Sunday, May 5, 2013

ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನ:ಆಟೋ ಚಾಲಕನ ವಿರುದ್ದ ಕೇಸು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅಪ್ರಾಪ್ತೆ ಬಾಲಕಿಯೊಬ್ಬಳನ್ನು ಆಟೋದಲ್ಲಿ ಕೂರಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಭಂಧಿಸಿ ಆಟೋ ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದರು.
ವಿಕೃತ ಕಾಮಿ ಆಟೋ ಚಾಲಕ ಸಾಲೆತ್ತೂರು ಪಾಲ್ತಾಜೆ ನಿವಾಸಿ ಜಯಂತ ಪೂಜಾರಿ(22) ವಿರುದ್ದ ಕೇಸು ದಾಖಲಿಸಲಾಗಿದೆ.ರಿಕ್ಷಾದಲ್ಲಿ ಕೊಂಡುಹೋಗಿ ಮಾನಭಂಗಕ್ಕೆ ಯತ್ನಿಸುವ ವೇಳೆ ಓಡಿ ಪಾರಾದ ಬಾಲಕಿಯು ನೀಡಿದ ದೂರಿನಂತೆ ಜಯಂತ ಪೂಜಾರಿ ವಿರುದ್ದ ಕೇಸು ದಾಖಲಿಸಲಾಗಿದೆ.
ಮೊನ್ನೆ ಸಂಜೆ ಮೀನು ಖರೀದಿಸಿ ಮನೆಗೆ ತೆರಳುತಿದ್ದ ಬಾಲಕಿಯನ್ನು ಆಟೋ ರಿಕ್ಷಾದಲ್ಲಿ ಕೂರಿಸಿ ನಿರ್ಜನ ಪ್ರದೇಶವೊಂದಕ್ಕೆ ಕೊಂಡೊಯ್ದು ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಸಂದರ್ಭ ಬಾಲಕಿ ಅಲ್ಲಿಂದ ಓಡಿ ಪಾರಾಗಿದ್ದಳು.ಕೂಡಲೇ ವಿಷಯ ಅರಿತ ಸ್ಥಳೀಯರು ಜಯಂತನನ್ನು ಹಿಡಿದು ಹಿಗ್ಗಾಮಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು ಥಳಿತದ ಪರಿಣಾಮ ವಿಕೃತ ಕಾಮಿ ಜಯಂತ ಪೂಜಾರಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆಸ್ಪತ್ರೆ ಬಿಡಿಗಡೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ

No comments:

Post a Comment