Tuesday, May 7, 2013

ಎಸೆಸೆಲ್ಸಿ ಫಲಿತಾಂಶ: ಅನ್ವಿತಾ ಶಾಸ್ತ್ರಿ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ


ಎಸೆಸೆಲ್ಸಿ ಫಲಿತಾಂಶ: ಅನ್ವಿತಾ ಶಾಸ್ತ್ರಿ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ


ಮೇ -07-2013

ಬಂಟ್ವಾಳ, : ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನ್ವಿತಾ ಶಾಸ್ತ್ರಿ 614 ಅಂಕಗಳಿಸುವ ಮೂಲಕ ತಾಲೂಕಿನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಗಣಿತದಲ್ಲಿ ನೂರರಲ್ಲಿ ನೂರು ಅಂಕಗಳಿಸಿರುವ ಈಕೆ ವಿಜ್ಞಾನ ವಿಷಯದಲ್ಲಿ 99, ಸಮಾಜ-99, ಹಿಂದಿ-95, ಇಂಗ್ಲಿಷ್-97 ಹಾಗೂ ಕನ್ನಡದಲ್ಲಿ 124 ಅಂಕಗಳಿಸಿದ್ದಾರೆ.ಈಕೆ ಸೂರಿಕುಮೇರು ರಾಮಕೃಷ್ಣ ಶಾಸ್ತ್ರಿ ಪಡಾರು ಹಾಗೂ ಸುಮಾ ಆರ್ ಶಾಸ್ತ್ರಿ ದಂಪತಿಯ ಪುತ್ರಿ. ಶಾಲಾ ವಿದ್ಯಾರ್ಥಿನಿಯರಾದ ಅವರ್ಣೀಯ ಬಂಗೇರ ಹಾಗೂ ಶ್ರೇಷ್ಠ ಆಳ್ವ ತಲಾ 586 ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಫಲಿತಾಂಶ ಪಡೆದಿರುತ್ತಾರೆ.
ಶೇ.100 ಫಲಿತಾಂಶ ದಾಖಲಿಸಿರುವ ಈ ಶಾಲೆಯ 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮ ಶೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿ ನಿಯನ್ನು ಹಾಗೂ ಎಲ್ಲಾ ವಿದ್ಯಾರ್ಥಿ ಗಳನ್ನು ಶಾಲಾ ಸಂಚಾಲಕ ಪ್ರಹ್ಲಾದ್ ಶೆಟ್ಟಿ, ಆಡಳಿತಾಧಿಕಾರಿ ಸಿ.ಶ್ರೀಧರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗ್ರೇಸ್ ಪಿ ಸಲ್ಡಾನ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

No comments:

Post a Comment