ಎಂಬುದಾಗಿ. ಪ್ರಭಾಕರ ಭಟ್ ಒಂದಲ್ಲ ಒಂದು ದಿನ ಜೈಲು ಸೇರಲೇಬೇಕಾಗಿದೆ.
ಆದರೆ ಸಿದ್ದರಾಮಯ್ಯ ಅದಕ್ಕಾಗಿ ತನ್ನ ಸಮಯ ಮೀಸಲಿಡಬೇಕಾಗಿಲ್ಲ. ಅವರು ಈ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸುಭದ್ರ ಪಡಿಸಿದರೆ ಸಾಕು, ಪ್ರಭಾಕರ ಭಟ್ಟರು ತನ್ನಷ್ಟಕ್ಕೆ ಜೈಲು ಸೇರುತ್ತಾರೆ. ಅಥವಾ ಬಾಲ ಮಡಚಿ ಕಲ್ಲಡ್ಕದ ಬಿಲದಲ್ಲಿ ಅಡಗಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ಯಾವತ್ತೂ ಒಂದು ಸರಕಾರದ ಗುರಿಯಾಗದಿ ರಲಿ. ಕಲ್ಲಡ್ಕ ಪ್ರಭಾಕರ ಭಟ್ಟರೊಬ್ಬರನ್ನು ಜೈಲಿಗೆ ಅಟ್ಟುವುದರಿಂದ ಕರಾವಳಿಯ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಭಟ್ಟರನ್ನು ಜೈಲಿಗೆ ಅಟ್ಟಿದರೆ ಅವರು ಹುತಾತ್ಮರಾಗುತ್ತಾರೆ. ಅವರ ಚೇಲಾಗಳು ಇಂದು ಕರಾವಳಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಮರಿಕೊಂಡಿದ್ದಾರೆ. ಕರಾವಳಿಯನ್ನು ಉದ್ವಿಗ್ನಗೊಳಿಸಲು ಅವರ ಚೇಲಾಗಳಿಗೆ ಒಂದು ನೆಪ ಸಿಗುತ್ತದೆ.
ಇಂದು ಕರಾವಳಿಯಾಗಲಿ, ರಾಜ್ಯದ್ದೇ ಆಗಲಿ ಸಮಸ್ಯೆ ಪ್ರಭಾಕರ ಭಟ್ಟರಲ್ಲ. ಭಟ್ಟರ ಸಮಸ್ಯೆಗೆ ಕರಾವಳಿಯ ಮತದಾರರೇ ಸರಿಯಾದ ಪಾಠ ಕಲಿಸಿದ್ದಾರೆ. ಮತ್ತು ಮುಂದೆಯೂ ಅವರನ್ನು ಕರಾವಳಿಯ ಪ್ರಜ್ಞಾವಂತ ಜನರೇ ನೋಡಿ ಕೊಳ್ಳುತ್ತಾರೆ. ಭಟ್ಟರನ್ನು ಅವರಷ್ಟಕ್ಕೆ ಬಿಡುವುದೇ ಅವರಿಗೆ ನೀಡುವ ಸರಿಯಾದ ಶಿಕ್ಷೆ. ಉಳಿದ ಜವಾಬ್ದಾರಿಯನ್ನು ನಮ್ಮ ಪೊಲೀಸ್ ವ್ಯವಸ್ಥೆಗೆ, ನ್ಯಾಯಾಲಯಕ್ಕೆ ಬಿಡುವುದು ಉತ್ತಮ. ಒಬ್ಬ ಮುಖ್ಯಮಂತ್ರಿ ತಲೆಕೆಡಿಸುವಷ್ಟು ದೊಡ್ಡ ತಲೆ ಅವರೆಂದಿಗೂ ಅಲ್ಲ. ಇಂದು ರಾಜ್ಯದಲ್ಲಿ ಇನ್ನಿತರ ಗಂಭೀರ ಸಮಸ್ಯೆಗಳಿವೆ. ಅಭಿವೃದ್ಧಿಯ ಕುರಿತಂತೆ, ರೈತರ ಕುರಿತಂತೆ ಸಿದ್ದರಾಮಯ್ಯ ತಲೆಕೆಡಿಸಬೇಕು. ಒಬ್ಬ ವ್ಯಕ್ತಿಗಾಗಿ ಅವರ ಶ್ರಮ, ಅವರ ಮುತ್ಸದ್ದಿತನ ಯಾವ ಕಾರಣಕ್ಕೂ ವ್ಯಯವಾಗಬಾರದು. ಒಂದು ವೇಳೆ ಸಂಘ ಪರಿವಾರದ ಕೆಲವು ದುಷ್ಕರ್ಮಿಗಳನ್ನು ನಿಯಂತ್ರಿಸುವ ಉದ್ದೇಶವಿದ್ದರೆ, ಪೊಲೀಸ್ ಠಾಣೆಗಳನ್ನು ಸುಧಾರಿಸಿದರೆ ಆಯಿತು. ಅವರ ಕೆಲಸ ಸುಗಮವಾಗಿ ನಡೆಯುತ್ತದೆ.
ತಳಮಟ್ಟದ ಜನರ ಸಂಕಟಗಳನ್ನು ಅರ್ಥೈಸಲು ಸಿದ್ದರಾಮಯ್ಯ ಅವರಿಗಿಂತ ಯೋಗ್ಯ ನಾಯಕ ಇನ್ನೊಬ್ಬನಿಲ್ಲ. ಆದುದರಿಂದ, ನಾಡಿನ ಅಭಿವೃದ್ಧಿಯನ್ನು ತಳಮಟ್ಟದ ಜನರ ಜೊತೆಗೆ ಮುಂದೆ ಕೊಂಡೊಯ್ಯುವತ್ತ ಮನ ಮಾಡುತ್ತಾರೆ ಎಂದು ರಾಜ್ಯದ ಜನರು ನಂಬಿದ್ದಾರೆ. ಹಾಗೆಯೇ ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನು ನಾಡಿನ ನಾಲ್ಕೂ ದಿಕ್ಕಿಗೆ ವಿಸ್ತರಿಸುವ ಹೊಣೆಗಾರಿಕೆಯೂ ಅವರ ಮುಂದಿದೆ. ಈ ನಿಟ್ಟಿನಲ್ಲಿ ಅವರೊಬ್ಬ ರಿಂದ ಇದು ಸಾಧ್ಯವಾಗದು. ವಿರೋಧ ಪಕ್ಷದಲ್ಲಿರುವ ದೇವೇಗೌಡ, ಯಡಿಯೂರಪ್ಪ ರಂತಹ ಮುತ್ಸದ್ದಿಗಳ ಸಹಕಾರವನ್ನೂ ಅವರು ಪಡೆದುಕೊಳ್ಳಬೇಕಾಗುತ್ತದೆ. ಜೊತೆಗೆ ಈ ನಾಡಿನ ಎಲ್ಲ ವರ್ಗಗಳನ್ನು ಜೊತೆಗೂಡಿಸಿಕೊಂಡು ಮುಂದಕ್ಕೆ ಹೆಜ್ಜೆಯಿಡಬೇಕಾಗುತ್ತದೆ. ಕೇಸರಿ, ಬಿಳಿ, ಹಸಿರು ಈ ಮೂರರ ಸಮಾಗಮ ದಿಂದಷ್ಟೇ ಈ ನಾಡು ಉನ್ನತಿಯೆಡೆಗೆ, ನೆಮ್ಮದಿಯೆಡೆಗೆ ಸಾಗಬಹುದು. ಇಡುವ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರ ಇರಬೇಕಾಗುತ್ತ

Wednesday, May 8, 2013

ವಿಧಾನಸಭಾ ಚುನಾವಣೆ ಫಲಿತಾಂಶ - ಗೆದ್ದ ಅಭ್ಯರ್ಥಿ - ಪಕ್ಷ

 ಬೆಂಗಳೂರು, ಮೇ 8 :ಏಕಪಕ್ಷಕ್ಕೆ ಬಹುಮತ ದೊರಕಿಸಿಕೊಟ್ಟ ಮತದಾರ ಪ್ರಭುವಿಗೆ ನಮೋನ್ನಮಃ. ರಾಜಕೀಯ ಪಂಡಿತರ, ಜ್ಯೋತಿಷಿಗಳ, ಟಿವಿ ಚಾನಲ್ ಸಮೀಕ್ಷೆಗಳ ನಿರೀಕ್ಷೆಯನ್ನು ಮೀರಿ ಕಾಂಗ್ರೆಸ್ ಪಕ್ಷ 14ನೇ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ಇದರ ಶ್ರೇಯಸ್ಸು ಯಾವ ರಾಷ್ಟ್ರೀಯ ನಾಯಕನಿಗೂ ಅಲ್ಲ, ರಾಜ್ಯದ ಯಾವ ನಾಯಕನಿಗೂ ಅಲ್ಲ, ಅನ್ಯ ಪಕ್ಷವನ್ನು ಒಡೆದ ಮುಖಂಡಿನಿಗೂ ಅಲ್ಲ ಮತದಾರ ಪ್ರಭುವಿಗೇ ಸಲ್ಲಬೇಕು. ಹೆಸರಿಲ್ಲದ ಬೋರ್ಡಿನಂತಾಗಿದ್ದ ಭಾರತೀಯ ಜನತಾ ಪಕ್ಷ ಧೂಳಿಪಟವಾಗಿದೆ. ಜಾತ್ಯತೀತ ಜನತಾದಳ ಭಾರೀ ನಿರಾಶೆಯ ಮಡುವಿನಲ್ಲಿ ಮುಳುಗಿದೆ. ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಬಿಜೆಪಿಯ ಮೂರುಮೂರು ಮುಖ್ಯಮಂತ್ರಿಗಳ ನಾಟಕಗಳನ್ನು ನೋಡಿದ್ದ ಮತದಾರರು ಅಂತಿಮವಾಗಿ ಕಾಂಗ್ರೆಸ್ಸನ್ನು ಪಟ್ಟದ ಮೇಲೆ ಭದ್ರವಾಗಿ ಕೂಡಿಸಿದ್ದಾರೆ. ರಾಜ್ಯವನ್ನು ಅತಂತ್ರ ಸ್ಥಿತಿಗೆ ತಲುಪಿಸದ ರಾಜ್ಯದ ಜನರಿಗೆ ಕಾಂಗ್ರೆಸ್ ಆಭಾರಿಯಾಗಿರಬೇಕು. ಭ್ರಷ್ಟಾಚಾರಕ್ಕೆ ತಲೆಬಾಗದಂತೆ, ಅಭಿವೃದ್ಧಿಯ ಮಂತ್ರ ಜಪಿಸಿಕೊಂಡು ರಾಜ್ಯವನ್ನು ಮುನ್ನಡೆಸಬೇಕಾದ ಜವಾಬ್ದಾರಿಯನ್ನು ಕಾಂಗ್ರೆಸ್ ಮೇಲೆ ಹೊರಿಸಲಾಗಿದೆ. ಆ ಜವಾಬ್ದಾರಿಯನ್ನು ಕಾಂಗ್ರೆಸ್ ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಾವಿಗೀಡಾಗಿದ್ದರಿಂದ 223 ಕ್ಷೇತ್ರಗಳಿಗೆ ಮೇ 5ರಂದು ಚುನಾವಣೆ ನಡೆದಿತ್ತು. ಪಿರಿಯಾಪಟ್ಟಣದಲ್ಲಿ ಮೇ 25ರಂದು ಮತದಾನ ನಡೆಯಲಿದ್ದು, ಮೇ 28ರಂದು ಫಲಿತಾಂಶ ಹೊರಬೀಳಲಿದೆ. 14ನೇ ವಿಧಾನಸಭೆಗೆ ನಡೆದಿರುವ ಈ ಮಹಾಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ, ಅವರು ಪ್ರತಿನಿಧಿಸುವ ಕ್ಷೇತ್ರ ಮತ್ತು ಅವರ ಪಕ್ಷದ ಸಂಪೂರ್ಣ ವಿವರಗಳನ್ನು ಈ ಪುಟಗಳಲ್ಲಿ ನೀಡಲಾಗಿದೆ. ಈ ವಿವರಗಳನ್ನು ನಿಮ್ಮ ಮೊಬೈಲಿನಲ್ಲಿಯೂ ನೋಡಬಹುದು. ಅದರ ವಿಳಾಸ ಇಂತಿದೆ : http://m.oneindia.in/kannada/ 2013 ವಿಧಾನಸಭೆ ಚುನಾವಣೆ: ಗೆದ್ದವರ ಪಟ್ಟಿ  ಜಿಲ್ಲೆ ಕ್ಷೇತ್ರ ಗೆದ್ದವರು ಪಕ್ಷ ಬೆಳಗಾವಿ ನಿಪ್ಪಾಣಿ ಜೊಲ್ಲೆ ಶಶಿಕಲಾ ಬಿಜೆಪಿ ಚಿಕ್ಕೋಡಿ-ಸದಲಗಾ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಅಥಣಿ ಲಕ್ಷ್ಮಣ ಸವದಿ ಬಿಜೆಪಿ ಕಾಗವಾಡ ಭರಮಗೌಡ ಕಾಗೆ ಬಿಜೆಪಿ ಕುಡಚಿ ಪಿ. ರಾಜೀವ್ ಬಿಎಸ್ಆರ್ ಕಾಂಗ್ರೆಸ್ ರಾಯಭಾಗ ದುರ್ಯೋಧನ ಐಹೊಳೆ ಬಿಜೆಪಿ ಹುಕ್ಕೇರಿ ಉಮೇಶ್ ಕತ್ತಿ ಬಿಜೆಪಿ ಅರಭಾವಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಗೋಕಾಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಯಮಕನಮರಡಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಬೆಳಗಾವಿ ಉತ್ತರ ಫಿರೋಜ್ ಸೇಠ್ ಕಾಂಗ್ರೆಸ್ ಬೆಳಗಾವಿ ದಕ್ಷಿಣ ಸಂಭಾಜಿ ಪಾಟೀಲ್ ಪಕ್ಷೇತರ ಬೆಳಗಾವಿ ಗ್ರಾಮಾಂತರ ಸಂಜಯ್ ಬಿ ಪಾಟೀಲ ಬಿಜೆಪಿ ಖಾನಾಪೂರ ಅರವಿಂದ ಪಾಟೀಲ ಪಕ್ಷೇತರ ಕಿತ್ತೂರು ಬಸನಗೌಡ ಇನಾಮದಾರ ಕಾಂಗ್ರೆಸ್ ಬೈಲಹೊಂಗಲ ವಿಶ್ವನಾಥ ಪಾಟೀಲ ಕೆಜೆಪಿ ಸವದತ್ತಿ ಯಲ್ಲಮ್ಮ ವಿಶ್ವನಾಥ ಮಾಮನಿ ಬಿಜೆಪಿ ರಾಮದುರ್ಗ ಅಶೋಕ್ ಪಟ್ಟಣ ಕಾಂಗ್ರೆಸ್ ಬಾಗಲಕೋಟೆ ಮುಧೋಳ ಗೋವಿಂದ ಕಾರಜೋಳ ಬಿಜೆಪಿ ತೇರದಾಳ ಉಮಾಶ್ರೀ ಕಾಂಗ್ರೆಸ್ ಜಮಖಂಡಿ ಸಿದ್ದು ನ್ಯಾಮಗೌಡ ಕಾಂಗ್ರೆಸ್ ಬೀಳಗಿ ಜಿ.ಟಿ. ಪಾಟೀಲ ಬಿಜೆಪಿ ಬಾದಾಮಿ ಬಿ.ಬಿ. ಚಿಮ್ಮನಕಟ್ಟಿ ಕಾಂಗ್ರೆಸ್ ಬಾಗಲಕೋಟೆ ಎಚ್.ವೈ. ಮೇಟಿ ಕಾಂಗ್ರೆಸ್ ಹುನಗುಂದ ವಿಜಯಾನಂದ್ ಕಾಶಪ್ಪನವರ್ ಕಾಂಗ್ರೆಸ್ ವಿಜಾಪೂರ ಮುದ್ದೇಬಿಹಾಳ ನಾಡಗೌಡ ಕಾಂಗ್ರೆಸ್ ದೇವರ ಹಿಪ್ಪರಗಿ ಎಎಸ್ ಪಾಟೀಲ ಕಾಂಗ್ರೆಸ್ ಬಸವನ ಬಾಗೇವಾಡಿ ಶಿವಾನಂದ ಎಸ್ ಪಾಟೀಲ ಕಾಂಗ್ರೆಸ್ ಬಬಲೇಶ್ವರ್‌ ಎಂಬಿ ಪಾಟೀಲ್ ಕಾಂಗ್ರೆಸ್ ವಿಜಾಪೂರ ನಗರ ಮಕ್ಬೂಲ್ ಭಗವಾನ್ ಕಾಂಗ್ರೆಸ್ ನಾಗಠಾಣ ರಾಜು ಅಲಗೂರು ಕಾಂಗ್ರೆಸ್ ಇಂಡಿ ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ ಸಿಂಧಗಿ ರಮೇಶ್ ಬಾಳಪ್ಪ ಭೂಸನೂರ ಬಿಜೆಪಿ ಗುಲಬರ್ಗಾ ಅಫಜಲಪುರ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಜೇವರ್ಗಿ ಅಜಯ್ ಸಿಂಗ್ ಕಾಂಗ್ರೆಸ್ ಚಿತ್ತಾಪುರ ಪ್ರಿಯಾಂಕ್ ಎಂ. ಖರ್ಗೆ ಕಾಂಗ್ರೆಸ್ ಸೇಡಂ ಡಾ. ಶರಣಪ್ರಕಾಶ್ ಪಾಟೀಲ ಕಾಂಗ್ರೆಸ್ ಚಿಂಚೋಳಿ ಡಾ. ಉಮೇಶ್ ಜಾಧವ್ ಕಾಂಗ್ರೆಸ್ ಗುಲಬರ್ಗಾ ಗ್ರಾಮಾಂತರ ಜಿ. ರಾಮಕೃಷ್ಣ ಕಾಂಗ್ರೆಸ್ ಗುಲಬರ್ಗಾ ದಕ್ಷಿಣ ಅಪ್ಪು ಗೌಡ ಬಿಜೆಪಿ ಗುಲಬರ್ಗಾ ಉತ್ತರ ಖಮರುಲ್ ಇಸ್ಲಾಂ ಕಾಂಗ್ರೆಸ್ ಆಳಂದ ಭೋಜರಾಜ ರಾಮಚಂದ್ರ ಕೆಜೆಪಿ ಬೀದರ್‌ ಬಸವಕಲ್ಯಾಣ ಮಲ್ಲಿಕಾರ್ಜುನ ಖುಬಾ ಜೆಡಿಎಸ್ ಹುಮನಾಬಾದ ರಾಜಶೇಖರ ಪಾಟೀಲ ಕಾಂಗ್ರೆಸ್ ಬೀದರ್‌ ದಕ್ಷಿಣ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷ ಬೀದರ್‌ ರಹೀಂ ಖಾನ್ ಕಾಂಗ್ರೆಸ್ ಭಾಲ್ಕಿ ಈಶ್ವರ ಖಂಡ್ರೆ ಕಾಂಗ್ರೆಸ್ ಔರಾದ ಪ್ರಭು ಚವ್ಹಾಣ್ ಬಿಜೆಪಿ ರಾಯಚೂರು ರಾಯಚೂರು ಗ್ರಾಮಾಂತರ ತಿಪ್ಪರಾಜು ಬಿಜೆಪಿ ರಾಯಚೂರು ಡಾ| ಎಸ್.ಶಿವರಾಜ್ ಪಾಟೀಲ್ ಜೆಡಿಎಸ್ ಮಾನ್ವಿ ಹಂಪಯ್ಯ ಸಾಹುಕಾರ್ ಬೆಲ್ಲಟಗಿ ಕಾಂಗ್ರೆಸ್ ದೇವದುರ್ಗ‌ ವೆಂಕಟೇಶ್ ನಾಯಕ್ ಕಾಂಗ್ರೆಸ್ ಲಿಂಗಸುಗೂರು ಮಾನಪ್ಪ ವಜ್ಜಲ ಜೆಡಿಎಸ್ ಸಿಂಧನೂರು ಹಂಪನಗೌಡ ಬಾದರ್ಲಿ ಕಾಂಗ್ರೆಸ್ ಮಸ್ಕಿ ಪ್ರತಾಪ ಗೌಡ ಪಾಟೀಲ ಕಾಂಗ್ರೆಸ್ ಕೊಪ್ಪಳ ಕುಷ್ಟಗಿ ದೊಡ್ಡನಗೌಡ ಪಾಟೀಲ ಬಿಜೆಪಿ ಕನಕಗಿರಿ ಶಿವರಾಜ್ ತಂಗಡಗಿ ಕಾಂಗ್ರೆಸ್ ಗಂಗಾವತಿ ಇಕ್ಬಾಲ್ ಅನ್ಸಾರಿ ಜೆಡಿಎಸ್ ಯಲಬುರ್ಗಾ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಕೊಪ್ಪಳ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ ಗದಗ ಶಿರಹಟ್ಟಿ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ಗದಗ ಎಚ್.ಕೆ.ಪಾಟೀಲ ಕಾಂಗ್ರೆಸ್ ರೋಣ ಗುರುಪಾದಗೌಡ ಪಾಟೀಲ ಕಾಂಗ್ರೆಸ್ ನರಗುಂದ ಬಿ.ಆರ್. ಯಾವಗಲ್ ಕಾಂಗ್ರೆಸ್ ಧಾರವಾಡ ನವಲಗುಂದ ಎನ್.ಕೆ.ಕೋನಾರೆಡ್ಡಿ ಜೆಡಿಎಸ್ ಕುಂದಗೋಳ ಸಿ.ಎಸ್. ಶಿವಳ್ಳಿ ಕಾಂಗ್ರೆಸ್ ಧಾರವಾಡ ವಿನಯ್ ಕುಲಕರ್ಣಿ ಕಾಂಗ್ರೆಸ್ ಹುಬ್ಬಳ್ಳಿ - ಧಾರವಾಡ -ಪೂರ್ವ ಅಬ್ಬಯ್ಯ ಪ್ರಸಾದ ಕಾಂಗ್ರೆಸ್ ಹುಬ್ಬಳ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್ ಬಿಜೆಪಿ ಹುಬ್ಬಳ್ಳಿ-ಧಾರವಾಡ-ಪಶ್ಚಿಮ ಅರವಿಂದ್ ಬೆಲ್ಲದ್ ಬಿಜೆಪಿ ಕಲಘಟಗಿ ಸಂತೋಷ್ ಲಾಡ ಕಾಂಗ್ರೆಸ್ ಉತ್ತರ ಕನ್ನಡ ಹಳಿಯಾಳ ಆರ್.ವಿ. ದೇಶಪಾಂಡೆ ಕಾಂಗ್ರೆಸ್ ಕಾರವಾರ ಸತೀಶ್ ಸೈಲ್ ಪಕ್ಷೇತರ ಕುಮಟಾ ದಿನಕರ ಶೆಟ್ಟಿ ಜೆಡಿಎಸ್ ಭಟ್ಕಳ ಮಂಕಾಳ ವೈದ್ಯ ಪಕ್ಷೇತರ ಶಿರ್ಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಯಲ್ಲಾಪುರ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಹಾವೇರಿ ಹಾನಗಲ್ ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ಬಿಜೆಪಿ ಹಾವೇರಿ ರುದ್ರಪ್ಪ ಲಮಾಣಿ ಕಾಂಗ್ರೆಸ್ ಬ್ಯಾಡಗಿ ಬಸವರಾಜಪ್ಪ ಶಿವಣ್ಣವರ್ ಬಿಜೆಪಿ ಹಿರೇಕೆರೂರು ಯು.ಬಿ.ಬಣಕಾರ್ ಕೆಜೆಪಿ ರಾಣೆಬೆನ್ನೂರು ಕೆ.ಬಿ.ಕೋಳಿವಾಡ ಕಾಂಗ್ರೆಸ್ ಬಳ್ಳಾರಿ ಹಡಗಲಿ ಪರಮೇಶ್ವರ ನಾಯಕ್ ಕಾಂಗ್ರೆಸ್ ಹಗರಿಬೊಮ್ಮನಹಳ್ಳಿ ಭೀಮಾ ನಾಯ್ಕ ಜೆಡಿಎಸ್ ಹೊಸಪೇಟೆ-ವಿಜಯನಗರ ಆನಂದ್ ಸಿಂಗ್ ಬಿಜೆಪಿ ಕಂಪ್ಲಿ ಸುರೇಶ್ ಬಾಬು ಬಿಎಸ್ಆರ್ ಕಾಂಗ್ರೆಸ್ ಸಿರುಗುಪ್ಪ ಎಂ.ಬಿ. ನಾಗರಾಜ್ ಕಾಂಗ್ರೆಸ್ ಬಳ್ಳಾರಿ ಗ್ರಾಮಾಂತರ ಬಿ. ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಬಳ್ಳಾರಿ ನಗರ ಅನಿಲ್ ಲಾಡ್ ಕಾಂಗ್ರೆಸ್ ಸಂಡೂರು ಈ ತುಕಾರಾಂ ಕಾಂಗ್ರೆಸ್ ಕೂಡ್ಲಿಗಿ ಬಿ. ನಾಗೇಂದ್ರ ಪಕ್ಷೇತರ ಚಿತ್ರದುರ್ಗ ಮೊಳಕಾಲ್ಮೂರು ನೇರಗುಂಟ್ಲೆ ತಿಪ್ಪೇಸ್ವಾಮಿ ಬಿಎಸ್ಆರ್ ಕಾಂಗ್ರೆಸ್ ಚಳ್ಳಕೆರೆ ರಘುಮೂರ್ತಿ ಟಿ.  ಕಾಂಗ್ರೆಸ್ ಚಿತ್ರದುರ್ಗ ಜಿ.ಎಸ್.ಮಂಜುನಾಥ ಕಾಂಗ್ರೆಸ್ ಹಿರಿಯೂರು ಜಿ. ಸುಧಾಕರ್ ಕಾಂಗ್ರೆಸ್ ಹೊಸದುರ್ಗ ಬಿ.ಜಿ.ಗೋವಿಂದಪ್ಪ ಕಾಂಗ್ರೆಸ್ ಹೊಳಲ್ಕೆರೆ ಎಚ್.ಆಂಜನೇಯ ಕಾಂಗ್ರೆಸ್ ದಾವಣಗೆರೆ ಜಗಳೂರು ಎಚ್.ಪಿ.ರಾಜೇಶ್ ಕಾಂಗ್ರೆಸ್ ಹರಪನಹಳ್ಳಿ ಎಂ.ಪಿ.ರವೀಂದ್ರ ಕಾಂಗ್ರೆಸ್ ಹರಿಹರ ಎಚ್.ಎಸ್.ಶಿವಶಂಕರ್ ಜೆಡಿಎಸ್ ದಾವಣಗೆರೆ ಉತ್ತರ ಮಲ್ಲಿಕಾರ್ಜುನ ಕಾಂಗ್ರೆಸ್ ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಮಾಯಕೊಂಡ ಶಿವಮೂರ್ತಿ ಕಾಂಗ್ರೆಸ್ ಚನ್ನಗಿರಿ ವಡ್ನಾಳ್ ರಾಜಣ್ಣ ಕಾಂಗ್ರೆಸ್ ಹೊನ್ನಾಳಿ ಶಾಂತನಗೌಡ ಕಾಂಗ್ರೆಸ್ ಶಿವಮೊಗ್ಗ ಶಿವಮೊಗ್ಗ ಗ್ರಾಮಾಂತರ ಶಾರದಾ ಪೂರ್ಯನಾಯಕ್ ಜೆಡಿಎಸ್ ಭದ್ರಾವತಿ ಅಪ್ಪಾಜಿ ಎಂ.ಜೆ. ಜೆಡಿಎಸ್ ಶಿವಮೊಗ್ಗ ಕೆ.ಬಿ.ಪ್ರಸನ್ನಕುಮಾರ್ ಕಾಂಗ್ರೆಸ್ ತೀರ್ಥಹಳ್ಳಿ ಕಿಮ್ಮನೆ ರತ್ನಾಕರ ಕಾಂಗ್ರೆಸ್ ಶಿಕಾರಿಪುರ ಬಿಎಸ್ ಯಡಿಯೂರಪ್ಪ ಕೆಜೆಪಿ ಸೊರಬ ಮಧು ಬಂಗಾರಪ್ಪ ಜೆಡಿಎಸ್ ಸಾಗರ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಉಡುಪಿ ಬೈಂದೂರು ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರ ಉಡುಪಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಕಾಪು ವಿನಯ್ ಕುಮಾರ್ ಸೊರ್ಕೆ ಕಾಂಗ್ರೆಸ್ ಕಾರ್ಕಳ ವಿ. ಸುನೀಲ್ ಕುಮಾರ್ ಬಿಜೆಪಿ ಚಿಕ್ಕಮಗಳೂರು ಶೃಂಗೇರಿ ಡಿ.ಎನ್.ಜೀವರಾಜ್ ಬಿಜೆಪಿ ಮೂಡಿಗೆರೆ ಬಿ.ಬಿ. ನಿಂಗಯ್ಯ ಜೆಡಿಎಸ್ ಚಿಕ್ಕಮಗಳೂರು ಸಿ.ಟಿ. ರವಿ ಬಿಜೆಪಿ ತರೀಕೆರೆ ಜಿ.ಎಚ್.ಶ್ರೀನಿವಾಸ್ ಕಾಂಗ್ರೆಸ್ ಕಡೂರು ವೈಎಸ್‌ವಿ ದತ್ತಾ ಜೆಡಿಎಸ್ ತುಮಕೂರು ಚಿಕ್ಕನಾಯಕನಹಳ್ಳಿ ಸಿ.ಬಿ.ಸುರೇಶ್ ಬಾಬು ಜೆಡಿಎಸ್ ತಿಪಟೂರು ಷಡಕ್ಷರಿ ಕಾಂಗ್ರೆಸ್ ತುರುವೇಕೆರೆ ಎಂ.ಟಿ.ಕೃಷ್ಣಪ್ಪ ಜೆಡಿಎಸ್ ಕುಣಿಗಲ್‌ ಡಿ. ನಾಗರಾಜಯ್ಯ ಜೆಡಿಎಸ್ ತುಮಕೂರು ನಗರ ರಫೀಕ್ ಅಹ್ಮದ್ ಕಾಂಗ್ರೆಸ್ ತುಮಕೂರು ಗ್ರಾಮಾಂತರ ಬಿ.ಸುರೇಶ್ ಗೌಡ ಬಿಜೆಪಿ ಕೊರಟಗೆರೆ ಸುಧಾಕರ ಲಾಲ್ ಜೆಡಿಎಸ್ ಗುಬ್ಬಿ ಎಸ್.ಆರ್.ಶ್ರೀನಿವಾಸ ಜೆಡಿಎಸ್ ಶಿರಾ ಟಿ.ಬಿ.ಜಯಚಂದ್ರ ಕಾಂಗ್ರೆಸ್ ಪಾವಗಡ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ ಮಧುಗಿರಿ ಕೆ.ಎನ್. ರಾಜಣ್ಣ ಕಾಂಗ್ರೆಸ್ ಚಿಕ್ಕಬಳ್ಳಾಪುರ ಗೌರಿಬಿದನೂರು ಶಿವಶಂಕರ ರೆಡ್ಡಿ ಕಾಂಗ್ರೆಸ್ ಬಾಗೇಪಲ್ಲಿ ಎಸ್ಎನ್ ಸುಬ್ಬಾರೆಡ್ಡಿ ಪಕ್ಷೇತರ ಚಿಕ್ಕಬಳ್ಳಾಪುರ ಸಿ. ಸುಧಾಕರ್ ಕಾಂಗ್ರೆಸ್ ಶಿಡ್ಲಘಟ್ಟ ಎಂ. ರಾಜಣ್ಣ ಜೆಡಿಎಸ್ ಚಿಂತಾಮಣಿ ಕೃಷ್ಣಾರೆಡ್ಡಿ ಜೆಡಿಎಸ್ ಕೋಲಾರ ಶ್ರೀನಿವಾಸಪುರ ರಮೇಶ್ ಕುಮಾರ್ ಕಾಂಗ್ರೆಸ್ ಮುಳಬಾಗಿಲು ಕೊತ್ತೂರು ಮಂಜುನಾಥ ಪಕ್ಷೇತರ ಚಿಕ್ಕಬಳ್ಳಾಪುರ ಡಾ. ಕೆ.ಸುಧಾಕರ್ ಕಾಂಗ್ರೆಸ್ ಕೆ.ಜಿ.ಎಫ್‌ ರಾಮಕ್ಕ ಬಿಜೆಪಿ ಬಂಗಾರಪೇಟೆ ಎಸ್.ಎನ್. ನಾರಾಯಣಸ್ವಾಮಿ ಕಾಂಗ್ರೆಸ್ ಕೋಲಾರ ವರ್ತೂರು ಪ್ರಕಾಶ್ ಪಕ್ಷೇತರ ಮಾಲೂರು ಮಂಜುನಾಥ ಗೌಡ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ದೇವನಹಳ್ಳಿ ಮುನಿಶಾಮಪ್ಪ ಜೆಡಿಎಸ್ ದೊಡ್ಡಬಳ್ಳಾಪುರ ವೆಂಕಟರಮಣಪ್ಪ ಕಾಂಗ್ರೆಸ್ ನೆಲಮಂಗಲ‌ ಶ್ರೀನಿವಾಸಮೂರ್ತಿ ಜೆಡಿಎಸ್ ರಾಮನಗರ ಮಾಗಡಿ ಎಚ್.ಸಿ. ಬಾಲಕೃಷ್ಣ ಜೆಡಿಎಸ್ ರಾಮನಗರ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಕನಕಪುರ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಚನ್ನಪಟ್ಟಣ‌ ಸಿ.ಪಿ. ಯೋಗೇಶ್ವರ್ ಸಮಾಜವಾದಿ ಪಕ್ಷ ಮಂಡ್ಯ ಮಳವಳ್ಳಿ ಪಿ.ಎಂ.ನರೇಂದ್ರಸ್ವಾಮಿ ಕಾಂಗ್ರೆಸ್ ಮದ್ದೂರು ಡಿ.ಸಿ.ತಮ್ಮಣ್ಣ ಜೆಡಿಎಸ್ ಮೇಲುಕೋಟೆ ಪುಟ್ಟಣ್ಣಯ್ಯ ಸರ್ವೋದಯ ಕರ್ನಾಟಕ ಪಕ್ಷ ಮಂಡ್ಯ‌ ಅಂಬರೀಷ್ ಕಾಂಗ್ರೆಸ್ ಶ್ರೀರಂಗಪಟ್ಟಣ‌ ರಮೇಶ್ ಬಂಡಿಸಿದ್ದೇಗೌಡ ಜೆಡಿಎಸ್ ನಾಗಮಂಗಲ‌ ಚೆಲುವರಾಯಸ್ವಾಮಿ ಜೆಡಿಎಸ್ ಕೆ.ಆರ್‌ .ಪೇಟೆ‌ ನಾರಾಯಣಗೌಡ ಜೆಡಿಎಸ್ ಹಾಸನ ಶ್ರವಣಬೆಳಗೊಳ ಸಿಎನ್ ಬಾಲಕೃಷ್ಣ ಜೆಡಿಎಸ್ ಅರಸೀಕೆರೆ ಶಿವಲಿಂಗೇಗೌಡ ಜೆಡಿಎಸ್ ಬೇಲೂರು ರುದ್ರೇಶ ಗೌಡ ಕಾಂಗ್ರೆಸ್ ಹಾಸನ‌ ಎಚ್ಎಸ್ ಪ್ರಕಾಶ್ ಜೆಡಿಎಸ್ ಹೊಳೆನರಸೀಪುರ‌ ಎಚ್.ಡಿ. ರೇವಣ್ಣ ಜೆಡಿಎಸ್ ಅರಕಲಗೂಡು‌ ಎ ಮಂಜು ಕಾಂಗ್ರೆಸ್ ಸಕಲೇಶಪುರ‌ ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ದಕ್ಷಿಣ ಕನ್ನಡ ಬೆಳ್ತಂಗಡಿ ವಸಂತ ಬಂಗೇರ ಕಾಂಗ್ರೆಸ್ ಮೂಡಬಿದಿರೆ ಅಭಯಚಂದ್ರ ಜೈನ್ ಕಾಂಗ್ರೆಸ್ ಮಂಗಳೂರು ನಗರ ಉತ್ತರ ಮೋಹಿಯುದ್ದಿನ್ ಬಾವಾ ಕಾಂಗ್ರೆಸ್ ಮಂಗಳೂರು ನಗರ ದಕ್ಷಿಣ‌ ಜೆ.ಆರ್.ಲೋಬೋ ಕಾಂಗ್ರೆಸ್ ಮಂಗಳೂರು ಯು.ಟಿ.ಖಾದರ್ ಕಾಂಗ್ರೆಸ್ ಬಂಟ್ವಾಳ ರಮಾನಾಥ ರೈ ಕಾಂಗ್ರೆಸ್ ಪುತ್ತೂರು‌ ಶಕುಂತಲಾ ಶೆಟ್ಟಿ ಕಾಂಗ್ರೆಸ್ ಸುಳ್ಯ ಎಸ್. ಅಂಗಾರ ಬಿಜೆಪಿ ಕೊಡಗು ಮಡಿಕೇರಿ ಅಪ್ಪಚ್ಚು ರಂಜನ್ ಬಿಜೆಪಿ ವೀರಾಜಪೇಟೆ ಕೆ.ಜಿ.ಬೋಪಯ್ಯ ಬಿಜೆಪಿ ಮೈಸೂರು ಪಿರಿಯಾಪಟ್ಟಣ   ಕೃಷ್ಣರಾಜನಗರ     ಹುಣಸೂರು     ಹೆಗ್ಗಡದೇವನಕೋಟೆ ಚಿಕ್ಕಮಾದು ಜೆಡಿಎಸ್ ನಂಜನಗೂಡು     ಚಾಮುಂಡೇಶ್ವರಿ     ಕೃಷ್ಣರಾಜ     ಚಾಮರಾಜ ವಾಸು ಎಚ್. ಕಾಂಗ್ರೆಸ್ ನರಸಿಂಹರಾಜ     ವರುಣ ಸಿದ್ದರಾಮಯ್ಯ ಕಾಂಗ್ರೆಸ್ ಟಿ.ನರಸೀಪುರ ಎಂಸಿ ಸುಂದರೇಶನ್  ಜೆಡಿಎಸ್ ಚಾಮರಾಜನಗರ ಹನೂರು ಆರ್ ನಾಗೇಂದ್ರ ಕಾಂಗ್ರೆಸ್ ಕೊಳ್ಳೇಗಾಲ     ಚಾಮರಾಜನಗರ     ಗುಂಡ್ಲುಪೇಟೆ     ಬೆಂಗಳೂರು ರಾಜರಾಜೇಶ್ವರಿನಗರ     ಶಿವಾಜಿನಗರ ರೋಶನ್ ಬೇಗ್ ಕಾಂಗ್ರೆಸ್ ಶಾಂತಿನಗರ     ಗಾಂಧಿನಗರ ದಿನೇಶ್ ಗುಂಡೂರಾವ್ ಕಾಂಗ್ರೆಸ್ ರಾಜಾಜಿನಗರ ಸುರೇಶ್ ಕುಮಾರ್ ಬಿಜೆಪಿ ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಚಿಕ್ಕಪೇಟೆ ಆರ್.ವಿ. ದೇವರಾಜ್ ಕಾಂಗ್ರೆಸ್ ಕೆ.ಆರ್‌.ಪುರ     ಮಹಾಲಕ್ಷ್ಮಿ ಬಡಾವಣೆ ಗೋಪಾಲಯ್ಯ ಜೆಡಿಎಸ್ ಮಲ್ಲೇಶ್ವರಂ     ಹೆಬ್ಬಾಳ ಜಗದೀಶ್ ಕುಮಾರ್ ಬಿಜೆಪಿ ಪುಲಕೇಶಿನಗರ     ಸರ್ವಜ್ಞ ನಗರ     ಸಿ.ವಿ. ರಾಮನ್‌ ನಗರ     ಗೋವಿಂದರಾಜ ನಗರ ಪ್ರಿಯಕೃಷ್ಣ ಕಾಂಗ್ರೆಸ್ ವಿಜಯನಗರ ಎಂ. ಕೃಷ್ಣಪ್ಪ ಕಾಂಗ್ರೆಸ್ ಬಸವನಗುಡಿ ರವಿ ಸುಬ್ರಮಣ್ಯ ಬಿಜೆಪಿ ಪದ್ಮನಾಭನಗರ ಆರ್ ಅಶೋಕ್ ಬಿಜೆಪಿ ಬಿ.ಟಿ.ಎಂ ಲೇಔಟ್ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಜಯನಗರ ಬಿ.ಎನ್. ವಿಜಯಕುಮಾರ್ ಬಿಜೆಪಿ ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಬಿಜೆಪಿ ಯಲಹಂಕ ಎಸ್.ಆರ್. ವಿಶ್ವನಾಥ ಬಿಜೆಪಿ ಬ್ಯಾಟರಾಯನಪುರ ಕೃಷ್ಣ ಭೈರೇಗೌಡ ಕಾಂಗ್ರೆಸ್ ಯಶವಂತಪುರ ಸೋಮಶೇಖರ ಗೌಡ ಕಾಂಗ್ರೆಸ್ ದಾಸರಹಳ್ಳಿ     ಮಹದೇವಪುರ     ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ ಬಿಜೆಪಿ ಆನೇಕಲ್‌     ಯಾದಗಿರಿ ಸುರಪುರ ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್ ಶಹಾಪೂರ ಗುರು ಪಾಟೀಲ ಕೆಜೆಪಿ ಯಾದಗಿರಿ ಎ.ಬಿ. ಮಾಲಕರೆಡ್ಡಿ ಕಾಂಗ್ರೆಸ್ ಗುರುಮಿಠಕಲ್     ಜಿಲ್ಲಾವಾರು ಫಲಿತಾಂಶ : ಉತ್ತರ ಕನ್ನಡ | ಚಿಕ್ಕಮಗಳೂರು | ಬಳ್ಳಾರಿ

ಕಾಂಗ್ರೆಸಿಗೆ 113: ಖೇಲ್ ಖತಂ - ನಾಟಕ್ ಬಂದ್

  ಬೆಂಗಳೂರು, : ಶೇ. 70ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿ, ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಮತದಾರನಿಗೆ ಮತ್ತೊಮ್ಮೆ ನಮೋ ನಮಃ! ಎಂಥ ಪ್ರಬುದ್ಧ ತೀರ್ಪು ನೀಡಿದ್ದಾನೆ ಮತದಾರ. ನಿಜಕ್ಕೂ ಮತಪ್ರಭು ಅಭಿನಂದನಾರ್ಹ. ಖೇಲ್ ಖತಂ- ನಾಟಕ್ ಬಂದ್: ಚುನಾವಣೆಯಲ್ಲಿ ಕಾಂಗ್ರೆಸ್ ಜತೆಜತೆಗೆ ಮತದಾರನೂ ಗೆಲುವು ಸಾಧಿಸಿದ್ದಾನೆ. ಏಳು ವರ್ಷಗಳ ಕಾಟಕ್ಕೆ/ಮಂಗನಾಟಕ್ಕೆ ಮಂಗಳ ಹಾಡಿದ್ದಾನೆ. ಅಷ್ಟೇ ಅಲ್ಲ ಸದ್ಯಕ್ಕೆ ಅಂತಹ ಕೆಟ್ಟಾಟಗಳ ಪುನರಾವರ್ತನೆಗೂ ಅವಕಾಶ ನೀಡದಂತೆ ಪ್ರಬುದ್ಧನಾಗಿ ಏಕಮೇವ ಪಕ್ಷವನ್ನು 113ರ ಗಡಿ ದಾಟಿಸಿದ್ದಾನೆ. ಲಕೋಟೆ ಮುಖ್ಯಮಂತ್ರಿ: ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಆ ಪಕ್ಷದಲ್ಲಿ ಸಿಎಂ ಮೆಟೀರಿಯಲುಗಳು ಸಾಲುಗಟ್ಟಿ ನಿಂತಿದ್ದಾರೆ. ಹಾಗಾಗಿ ಅಲ್ಲೂ ಒಳಜಗಳಗಳು, ಭಿನ್ನಮತ ಭುಗಿಲೇಳುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ ಪಕ್ಷದ ವರಿಷ್ಠರಂತೆ ಕೈಲಾಗದವರಲ್ಲ. ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿಹಾಕಬಲ್ಲ ಹೈ-ಹೈಕಮಾಂಡ್ ಅದು. ಹಾಗಾಗಿ ನಾಡಿನ ಮುಂದಿನ ಮುಖ್ಯಮಂತ್ರಿ ದಿಲ್ಲಿಯಿಂದ ತೂರಿಬರುವ ಲಕೋಟೆಯಲ್ಲಿ ಈಗಾಗಲೇ ಭದ್ರವಾಗಿ ಕುಳಿತಿರಲೂ ಸಾಕು. ಆದರೆ ವಿಷಯ ಅದಲ್ಲ. ಪಕ್ಷದಿಂದ ಯಾರೆಲ್ಲಾ ಗೆದ್ದಿದ್ದಾರೆ ಎಂದು ನೋಡಿದರೆ ಸಾಲುಸಾಲು ನಾಯಕರೇ ಅಲ್ಲಿ ಗೋಚರಿಸುತ್ತಾರೆ. ಸಚಿವ ಸಂಪುಟಕ್ಕೆ ಘನತೆ, ಗೌರವ ತಂದುಕೊಡಬಲ್ಲ ಅನೇಕ ನಾಯಕರು ಗೆದ್ದುಬಂದಿದ್ದಾರೆ. ಇದೇ ವೇಳೆ, ಮರಮೇಶ್ವರ್/ ಇಬ್ರಾಹಿಂ ಥರದವರು ಸೋತಿರುವುದೂ ಪಕ್ಷಕ್ಕೆ ವರವಾಗಿದೆ. ಇದನ್ನು ಹೇಳಿದ ಮೇಲೆ ಕೆಲವರು ಸೋಲಬಾರದಿತ್ತು ಎಂಬ ಆಶಯವೂ ಮೂಡುತ್ತದೆ. ಆ ಸಾಲಿನಲ್ಲಿ ಕುಮಾರ್ ಬಂಗಾರಪ್ಪ, ಬಿಎಲ್ ಶಂಕರ್ ಅವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಜತೆಗೆ, ಜಾಫರ್ ಷರೀಫ್ ಅವರ ಮನೆಯಿಂದ ಸ್ಪರ್ಧಿಸಿದ್ದ ಇಬ್ಬರೂ ಸೋತಿರುವುದೂ ಪಕ್ಷಕ್ಕೆ ವರವಾಗಿದೆ. ಅತ್ತ ರಾಯಚೂರಿನಲ್ಲಿ ಇತ್ತ ಹೆಬ್ಬಾಳದಲ್ಲಿ ಷರೀಫ್ ಅಳಿಯ/ ಮಗ ಸೋತಿರುವುದು ಕಾಂಗ್ರೆಸ್ಸಿಗೆ ಹಿತಕರವಾಗಿದೆ. ಇಲ್ಲವಾದಲ್ಲಿ ಜಾಫರ್ ಷರೀಫ್ ಪಕ್ಷದಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುತ್ತಿದ್ದರು. ಈಗ ಹೈಕಮಾಂಡ್ 'ಛುಪ್' ಅಂದ್ರೆ ಸಾಕು ಇವರೆಲ್ಲ ಸುಮ್ಮನಾಗುತ್ತಾರೆ. ಅಷ್ಟರ ಮಟ್ಟಿಗೆ ಪಕ್ಷ ಸೇಫ್. ಅದೇ ರೀತಿ ಕೆಎಚ್ ಮುನಿಯಪ್ಪಗೂ ಕೋಲಾರ ಜಿಲ್ಲೆಯಲ್ಲಿ ಸರಿಯಾದ ಟಾಂಗ್ ನೀಡಲಾಗಿದೆ. ಪುತ್ರಿ ರೂಪಾಗೆ ಟಿಕೆಟ್ ನೀಡಲಿಲ್ಲ ಎಂದು ಕಾಂಗ್ರೆಸ್ ಸೋಲಿಗೆ ಹವಣಿಸಿದ್ದಲ್ಲದೆ ಕೋಲಾರ ಜಿಲ್ಲೆಯಲ್ಲಿ ಮೂರ್ನಾಲ್ಕು ಸ್ಥಾನಗಳಿಗೆ ಚ್ಯುತಿ ತಂದರು ಎಂಬ ಆರೋಪವೂ ಅವರ ಮೇಲಿದೆ. ಹಾಗಾಗಿ ಮುನಿಯಪ್ಪ ಫ್ಯಾಕ್ಟರ್ ಸ್ವಯಂ ಕಳಚಿಕೊಳ್ಳಲಿದೆ. ಅದೇ ರೀತಿ ಪ್ರೊ. ಬಿಕೆಸಿ ಸೋತಿರುವುದೂ ಪಕ್ಷಕ್ಕೆ ಸ್ವಾಗತಾರ್ಹ.   ಇದರ ಹೊರತಾಗಿ ಎಚ್ಕೆ ಪಾಟೀಲ್, ಕಿಮ್ಮನೆ ರತ್ನಾಕರ, ವಿ ಶ್ರೀನಿವಾಸ್ ಪ್ರಸಾದ್ ಅವರಂಥ ಅಪ್ಪಟ ಜನನಾಯಕರೂ ಗೆದ್ದುಬಂದಿದ್ದಾರೆ. ಪಕ್ಷ ಅಂತಹವರಿಗೆ ಮಣೆ ಹಾಕುವುದು ಅನಿವಾರ್ಯ. ಇನ್ನು, ಬಿಜೆಪಿಗೆ ಇನ್ನಿಲ್ಲದಂತೆ ಕಾಡಿದ ಪಕ್ಷೇತರರು ಮತ್ತು ಆಪರೇಶನ್ ಕಮಲದ ಹಂಗೂ ಪಕ್ಷಕ್ಕೆ ಬೇಡವಾಗಿದೆ. ಹಾಗೆಯೇ, ಈ ಬಾರಿ ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬ ಮಾತು ಬಲವಾದಾಗ ಕೊನೆಯ ಕ್ಷಣದಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದವರಿಂದ ಪಕ್ಷ ಹೆಚ್ಚು ನಷ್ಟ ಅನುಭವಿಸಿಲ್ಲ. ಎಚ್ ಎಂ ರೇವಣ್ಣ ಅವರಂಥ ಬಂಡಾಯಗಾರರೂ ಪಕ್ಷಕ್ಕೆ ಈಗ ಪೂರಕವಾಗಲಿದ್ದಾರೆ. 

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಮೇ -08-2013

ಮಂಗಳೂರು, : ದ.ಕ.ಜಿಲ್ಲೆಯ ಎಂಟು ಸ್ಥಾನಗಳ ಪೈಕಿ ಒಂದು ಸ್ಥಾನ ಹಾಗೂ  ಉಡುಪಿ ಜಿಲ್ಲೆಯ ಐದು ಸ್ಥಾನಗಳ ಪೈಕಿ ಒಂದು ಸ್ಥಾನ - ಹೀಗೆ ಒಟ್ಟು  2 ಸ್ಥಾನ - ಇದು ತನ್ನ ಭದ್ರಕೋಟೆಯಾಗಿದ್ದ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಮಾಡಿರುವ ಅದ್ಭುತ ಸಾಧನೆ.
ಬಿಜೆಪಿಯ ಕರಾವಳಿ ಭದ್ರಕೋಟೆಯಲ್ಲಿ ಈ ಬಾರಿ ನಿರೀಕ್ಷೆಯಂತೆ ಕಾಂಗ್ರೆಸ್‌ ಭರ್ಜರಿ ವಿಜಯ ಸಾಧಿಸಿದ್ದು ಇದನ್ನು ತನ್ನ ಭದ್ರಕೋಟೆಯನ್ನಾಗಿ ಪರಿವರ್ತಿಸಿಕೊಂಡಿ

ವಿಧಾನಸಭಾ ಚುನಾವಣೆ: ವಿಜಯ ಸಾಧಿಸಿದ ಅಭ್ಯರ್ಥಿಗಳು ಮೇ -08-2013

 ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿದ ಅಭ್ಯರ್ಥಿಗಳು:
1. ಪ್ರಮೋದ್‌ ಮಧ್ವರಾಜ್‌, 2. ಶಕುಂತಳಾ ಶೆಟ್ಟಿ, 3. ಯು.ಟಿ. ಖಾದರ್‌, 4. ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ), 5.ಅಭಯ ಚಂದ್ರ ಜೈನ್‌, 6. ಕಾಗೋಡು ತಿಮ್ಮಪ್ಪ, 7. ವಸಂತ ಬಂಗೇರ, 8. ಸತೀಶ್‌ ಸೈಲ್‌, 9. ಪ್ರಿಯಕೃಷ್ಣ, 10. ರಾಮಲಿಂಗ ರೆಡ್ಡಿ, 11 ವಾಸು. 12. ವೈ.ಎಸ್‌.ವಿ. ದತ್ತಾ, 13. ಜಮೀರ್‌ ಅಹ್ಮದ್‌ ಖಾನ್‌. 14. ಶಾಂತನ ಗೌಡ. 15. ಜಿ.ಟಿ ದೇವೇಗೌಡ. 16. ಸುಂದರೇಶ್‌ 17.ಮಲ್ಲಿಕಾರ್ಜನ 18. ಸುನೀಲ್‌ ಕುಮಾರ್‌  19. ಗೋಪಾಲ ಪೂಜಾರಿ 20. ಆನಂದ್‌ ಸಿಂಗ್‌, 21. ಬಣಕಾರ್‌, 22. ರೋಶನ್‌ ಬೇಗ್‌. 23. ಎಂ.ಬಿ. ಪಾಟೀಲ್‌ 24. ಎಚ್‌.ಕೆ.ಪಾಟೀಲ್‌ 25. ಸುರೇಶ್‌ ಕುಮಾರ್‌ 26. ರಘು  27. ಎಂ ಎನ್‌ ರಘುಮೂರ್ತಿ. 28. ಸತೀಶ್‌ ಜಾರಕಿಹೊಳಿ 29. ವರ್ತೂರು ಪ್ರಕಾಶ್‌. 30. ಮನೋಹರ್‌ ತಹಶೀಲ್ದಾರ್‌. 31. ಪ್ರಕಾಶ್‌ ಹುಕ್ಕೇರಿ 32. ಆರ್‌.ವಿ. ದೇಶಪಾಂಡೆ, 33. ರಾಮಕ್ಕ 34. ಶಿವರಾಜ್‌ ಪಾಟೀಲ್‌ 35. ಮಂಜುನಾಥ್‌, 36. ತನ್ವೀರ್‌ ಸೇs…, 37. ಕೆ.ಎಂ. ನಾರಾಯಣ ಸ್ವಾಮಿ, 38. ಮಕ್‌ ಬೂಲ್‌ ಭಗವಾನ್‌, 39. ರಮಾನಾಥ ರೈ, 40. ಟಿ. ನಾಗರಾಜಯ್ಯ, 41. ಶಶಿಕಲಾ ಜೊಲ್ಲೆ, 42. ಶ್ರೀನಿವಾಸ ಮೂರ್ತಿ, 43. ಹ್ಯಾರಿಸ್‌, 44. ಲಕ್ಷಣ ಸವದಿ, 45. ವೈ.ಎನ್‌. ರುದ್ರೇಶ್‌ ಗೌಡ, 46. ಪಿಳ್ಳ ಮುನಿ ಶಾಮಪ್ಪ, 47. ರಮೇಶ್‌ ಜಾರಕಿಹೊಳಿ, 48. ಷಡಕ್ಷರಿ, 49. ಅಂಗಾರ, 50.ವಿನಯ ಕುಮಾರ್‌ ಸೊರಕೆ, 51. ಡಿ.ಸಿ. ತಮ್ಮಣ್ಣ, 52. ಮೊಯಿದ್ದೀನ್‌ ಬಾವಾ, 53. ಸಿದ್ದರಾಮಯ್ಯ, 54. ರಮೇಶ್‌ ಕುಮಾರ್‌, 55. ಟಿ.ಬಿ. ಜಯಚಂದ್ರ, 56. ಶಾಮನೂರು ಶಿವಶಂಕರಪ್ಪ, 57. ಪಿ. ರಾಜೀವ ಕುಡಚಿ, 58. ಬಸವರಾಜ ರಾಯರೆಡ್ಡಿ, 59. ಮುನಿರತ್ನಂ, 60. ಬಿ.ಬಿ. ನಿಂಗಯ್ಯ, 61. ಜೆ.ಆರ್‌. ಲೋಬೋ, 62. ಎಂ.ಟಿ.ಬಿ. ನಾಗರಾಜ್‌, 63. ಡಾ. ಉಮೇಶ್‌ ಜಾಧವ್‌, 64. ಎಸ್‌.ಟಿ. ಸೋಮಶೇಖರ್‌, 65. ಡಾ.ಎಸ್‌.ರಫೀಕ್‌ ಅಹಮ್ಮದ್‌, 66. ಎಚ್‌.ಪಿ. ರಾಜೇಶ್‌, 67. ಎಂ.ಪಿ. ರವೀಂದ್ರ, 68. ಸಂತೋಷ್‌ ಲಾಡ್‌, 69. ಡಾ. ಶ್ರೀನಿವಾಸ ಮೂರ್ತಿ, 70. ಎಚ್‌.ಡಿ. ಕುಮಾರ ಸ್ವಾಮಿ, 71. ಎಚ್‌.ಕೆ. ಕುಮಾರ ಸ್ವಾಮಿ (ಸಕಲೇಶಪುರ), 72. ರಾಮಕೃಷ್ಣ ದೊಡ್ಡಮನಿ, 73. ಡಾ. ಎಚ್‌.ಸಿ. ಮಹದೇವಪ್ಪ, 74. ಹಂಪಯ್ಯ ನಾಯ್ಕ, 75. ಉಮಾಶ್ರೀ, 76. ಡಿ.ಕೆ. ಶಿವಕುಮಾರ್‌, 77. ಕೆ.ಎಸ್‌. ಪುಟ್ಟಣ್ಣಯ್ಯ, 78. ಇ. ತುಕಾರಾಂ, 79. ಕೃಷ್ಣ ಭೈರೇಗೌಡ, 80. ಬಿ. ನಾಗೇಂದ್ರ (ಪಕ್ಷೇತರ), 81. ಬಿ.ಎಸ್‌. ಯಡಿಯೂರಪ್ಪ, 82. ತಿಪ್ಪಾ ರೆಡ್ಡಿ, 83. ಎಚ್‌.ಸಿ. ಬಾಲಕೃಷ್ಣ (ಜೆಡಿಎಸ್‌), 84. ರಾಜಾ ವೆಂಕಟಪ್ಪ ನಾಯಕ, 85. ತಿಪ್ಪಾರೆಡ್ಡಿ, 86. ಎಸ್‌.ಎಸ್‌. ಪಾಟೀಲ್‌ ನಡಹಳ್ಳಿ, 87. ಅಪ್ಪಚ್ಚು ರಂಜನ್‌, 88. ಬಾಲಕೃಷ್ಣ ಗೌಡ, 89. ಮಹದೇವ ಪ್ರಸಾದ್‌, 90. ಭೀಮಾ ನಾಯ್‌Â, 91. ಎಸ್‌. ಜಯಣ್ಣ, 92. ನಾಡಗೌಡ, 93. ತಿಮ್ಮರಾಯಪ್ಪ, 94. ಹಂಪನಗೌಡ ಬಾದರ್ಲಿ, 95. ಸಿ.ಪಿ. ಯೋಗೇಶ್ವರ್‌, 96. ಸಂಜಯ್‌ ಪಾಟೀಲ್‌, 97. ಶಿವಲಿಂಗೇ ಗೌಡ, 98. ಎಚ್‌. ಆಂಜನೇಯ, 99. ಎ.ಪಿ. ಮಾಲಕರೆಡ್ಡಿ, 100. ರವಿ ಸುಬ್ರಹ್ಯಣ್ಣ, 101. ಎಂ.ಕೆ. ಸೋಮಶೇಖರ್‌, 102. ಎಸ್‌. ಜಯಣ್ಣ, 103. ಆರ್‌. ಅಶೋಕ್‌, 104. ಅರವಿಂದ ಬೆಲ್ಲದ್‌, 105. ಚೆಲುವರಾಯ ಸ್ವಾಮಿ, 106. ಎ.ಬಿ. ರಮೇಶ್‌ ಬಂಡೆ ಸಿದ್ದೇಗೌಡ, 107. ಶ್ರೀರಾಮುಲು, 108. ಕೆ.ಜಿ. ಬೋಪಯ್ಯ, 109. ವಿಜಯ್‌ಕುಮಾರ್‌, 110. ಡಾ. ಸುಧಾಕರ್‌ ಗೆಲುವು ಸಾಧಿಸಿದ್ದಾರೆ.
ಒಟ್ಟು 223 ಸ್ಥಾನಗಳಿಗೆ ಚುನಾವಣೆ ನಡೆದಿದ್ದು. ಪಿರಿಯಾಪಟ್ಟಣದಲ್ಲಿ ಅಭ್ಯರ್ಥಿಯೋರ್ವರು ಮೃತಪಟ್ಟಿದ್ದರಿಂದ ಅಲ್ಲಿ ಚುನಾವಣೆ ನಡೆದಿಲ್ಲ.  ಈ ತನಕ ಎಲ್ಲ 223  ಕ್ಷೇತ್ರಗಳ ಮುನ್ನಡೆ ವಿವರಗಳು ಪ್ರಾಪ್ತವಾಗಿದ್ದು ಕಾಂಗ್ರೆಸ್‌ ಮುಂಚೂಣಿಯಲ್ಲಿದೆ.
ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆಯನ್ನು ಏರಲು 113 ಸ್ಥಾನಗಳ ಮ್ಯಾಜಿಕ್‌ ಫಿಗರ್‌ ಸಿಗಬೇಕಾಗಿದ್ದು ಇದು ಬಹುತೇಕ ಸಾಧ್ಯವಾಗುವ ಲಕ್ಷಣ ತೋರಿಬರುತ್ತಿದೆ.

ಪಾಸಾದವರು ಬುದ್ಧಿವಂತರೂ ಅಲ್ಲ,ಫೇಲಾದವರು ದಡ್ಡರೂ ಅಲ್ಲ! ಮೇ -08-2013

ಎಸೆಸೆಲ್ಸಿ, ಪಿಯುಸಿ ಫಲಿತಾಂಶ ಜೊತೆ ಜೊತೆಯಾಗಿ ಹೊರ ಬಿದ್ದಿದೆ. ಎರಡೆರಡು ಕಾರಣಕ್ಕೆ ನಾವು ಈ ಬಾರಿಯ ಫಲಿತಾಂಶಕ್ಕಾಗಿ ಸಮಾಧಾನಪಟ್ಟುಕೊಳ್ಳಬೇಕು. ಒಂದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಎಸೆಸೆಲ್ಸಿಯಲ್ಲಿ ಶೇ.1.34ರಷ್ಟು ಏರಿಕೆಯಾಗಿದ್ದರೆ, ಪಿಯುಸಿಯಲ್ಲಿ 2.33ರಷ್ಟು ಏರಿಕೆಯಾಗಿದೆ.  ಪಿಯುಸಿಯದ್ದು ದಾಖಲೆ ಫಲಿತಾಂಶ. ಕಳೆದ ಹತ್ತು ವರ್ಷಗಳಲ್ಲಿ ಈ ಫಲಿತಾಂಶವನ್ನು ಕಾಣುವುದಕ್ಕೆ ರಾಜ್ಯಕ್ಕೆ ಸಾಧ್ಯವಾಗಿರಲಿಲ್ಲ. ನಾವು ಸಂತೋಷ ಪಡುವುದಕ್ಕೆ ಇನ್ನೂ ಕಾರಣಗಳಿವೆ.ಮುಖ್ಯವಾಗಿ ಹೆಣ್ಣು ಮಕ್ಕಳು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.ದೇಶಾದ್ಯಂತ ಹೆಣ್ಣು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿದ್ದಾಳೆ.ಅವಳ  ಮೇಲೆ ನಡೆಯುವ ದೌರ್ಜನ್ಯಗಳು ಸದಾ ಮಾಧ್ಯಮಗಳಿಗೆ ವಸ್ತು.ಆದರೆ ಕರ್ನಾಟಕದಲ್ಲಿ ಹೆಣ್ಣು ಭಿನ್ನ ಕಾರಣಕ್ಕಾಗಿ ಪ್ರತಿ ವರ್ಷ ಸುದ್ದಿಯಾಗುತ್ತಾಳೆ.
ಅದೆಂದರೆ, ಎಸೆಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಗಂಡುಮಕ್ಕಳನ್ನು ಹಿಂದಕ್ಕೆ ಹಾಕುವ ಮೂಲಕ. ಹೆಣ್ಣಿನ ಕುರಿತಂತೆ ತಾತ್ಸಾರ ಭಾವನೆಯಿರುವ ಪುರುಷ ಮನಸ್ಥಿತಿಗೆ ಸದಾ ಈ ಬಾಲಕಿಯರು ತಮ್ಮ ಪರೀಕ್ಷೆ ಫಲಿತಾಂಶಗಳ ಮೂಲಕ ಉತ್ತರಿಸುತ್ತಾ ಬರುತ್ತಿದ್ದಾರೆ. ಈ ಬಾರಿಯೂ ಹೆಣ್ಣು ಮಕ್ಕಳೇ ಮುಂದಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವೇ ಸರಿ.
ಹಾಗೆಯೇ ಕರ್ನಾಟಕದ ಗ್ರಾಮೀಣ ಮಕ್ಕಳು ಎಸೆಸೆಲ್ಸ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮುಂದಿರುವುದು, ನಮ್ಮ ಸರಕಾರಕ್ಕೆ ಹಾಕಿದ ಒಂದು ಸವಾಲೇ ಸರಿ. ನಗರದ ಆಧುನಿಕ ಬದುಕಿಗೆ ಗ್ರಾಮೀಣ ಮಕ್ಕಳು ಪ್ರಶ್ನೆ ಹಾಕಿದ್ದಾರೆ. ಅತ್ಯಾಧುನಿಕ ಶಾಲೆ, ಇಂಗ್ಲಿಷ್, ಆಧುನಿಕ ಸಲಕರಣೆ, ಸವಲತ್ತು ಇತ್ಯಾದಿ ಗಳೆಲ್ಲವನ್ನೂ ಮೀರಿ, ಗ್ರಾಮೀಣ ಮಕ್ಕಳು ತಮಗೆ ಸಿಕ್ಕಿದ ಅಲ್ಪಸ್ವಲ್ಪ ಸವಲತ್ತುಗಳನ್ನೇ ಬಳಸಿಕೊಂಡು ಸಾಧನೆ ಮೆರೆದಿದ್ದಾರೆ. ಇದೂ ನಮ್ಮನ್ನು ಎಚ್ಚರಿಸಬೇಕಾಗಿದೆ.
ಕಲಿಕೆಯ ಕುರಿತಂತೆ ಇರುವ ಕೆಲವು ಮೂಢನಂಬಿಕೆ ಗಳಿಂದ ಹೊರ ಬರುವುದಕ್ಕೆ ಇದು ಕಾರಣವಾಗಬೇಕಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒಂದಿಷ್ಟು ನೀರೆರೆದರೆ ಪ್ರತಿಭೆಗಳು ಹೇಗೆ ಅರಳಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ ಯಾಗಿದೆ. ಹಾಗೆಯೇ ಇದೇ ಉದಾಹರಣೆಯ ಮೂಲಕವೇ ನಾವು ಸರಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಮನ ಮಾಡಬೇಕು. ಕನ್ನಡ ಮಾಧ್ಯಮ-ಇಂಗ್ಲಿಷ್ ಮಾಧ್ಯಮಗಳ ಬಿಕ್ಕಟ್ಟು ಗಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೋಕ್ಷ ಉತ್ತರ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಫೇಲಾದವರು ಅಥವಾ ಕಡಿಮೆ ಅಂಕಗಳನ್ನು ಪಡೆದವರು ಯಾವ ಕಾರಣಕ್ಕೂ ದಡ್ಡರಲ್ಲ ಎನ್ನುವ ಸತ್ಯವನ್ನೂ ಮಕ್ಕಳಿಗೆ ಮನದಟ್ಟು ಮಾಡಬೇಕಾಗಿದೆ. ಭಾರೀ ಅಂಕಗಳನ್ನು ಪಡೆದಾಕ್ಷಣ ಅದರಿಂದ ಪ್ರಯೋಜನವಾಗಬೇಕು ಎಂದೇನೂ ಇಲ್ಲ. ಹಾಗೆಯೇ ಒಬ್ಬ ಫೇಲಾದವನು ನಾಳೆ ತನ್ನದೇ ವೈಯಕ್ತಿಕ ಪ್ರತಿಭೆಯ ಬಲದಿಂದ ಅತ್ಯುತ್ತಮ ಗಾಯಕನಾಗಿ ಅಥವಾ ಚಿತ್ರಕಲಾವಿದನಾಗಿ, ಕೃಷಿಕನಾಗಿ ಅಥವಾ ಇನ್ಯಾವುದೋ ಕೆಲಸದಲ್ಲಿ ಪ್ರಣನಾಗಿ ರ‍್ಯಾಂಕ್ ವಿದ್ಯಾರ್ಥಿಗಳಿಗಿಂತ ಅಧಿಕ ಸಂಪಾದಿಸಬಹುದಾಗಿದೆ.
ಹಾಗೆಯೇ ಯಾವುದೇ ರ‍್ಯಾಂಕ್ ವಿಜೇತನಿಗಿಂತ ಹೆಚ್ಚು ಹೆಸರನ್ನೂ, ಖ್ಯಾತಿಯನ್ನೂ ಪಡೆಯಬಹು ದಾಗಿದೆ. ಆದುದರಿಂದ ಕಡಿಮೆ ಅಂಕಪಡೆದ ರೆಂದು ವಿದ್ಯಾರ್ಥಿಗಳನ್ನು ನಿಂದಿಸುವುದು, ಟೀಕಿಸುವುದು ಸಲ್ಲ. ಯಾವ ವಿದ್ಯಾರ್ಥಿಯೂ ಈ ಕುರಿತಂತೆ ಕೀಳರಿಮೆ ಪಟ್ಟುಕೊಳ್ಳುವ ಅಗತ್ಯವಿಲ್ಲ. ತಂದೆ ತಾಯಿಗಳೂ ಅದನ್ನು ನಗುಮುಖದಿಂದಲೇ ಸ್ವೀಕರಿಸಬೇಕು. ಜೊತೆಗೆ ಅವನ ನಿಜವಾದ ಆಸಕ್ತಿ ಯಾವ ಕಡೆಗೆ ಇದೆ ಎಂದು ಗುರುತಿಸಿ, ಅಲ್ಲಿಗೆ ಅವನನ್ನು ತಲುಪಿಸುವ ಹೊಣೆಗಾರಿಕೆ ಪಾಲಕರದ್ದಾಗಿದೆ. ಈ ಫಲಿತಾಂಶವನ್ನು ಪಾಲಕರು, ಶಿಕ್ಷಕರು ಗಂಭೀರವಾಗಿ ಸ್ವೀಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವನ್ನು ಬೀರುವ ಸಾಧ್ಯತೆಯಿದೆ. 
ಮಕ್ಕಳು ಖಿನ್ನರಾಗಿ, ದುರಂತದ ಕಡೆಗೆ ಹೆಜ್ಜೆಯಿಡುವ ಅಪಾಯವಿದೆ. ಆದುದರಿಂದ, ಅಂಕಗಳನ್ನು ಉಣ್ಣುವುದಕ್ಕೆ, ತಿನ್ನುವುದಕ್ಕೆ ಆಗುವುದಿಲ್ಲ ಎಂಬ ಅಂಶವನ್ನು ಎಲ್ಲರೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು. ಹಾಗೆಯೇ ಕಲಿಕೆಯನ್ನು ಇನ್ನಷ್ಟು ಸುಂದರವಾಗಿಸುವ, ಖುಷಿಯ, ಸಂತೋಷದ ವಿಷಯವಾಗಿಸುವ ಹೊಣೆಗಾರಿಕೆಯೂ ನಮ್ಮ ಸರಕಾರದ ಮೇಲೆ, ಶಿಕ್ಷಣ ಇಲಾಖೆಯ ಮೇಲಿದೆ. ಅದನ್ನು ಬದುಕಿಗೆ ಇನ್ನಷ್ಟು ಹತ್ತಿರವಾಗಿಸುವ ಅಗತ್ಯವಿದೆ. ಇಂದು ಖಾಸಗಿ ಶಾಲೆಗಳು ಶಿಸ್ತಿನ ಕೋಟೆಗಳಾಗಿ ಪರಿವರ್ತನೆಗೊಂಡಿವೆ.
ಬಡವರು ಈ ಶಾಲೆಗಳಿಗೆ ಕಾಲಿಕ್ಕುವಂತಿಲ್ಲ. ಸರಕಾರಿ ಶಾಲೆ ಸೌಲಭ್ಯಗಳಿಂದ ವಂಚಿತವಾಗಿವೆ. ಆದುದರಿಂದ ಅದೆಷ್ಟೇ ಕಷ್ಟವಾದರೂ ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎನ್ನುವ ಒತ್ತಡದಲ್ಲಿದ್ದಾರೆ ಪಾಲಕರು. ಜನರು ತಮ್ಮ ಮಕ್ಕಳನ್ನು ಯಾಕೆ ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೆಗೆಯುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಸರಕಾರಿ ಶಾಲೆಗಳನ್ನು ಉದ್ಧರಿಸುವ ಕೆಲಸವನ್ನು ಸರಕಾರ ಮಾಡಬೇಕು.
ಕನ್ನಡವನ್ನು ಇಂಗ್ಲಿಷ್‌ನ್ನು ಸರಕಾರಿ ಶಾಲೆಗಳಲ್ಲಿ ಜೊತೆ ಜೊತೆಯಾಗಿ ಕಲಿಸಬೇಕು. ಕನ್ನಡಭಾಷೆಯ ಜೊತೆಗೆ ಇಂಗ್ಲಿಷ್‌ನ್ನು ಕಲಿಯುವವರು ಹೆಚ್ಚು ಜ್ಞಾನ ವನ್ನು ಪಡೆಯುವುದಕ್ಕೆ ಸಾಧ್ಯ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲುಗೈ ಇದನ್ನು ಎತ್ತಿ ಹಿಡಿದಿದೆ. ವಿದ್ಯಾರ್ಥಿಗಳ ಪರೀಕ್ಷೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಇಡೀ ಶಿಕ್ಷಣ ವ್ಯವಸ್ಥೆ ಮಾತ್ರ ಪ್ರತೀ ವರ್ಷ ಎಡವುತ್ತಲೇ ಇದೆ. ಇನ್ನಾದರೂ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡುವಲ್ಲಿ ಸರಕಾರ ಮತ್ತು ಶಿಕ್ಷಣ ವ್ಯವಸ್ಥೆ ಮುಂದಾಗಬೇಕಾಗಿದೆ

Tuesday, May 7, 2013

ಹೊಸಂಗಡಿ:ಪಾರ್ಕಿಂಗ್ ವಿವಾದ:ರಿಕ್ಷಾ ಚಾಲಕರಿಗೆ ಹಲ್ಲೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಪಾರ್ಕಿಂಗ್ ವಿಷಯದಲ್ಲಿ ಉಂಟಾದ ಮಾತಿನ ಚಕಮಕಿಯು ಕೊನೆಗೆ ಗಲಾಟೆಯಲ್ಲಿ ಪರ್ಯಾವಸಾನ ಗೊಂಡ ಘಟನೆ ಮಂಗಳವಾರ ಸಂಜೆ ಹೊಸಂಗಡಿ ಜಂಕ್ಷನ್ ನಲ್ಲಿ ನಡೆಯಿತು.
ಹೊಸಂಗಡಿ ರಿಕ್ಷಾ ಪಾರ್ಕಿಂಗ್ ಸಮೀಪ ಕಾರಿನಲ್ಲಿ ಬಂದ ತಂಡವೊಂದು ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿದ ರಿಕ್ಷಾ ಚಾಲಕನ ವಿರುದ್ದ ಏಕಾಏಕಿ ಹಲ್ಲೆ ಗೈದ ತಂಡವು ತಡೆಯಲು ಬಂದ ಇನ್ನಿಬ್ಬರು ರಿಕ್ಷಾ ಚಾಲಕರಿಗೂ ಹಲ್ಲೆ ಗೈದು ಪರಾರಿಯಾಗಿದ್ದಾರೆ.ಹಲ್ಲೆಯಿಂದ ಗಾಯಗೊಂಡ ರಿಕ್ಷಾ ಚಾಲಕರಾದ ಹೊಸಂಗಡಿ ನಿವಾಸಿಗಳಾದ ಇಬ್ರಾಹಿಂ,ನಸೀಫ್,ಹಾಗು ಕುಂಞಿ ಎಂಬಿವರು ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಇದರಿಂದ ಸ್ವಲ್ಪ ಹೊತ್ತು ಹೊಸಂಗಡಿಯಲ್ಲಿ ಸಂಘರ್ಷಾವಸ್ಥೆ ಉಂಟಾಗಿದ್ದು ರಿಕ್ಷಾ ಚಾಲಕರು ಧಿಡೀರಣೆ ಇಲ್ಲಿ ಮುಷ್ಕರ ಆರಂಭಿಸಿದರು.ಸ್ವಲ್ಪ ಸಮಯ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲೂ ಸಂಚಾರಕ್ಕೆ ತಡೆ ಉಂಟಾಯಿತು. ಕೂಡಲೇ ತಲುಪಿದ ಮಂಜೇಶ್ವರ ಪೊಲೀಸರು ರಿಕ್ಷಾ ಚಾಲಕರಿಗೆ ಹಲ್ಲೆಗೈದವರನ್ನು ಬಂಧಿಸುವುದಾಗಿ ಭರವಸೆ ನೀಡಿದರು ನಂತ್ರ ರಿಕ್ಷಾ ಚಾಲಕರು ಮುಷ್ಕರದಿಂದ ಹಿಂದಕ್ಕೆ ಸರಿದರು

ಮಟ್ಕಾ ಅಡ್ಡೆಗೆ ಧಾಳಿ:ಇಬ್ಬರ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ಸೆರೆ ಹಿಡಿದು ಆಟಕ್ಕೆ ಬಳಸಲಾದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಹೊಸಂಗಡಿಯ ಅಂಗಡಿ ಪದವಿನಲ್ಲಿ ಕಾರ್ಯಾಚರಿಸುತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಹೊಸಂಗಡಿ ನಿವಾಸಿ ಸುನಿಲ್(20) ಹಾಗು ಅಂಗಡಿ ಪದವು ನಿವಾಸಿ ನಾರಾಯಣ(60) ಎಂಬಿಬ್ಬರನ್ನು ದಸ್ತಗಿರಿ ಗೈದು ಆಟಕ್ಕೆ ಬಳಸಲಾಗಿದ್ದ 520 ರೂ ವನ್ನು ವಶಪಡಿಸಿಕೊಂಡಿದ್ದಾರೆ