Wednesday, May 1, 2013

ದುಬೈ ಉದ್ಯೋಗಿ ಪತ್ನಿ ಕಟ್ಟಡ ಮಾಲಕನೊಂದಿಗೆ ಚಕ್ಕಂದನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ದುಬೈ ಉದ್ಯೋಗಿ ಪತ್ನಿಯಾದ ಮೂರು ಮಕ್ಕಳ ತಾಯಿಯೊಬ್ಬಳು ಕಟ್ಟಡ ಮಾಲಕನೊಂದಿಗೆ ಚಕ್ಕಂದವಾಡುತ್ತಾ ರಾತ್ರಿ ಸಮಯಗಳಲ್ಲಿ ಅವನ ಐಷಾರಾಮಿ ಕಾರಿನಲ್ಲಿ ತಿರುಗುತ್ತಿರುವ ಬಗ್ಗೆ ಇಲ್ಲಿಗೆ ಸಮೀಪದ ಹೊಸಂಗಡಿಯಿಂದ ತಡವಾಗಿ ಬೆಳಕಿಗೆ ಬಂದಿದೆ.
ಹೊಸಂಗಡಿ ಸಮೀಪದ ಮಜಿಬೈಲು ನಿವಾಸಿಯಾದ ದುಬೈಯಲ್ಲಿ ಉದ್ಯೋಗಿಯಾಗಿರುವ 3 ಮಕ್ಕಳ ತಾಯಿಯೊಬ್ಬಳು ಹೊಸಂಗಡಿ ಜಂಕ್ಷನ್ ನಲ್ಲಿರುವ ಫ್ಲಾಟೊಂದರಲ್ಲಿ ಬಾಡಿಗೆಯಲ್ಲಿದ್ದು ಇದೀಗ ಮಹಿಳೆ ಅದೇ ಕಟ್ಟಡದ ಮಾಲಕನೊಂದಿಗೆ ಚಕ್ಕಂದವಾಡುತ್ತಿರುವುದಾಗಿ ಸ್ಥಳೀಯರಿಂದ ತಿಳಿದು ಬಂದಿದೆ. 2 ಮಕ್ಕಳ ತಂದೆಯಾಗಿರುವ ಕಟ್ಟಡದ ಮಾಲಕ ಮಂಜೇಶ್ವರ ಪಾವೂರು ಸಮೀಪದ ವ್ಯಕ್ತಿಯಾಗಿದ್ದು ಈತ ರವಿವಾರ  ರಾತ್ರಿ ಹೊತ್ತಿನಲ್ಲಿ ಮಹಿಳೆಯ ಫ್ಲಾಟಿಗೆ ನುಗ್ಗಿ ಸುಮಾರು ಹೊತ್ತು ಅಲ್ಲೇ ಚಕ್ಕಂದವಾಡಿ ನಂತ್ರ ಆಕೆಯನ್ನು ತನ್ನ ಐಷಾರಾಮಿ ಕಾರಿನಲ್ಲಿ ಕೂರಿಸಿ ತಿರುಗಾಡಿಸುತ್ತಿರುವುದಾಗಿ ಸ್ಥಳೀಯರ ಆರೋಪ. ಈಕೆಯಲ್ಲಿ ಕೆಲವರು ಅವಳ ಪತಿಯ ಬಗ್ಗೆ ವಿಚಾರಿಸುವಾಗ ವ್ಯತ್ಯಸ್ಥವಾದ ಉತ್ತರಗಳನ್ನು ನೀಡುತ್ತಿರುವುದರಿಂದ ಈಕೆಯ ಪತಿ ದುಬೈಯಲ್ಲಿ ಇರೂವುದು ಕೂಡಾ ಸುಳ್ಳಾಗಿರಬಹುದೆಂದು ಅಭಿಪ್ರಾಯಪಡುತ್ತಾರೆ.ಯಾವುದೇ ಉದ್ಯೋಗವಿಲ್ಲದ ಕಟ್ಟಡದ ಮಾಲಕನಿಗೆ ಡ್ರಗ್ಸ್, ಗಾಂಜಾ ರೀತಿಯ ವ್ಯಾಪರ ಕೂಡಾ ಇರುವುದಾಗಿ ಆರೋಪವಿದೆ.ಇತ್ತೀಚಿನ ಕೆಲವು ದಿನಗಳಿಂದ ಇವರ ಚಕ್ಕಂದವು ಮಿತಿ ಮೀರುತಿದ್ದು ಮೊದಲು ರಹಸ್ಯವಾಗಿ ನಡೆಯುತಿದ್ದ ಕೆಲವೊಂದು ಚಟುವಟಿಕೆಗಳು ಇದೀಗ ಬಹಿರಂಗವಾಗಿಯೇ ನಡೆಯುತ್ತಿರುವುದಾಗಿ ಕೇಳಿ ಬಂದಿದೆ.ಇದೀಗ ಮಕ್ಕಳಿಗೆ ಶಾಲೆಗೆ ರಜೆ ಇರುವ ಕಾರಣ ಕಟ್ಟಡ ಮಾಲಕನ "ಕೀಪ್" ಎಲ್ಲಿಗೋ  ಹೊರಗಡೆ ಹೋಗಿರುವುದಾಗಿ ತಿಳಿದು ಬಂದಿದೆ.

No comments:

Post a Comment