Monday, May 6, 2013

ಬಡಾಜೆ:ಪುಚ್ಚತ್ತಬೈಲ್ ನಲ್ಲಿ ತಾರಕ್ಕೇರಿದ ನೀರಿನ ಸಮಸ್ಯೆ:ಗ್ರಾಮಸ್ಥರು ಸಂಕಷ್ಟದಲ್ಲಿನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ 8 ನೇ ವಾರ್ಡ್ ಪುಚ್ಚತ್ತಬೈಲ್ ನಲ್ಲಿ ನೀರಿನ ಹಾಹಕಾರ ದಿನದಿಂದ ದಿನಕ್ಕೆ ಜಾಸ್ತಿಯಾಗುತಿದ್ದು ಇಲ್ಲಿಯ ಜನತೆ ಒಂದು ತೊಟ್ಟು ನೀರಿನ ಹನಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಬಂದೊದಗಿದೆಯಾದರೂ ಪಂಚಾಯತ್ ಅಧಿಕೃತರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದಾಗಿ ಇಲ್ಲಿಯ ಸ್ಥಳೀಯರಿಂದ ಕೇಳಿ ಬಂದಿದೆ.
2009 ರಲ್ಲಿ ಜಿಲ್ಲಾ ಪಂಚಾಯತಿನ ವತಿಯಿಂದ ಮಂಜೇಶ್ವರ ಗ್ರಾ.ಪಂ.ಸಹಯೋಗದಲ್ಲಿ ಬಡಾಜೆ ವಿಲೇಜಿನ ಪುಚ್ಚತ್ತಬೈಲ್ ಗೆ ಕುಡಿಯುವ ನೀರಿನ ಪದ್ದತಿಗಾಗಿ ಗೇರುಕಟ್ಟೆ ಮಚ್ಚಂಪ್ಪಾಡಿ ರಸ್ತೆ ಸಮೀಪ ಸುಮಾರು 10 ಲಕ್ಷ ಖರ್ಚು ಮಾಡಿ ದೊಡ್ಡದಾದ ಕಾಂಕ್ರಿಟ್ ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡಲು ಪುಚ್ಚತ್ತಬೈಲ್ ತನಕ ಪೈಪ್ ಗಳನ್ನು ಅಳವಡಿಸಿ ಇದುವರೇಗೂ ನೀರು ಸರಬರಾಜು ವ್ಯವಸ್ಥೆಯನ್ನು ಪೂರ್ತೀಕರಿಸಲು ಸಾದ್ಯವಾಗಿಲ್ಲವೆಂದು ಇಲ್ಲಿಯ ಗ್ರಾಮಸ್ಥರು ಆರೋಪಿಸುತ್ತಾರೆ.ಲಕ್ಷಗಟ್ಟಲೆ ಖರ್ಚು ಮಾಡಿ ನೀರು ಸರಬರಾಜಿಗೆಂದು ಅಳವಡಿಸಲಾದ ಪೈಪುಗಳು ತುಕ್ಕುಹಿಡಿದು ನಾಶಗೊಂಡಿವೆ.ಇದುವರೇಗೂ ಕುಡಿಯುವ ನೀರಿನ ಪದ್ದತಿಯ ಬಗ್ಗೆ ಮಂಜೇಶ್ವರ ಗ್ರಾ.ಪಂ.ಯಾವುದೇ ಚಕಾರವನ್ನು ಕೂಡಾ ಎತ್ತದೆ ಮೌನವಾಗಿರುವುದಾಗಿ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.ಇದೀಗ ಇಲ್ಲಿಯ ಗ್ರಾಮಸ್ಥರು ನೀರಿಲ್ಲದೆ ಪರದಾಡುತಿದ್ದು ಒಂದು ತೊಟ್ಟು ನೀರಿನ ಹನಿಗಾಗಿ ಮೈಲು ಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಇವರಿಗೆ ಬಂದೊದಗಿದೆ.ಹಲವಾರು ವರ್ಷಗಳಿಂದ ಮುಸ್ಲಿಂ ಲೀಗ್ ಕೋಟೆಯಾಗಿದ್ದ ವಾರ್ಡ್ ನಲ್ಲೊಂದು ಬದಲಾವಣೆ ತರಲೆಂದು ಇಲ್ಲಿಯ ಮತದಾರರು ಸಲದ ಗ್ರಾ.ಪಂ.ಚುನಾವಣೆಯಲ್ಲಿ ಎಸ್.ಡಿ.ಪಿ. ಸದಸ್ಯೆಯನ್ನು ಸಲ ಅಧಿಕಾರಕ್ಕೆ ತಂದಿದ್ದರೂ  ನೀರಿನ ಸಮಸ್ಯೆ ಹಾಗೆಯೇ ಮುಂದುವರಿದಿರುವುದಾಗಿ ನಾಗರಿಕರು ಆರೋಪಿಸುತಿದ್ದಾರೆ.ಹಲವು ರೀತಿಯ ವಾಗ್ದಾನಗಳನ್ನು ನೀಡಿ ಮತಯಾಚಿಸಿದ ರಾಜಕೀಯ ಪ್ರತಿನಿಧಿಗಳು ಪುಚ್ಚತ್ತಬೈಲ್ ನಿವಾಸಿಗಳ ನೀರಿನ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಳ್ಳಲು ಇಲ್ಲಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ

No comments:

Post a Comment