Wednesday, May 1, 2013

ಮಂಜೇಶ್ವರ ಗ್ರಾಹಕರ ವೇದಿಕೆ ಇನ್ಫ್ಯಾಕ್ಟ್: ತೂಮಿನಾಡಿಗೆ ಜಿಲ್ಲಾಧಿಕಾರಿ ವತಿಯಿಂದ ಹೊಸ ಕೊಳವೆ ಬಾವಿ ಮಂಜೂರು




ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ನೀರಿಗಾಗಿ ಪರದಾಡುತ್ತಿರುವ ತೂಮಿನಾಡು ಜನತೆಯ ಬವಣೆಯ ಬಗ್ಗೆ ಸಮಗ್ರವಾದ ರೀತಿಯ ವರದಿಯನ್ನು ಮಂಜೇಶ್ವರ ಗ್ರಾಹಕರ ವೇದಿಕೆಯು ಮುಖ್ಯ ಮಂತ್ರಿಯವರ ಸುಧಾರ್ಯ ಕೇರಳಂ ದೂರು ವಿಬಾಗದಲ್ಲಿ ದೂರನ್ನು ದಾಖಲಿಸಿತ್ತು.ದೂರಿಗೆ ಸ್ಪಂಧಿಸಿದ ಮುಖ್ಯಮಂತ್ರಿಯವರ ಸುಧಾರ್ಯ ಕೇರಳಂ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ನೀಡಿದ ಆದೆಶದಂತೆ ಇದೀಗ  ಜಿಲ್ಲಾಧಿಕಾರಿಯವರ ವತಿಯಿಂದ  ತೂಮಿನಾಡು ಜನತೆಗೆ  ಅಡಿಶನಲ್ ಕೊಳವೆ ಬಾವಿ ಮಂಜೂರಾಗಿದೆ.
ತೂಮಿನಾಡು, ಪದವು, ಕುಂಜತ್ತೂರು ಪ್ರದೇಶಗಳಲ್ಲಿ ಸುಮಾರು 500 ಕ್ಕಿಂತಲೂ ಅಧಿಕ ಕುಟುಂಬಗಳು ವಾಸಿಸುತಿದ್ದು ಇದರಲ್ಲಿ ಅಧಿಕ ಕುಟುಂಬಗಳೂ ಸ್ವಂತ ಬಾವಿಯಲ್ಲದೆ ಕೇರಳ ವಾಟರ್ ಅಥೋರಿಟಿಯಿಂದ ಸಿಗುವ ನೀರನ್ನು ಆಶ್ರಯಿಸಿ ಜೀವಿಸುವಂತಹ ಕುಟುಂಬವಾಗಿದೆ. ಪ್ರದೇಶದಲ್ಲಿ ತೂಮಿನಾಡು ಎಂಬಲ್ಲಿಂದ ಕೊಳವೆ ಬಾವಿಯಿಂದ ನೀರು ಟ್ಯಾಂಕ್ ಗೆ ಒಯ್ಯಲ್ಪಟ್ಟು ಅಲ್ಲಿಂದ ನೇರವಾಗಿ ಮನೆ ಮನೆಗಳ ಮುಂಬಾಗದಲ್ಲಿ ಅಳವದಿಸಲಾದ ಪೈಪ್ ಗಳಲ್ಲಿ ನೀರು ಸರಬರಾಜಾಗುತ್ತದೆ.ಆದರೆ ಇದೀಗ ಕಳೆದ 2 ತಿಂಗಳಿನಿಂದ ತೂಮಿನಾಡು ಕೊಳವೆ ಬಾವಿಯಲ್ಲಿ ನೀರು ಕಮ್ಮಿಯಾಗಿ ಜನರಿಗೆ ಸರಿಯಾದ ರೀತಿಯಲ್ಲಿ ನೀರು ಸರಬರಾಜು ಆಗುತ್ತಿರಲಿಲ್ಲ ಇದರಿಂದಾಗಿ ಇಲ್ಲಿಯ ಜನತೆ ನೀರಿಗಾಗಿ ಪರದಾಡುತಿದ್ದದನ್ನು ಮನಗಂಡ ಮಂಜೇಶ್ವರ ಗ್ರಾಹಕರ ವೇದಿಕೆಯು ಸಮಗ್ರವಾದ ವರದಿಯನ್ನು ತಯಾರಿಸಿ ಮುಖ್ಯಮಂತ್ರಿಯವರ ಸುಧಾರ್ಯ ಕೇರಳಂ ಗೆ ರವಾನಿಸಿತ್ತು.ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ಇಂದು ಮಂಜೇಶ್ವರ ಗ್ರಾಹಕರ ವೇದಿಯ ಪಧಾಧಿಕಾರಿಗಳ ಬಳಿ ತಲುಪಿ ಅವರ ಜತೆಯಾಗಿ ತೂಮಿನಾಡಿಗೆ ತೆರಳಿ ಸ್ಥಳವನ್ನು ಪರಿಶೀಲಿಸಿ ಕೊಳವೆ ಬಾವಿ ಮಂಜೂರಾದ ಅಧಿಕೃತವಾದ ದಾಖಲೆ ಪತ್ರಗಳಿಗೆ ಗ್ರಾಹಕರ ವೇದಿಕೆಯ ಕಾರ್ಯದರ್ಶಿಯಿಂದ ಸಹಿ ಪಡಕೊಂಡರು

No comments:

Post a Comment