Thursday, May 2, 2013

ಸೊಳ್ಳೆ ಉತ್ಪಾಧನಾ ಕೇಂದ್ರವಾಗುತ್ತಿರುವ ತೂಮಿನಾಡು ಜಂಕ್ಷನ್ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕರ್ನಾಟಕದ ಗಡಿ ಪ್ರದೇಶದಿಂದ ಅರ್ಧ ಕಿ.ಲೋ ಮೀಟರ್ ಅಂತರದಲ್ಲಿರುವ ತೂಮಿನಾಡು ಜಂಕ್ಷನ್ ಹೆದ್ದಾರಿಯ ಬದಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡು ಸೊಳ್ಳೆ ಉತ್ಪಾಧಣಾ ಕೇಂದ್ರವಾಗುತ್ತಿರುವುದಾಗಿ ಸ್ಥಳೀಯರಿಂದ ಆರೋಪ ಕೇಳಿ ಬಂದಿದೆ.
ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ತ್ಯಾಜ್ಯಗಳನ್ನು ತಂದು ಹಾಕಲಾಗುತ್ತದೆ.ಗ್ರಾ.ಪಂಚಾಯತ್ ಇಲ್ಲಿ ತ್ಯಾಜ್ಯಗಳನ್ನು ಹಾಕಲು ಡಬ್ಬಿಗಳನ್ನು ಇಡಲಿಲ್ಲ.ಇಲ್ಲಿ ಕೋಳಿಯ ತ್ಯಾಜ್ಯ ಮನೆಗಳಲ್ಲಿ ಸಂಗ್ರಹವಾದ ತ್ಯಾಜ್ಯ ,ಕಟ್ಟಡಗಳನ್ನು ಕೆಡವಿದ ತ್ಯಾಜ್ಯ ಮೊದಲಾದ ರೀತಿಯ ತ್ಯಾಜ್ಯಗಳನ್ನು ಇಲ್ಲಿ ತಂದು ಹಾಕಲಾಗುತಿದ್ದು ಇದರಿಂದ ಇಲ್ಲಿ ಹಾಕಲಾಗಿರುವ ತ್ಯಾಜ್ಯಗಳನ್ನು ದನ,ನಾಯಿ,ಪಕ್ಷಿಗಳು ಚೆಲ್ಲಾಪಿಲ್ಲಿಗೊಳಿಸಿ ಹೆದ್ದಾರಿತನಕ ಹರಡುತ್ತಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ. ಪರಿಸರದಲ್ಲಿ ಮನೆಗಳಿದ್ದು ಹತ್ತಿರದಲ್ಲೆ ರಿಕ್ಷಾ ನಿಲ್ದಾನವಿದ್ದು ಹಲವು ವ್ಯಾಪರ ಸಂಸ್ಥೆಗಳು ಕಾರ್ಯಾಚರಿಸುತ್ತವೆ. ತ್ಯಾಜ್ಯಗಳಿಂದ ಹೊರಸೂಸುವ ದುರ್ಗಂಧದಿಂದ ಮೂಗಿಗೆ ಕೈ ಹಿಡಿದು ತಮ್ಮ ನಿತ್ಯದ ಕೆಲಸಗಳನ್ನು ನಡೆಸಬೇಕಾಗಿರುವುದಾಗಿ ಪರಿಸರವಾಸಿಗಲು ದೂರಿದ್ದಾರೆ.ತೂಮಿನಾಡಿನ ರಾಷ್ಟ್ರೀಯ ಹೆದ್ದಾರಿಯ ಬದಿಯ ಟ್ರಾನ್ಸ್ ಫಾರ್ಮರ್ ನತ್ತಿರ ಮಂಜೇಶ್ವರ ಗ್ರಾ.ಪಂ. ಪಂಚಾಯತಿನ ವತಿಯಿಂದ ಓಬಿರಾಯನ ಕಾಲದ ಒಂದು ತೊಟ್ಟಿಯನ್ನು ಇಡಲಾಗಿದ್ದರೂ ಅದು ಉಪಯೋಗ ಶೂನ್ಯವಾಗಿರುವುದಾಗಿ ಆರೋಪ.ತೂಮಿನಾಡಿನ ಜಂಕ್ಷನ್ ನಲ್ಲಿ ತ್ಯಾಜ್ಯಗಳನ್ನು ಹಾಕುವ ಸರಿಯಾದ ರೀತಿಯ ವ್ಯವಸ್ಥೆಯನ್ನು ಗ್ರಾ.ಪಂಚಾಯತ್ ಮಾಡಿ ಕೊಡದೇ ಇರುವುದರಿಂದ ತ್ಯಾಜ್ಯಗಳು ತುಂಬಿ ದುರ್ನಾತಕ್ಕೆ ಕಾರಣ ಉಂಟಾಗುತ್ತಿರುವುದಾಗಿ ಪರಿಸರವಾಸಿಗಳು ಆರೋಪಿಸಿದ್ದಾರೆ.
ಪ್ರದೇಶವು ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷರ ವಾರ್ಡಿನ ವ್ಯಾಪ್ತಿಯಲ್ಲಿ ಬರುತ್ತಿದೆ.ದಿನನಿತ್ಯವೂ ದಾರಿಯಾಗಿ ಅಧ್ಯಕ್ಷರು ಸಂಚರಿಸುತ್ತಲೂ ಇರುತ್ತಾರೆ ಆದರೆ ತ್ಯಾಜ್ಯಗಳು ತುಂಬುತ್ತಿರುವ ತೂಮಿನಾಡು ಜಂಕ್ಷನ್ ಗೆ ತ್ಯಾಜ್ಯಗಳನ್ನು ಶೇಖರಿಸಿ ಕೊಂಡೊಯ್ಯುವ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬಗ್ಗೆ ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷರಾದ ಮುಶ್ರತ್ ಜಹಾನ್ ರನ್ನು ಪತ್ರಿಕೆಯು ಮಾತನಾಡಿಸಿದಾಗ ಮಳೆ ಆರಂಭವಾಗುವ ಮೊದಲೇ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಶೇಖರಣೆಯಾದ ತ್ಯಾಜ್ಯಗಳನ್ನು ಕೊಂಡೊಯ್ಯುವ ವ್ಯವಸ್ಥೆ ಮಾಡಿ ಇನ್ನು ಮುಂದೆ ತ್ಯಾಜ್ಯ ವನ್ನು ಹಾಕಲು ಸೂಕ್ತವಾದ ವ್ಯವಸ್ಥೆ ಕಲ್ಪಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ


No comments:

Post a Comment