Friday, July 19, 2013

ಮಂಜೇಶ್ವರ:ಈಜಲು ಹೋದ ವಿದ್ಯಾರ್ಥಿ ನೀರು ಪಾಲುಮಂಜೇಶ್ವರ: ಸಹಪಾಠಿಗಳೊಂದಿಗೆ ಈಜುಕೊಳಕ್ಕೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಗುರುವಾರ ಸಂಜೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಮೀಪದಲ್ಲಿ ನಡೆದಿದೆ .ಮೃತ ಪಟ್ಟ ವಿದ್ಯಾರ್ಥಿ ಉಪ್ಪಳ ಮುಸೋಡಿ ನಿವಾಸಿ ಉಪ್ಪಳ ಜಿ ಎಚ್.ಎಸ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶಂಶೀರ್(15) ಎಂಬವನಾಗಿದ್ದಾನೆ. ಬುಧವಾರ ಸಂಜೆ ಸಹಪಾಠಿಗಳೊಂದಿಗೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪಕ್ಕದಲ್ಲಿರುವ ಈಜುಕೊಳಕ್ಕೆ ತಲುಪಿದ ಈತ ಈಜಾಡುತ್ತಿರುವಾಗ ನೀರಲ್ಲಿ ಮುಳುಗಿ ಹೋಗಿದ್ದ ಹುಡುಕಾಡಿ ಮೃತ ದೇಹ ಪತ್ತೆಯಾಗದ ಕಾರಣ ಉಪ್ಪಳ ಅಗ್ನಿಶಾಮಕ ದಳದವರು ತಲುಪಿ ರಾತ್ರಿ 11ಗಂಟೆ ಸುಮಾರಿಗೆ ಮೃತದೇಹವನ್ನು ಮೇಲೆತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. No comments:

Post a Comment