Thursday, May 2, 2013

ಸ್ನೇಹಕ್ಕಾಗಿ ಸ್ವಂತ ಪತಿರಾಯನಿಗೆ ಇಬ್ಬರು ಸ್ನೇಹಿತೆಯರನ್ನು ಮದುವೆ ಮಾಡಿಸಲು ಮುಂದಾದ ಸೌದಿಯ ಯುವತಿ:ವೆರಿ ಇಂಟ್ರಸ್ಟಿಂಗ್ಮಂಜೇಶ್ವರ:ಯುವತಿಯೊಬ್ಬಳು ತಾನು ಮದುವೆಯಾಗುವಾಗ ತನ್ನ ಇಬ್ಬರು ಅಪ್ತ ಸ್ನೇಹಿತೆಯರನ್ನೂ ಕೂಡಾ ಮದೆವೆಯಾಗಬೇಕೆಂಬ  ಹಠವನ್ನು ಪ್ರದರ್ಶಿದ ಬಗ್ಗೆ ಸೌದಿ ಅರೇಬಿಯಾದ ಪಶ್ಚಿಮ ಪಟ್ಟಣದ ತೈಫಾ ದಿಂದ ವರದಿಯಾಗಿದೆ.
ಸೌದಿಯಲ್ಲಿ ಶಾಲಾ ಶಿಕ್ಷಕಿಯಾಗಿರುವ ಯುವತಿಯೊಬ್ಬಳು ತನ್ನ ಮದುವೆಯಾಗುವ ಮದುಮಗ ತನ್ನ ಇಬ್ಬರು ಅಪ್ತ ಸ್ನೇಹಿತರನ್ನೂ ಮದುವೆಯಾಗದ ಹೊರತು ತಾನು ನಿನ್ನನ್ನು ಮದುವೆಯಾಗುವುದಿಲ್ಲವೆಂಬ ಆಶ್ಚರ್ಯಕರವಾದ ಹೇಳಿಕೆಯನ್ನು ನೀಡಿ ಹೆಣ್ಣು ಕುಲಕ್ಕೇ ಒಂದು ಕಲಂಕವನ್ನು ತಂದು ಹಾಕಿದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾಳೆ.
ಸೌದಿಯ ಯುವಕನೋರ್ವ ತಾನು ಮೆಚ್ಚಿದ ಯುವತಿಯನ್ನು ಮದುವೆಯಾಗಲು ಹೋದಾಗ ಆಕೆ ತನ್ನ ಇಬ್ಬರು ಸ್ನೇಹಿತರನ್ನೂ ಕೂಡಾ ಮದುವೆಯಾಗಲು ತಿಳಿಸಿದ್ದು ಅದರ ನಂತ್ರವೇ ನಾನು ನಿನ್ನನು ಮದುವೆಯಾಗುವುದಾಗಿ ತಿಳಿಸಿದ್ದಳು. ಇದೊಂದು ತಮಾಷೆಯಾಗಿರಬಹುದೆಂದು ಬಾವಿಸಿದ ಪ್ರಿಯತಮನಿಗೆ ನಂತ್ರವೇ ಗೊತ್ತಾದದ್ದು ಇದರ ನಿಜ ಸ್ಥಿತಿ. ಆಕೆಯ ಬೇಡಿಕೆಯನ್ನು ತನ್ನ ಸಂಭಂಧಿಕರ ಮುಂದಿಟ್ಟ ಪ್ರಿಯತಮ ಕೊನೆಗೆ ಶಾಲಾ ಶಿಕ್ಷಿಕಿಯ ಮಾತಿಗೆ "ಡನ್" ಆಗಿ ಅವಳ ಇಬ್ಬರು ಸ್ನೇಹಿತೆಯರನ್ನೂ ಮದುವೆಯಾಗಲು ಸಿದ್ದನಾಗಿರುವುದಾಗಿ ಸೌದಿ ಅರೇಬಿಯಾದ ಅರಬಿಕ್ ಧೈನಿಕ ಪತ್ರಿಕೆಯೊಂದು ವರದಿ ಮಾಡಿದೆ.ಮದುವೆಯ ನಂತ್ರ ಮೂವರು ಪತ್ನಿಯರಿಗೂ ಪ್ರತ್ಯೇಕ ಕೊಠಡಿಗಳನ್ನು ಬಾಡಿಗೆ ಪಡೆದಿದ್ದು ಪತಿ ಓರ್ವನೇ ಆಗಿರುವುದರಿಂದ ತನ್ನ ಸ್ನೇಹದ ಮೇಲೆ ಯಾವುದೇ ಪ್ರಭಾವ ಬೀರಬಾರದಾಗಿ ವಿನಂತಿಸಿ ಕೊಂಡಿದ್ದಾನೆ.
ಕರಾರಿನ ಪ್ರಕಾರ ಮೂವರು ಪತ್ನಿಯರ ಜೊತೆಗೂ ರಾತ್ರಿ ಸುಖವನ್ನು ಹಂಚುವುದಾಗಿ ಒಪ್ಪಂದ ಮಾಡಿದ್ದಾನೆ.ಮಾತ್ರವಲ್ಲದೆ ಶುಚಿತ್ವ ,ಮನೆ ಕೆಲಸ,ಅಡುಗೆ ಮೊದಲಾದ ಕಾರ್ಯಗಳಲ್ಲಿ ಸಮಾನತೆಯನ್ನು ಪಾಲಿಸಲು ವಿನಂತಿಸಿರುವುದಾಗಿ ಅರಬಿಕ್ ಧೈನಿಕ ಪ್ರಕಟಿಸಿದೆ

No comments:

Post a Comment