Saturday, May 4, 2013

ಮಂಜೇಶ್ವರ ಗ್ರಾ.ಪಂ.ಕಳಿಸಿದ ನೋಟೀಸು ಕೇವಳ ಬಿಳಿ ಹಾಳೆ ಮಾತ್ರ




ಮಂಜೇಶ್ವರ:ಪ್ರತಿಯೊಂದು ಕಾರ್ಯದಲ್ಲೂ ನಾ ಮುಂದು ಎಂದು ಹೇಳಿಕೊಂಡು ಬರುತ್ತಿರುವ ಇ-ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಜೇಶ್ವರ ಗ್ರಾ. ಪಂಚಾಯತ್ ಕಳಿಸಿದ ನೋಟೀಸಿನಲ್ಲಿ ಸಹಿ ಹಾಗು ಮುದ್ರೆ ಮಾತ್ರ ಕಾಣಿಸುತಿದ್ದು ಬಾಕಿ ಕೇವಲ ಬಿಳಿ ಹಾಳೆ ಕಾಣುತಿದ್ದು ಇದೊಂದು ಪಂಚಾಯತ್ ಅಧಿಕೃತರ ಅನಾವಸ್ಥೆಗೊಂದು ಉದಾಹರಣೆಯಾಗಿದೆಂದು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಮಂಜೇಶ್ವರ ಹೊಸಂಗಡಿ ಜಂಕ್ಷನ್ ನಲ್ಲಿರುವ ಹೋಟೆಲುಗಳು,ಐಸ್ ಕ್ರೀಮ್ ಪಾರ್ಲರ್ ಗಳು ಮಲಿನ ನೀರು ತ್ಯಾಜ್ಯಗಳನ್ನು ಸಾರ್ವಜನಿಕರು ನಡೆದಾಡುವ ಸ್ಥಳದಲ್ಲಿರುವ ಚರಂಡಿಯಲ್ಲಿ ಹರಿಯಬಿಡಬಾರದೆಂದೂ,ಪ್ರತ್ಯೇಕ ಡ್ರೈನೇಜ್ ನಿರ್ಮಿಸಬೇಕೆಂದೂ ಪಂಚಾಯತ್ ವತಿಯಿಂದ ನೋಟೀಸು ಕಳಿಸಲಾಗಿದೆ.ಸೂಚಕ ದಿನಾಂಕದೊಳಗೆ ಡ್ರೈನೇಜ್ ವ್ಯವಸ್ಥೆ ಮಾಡದಿದ್ದರೆ ದಂಡ ಪಾವತಿಸಬೇಕೆಂದೂ ತಿಳಿಯಪಡಿಸಿ ನೋಟೀಸು ಕಾರ್ಯದರ್ಶಿಯ ಸಹಿ ಮತ್ತು ಮುದ್ರೆ ಹಾಗು ಕಳಿಸಿದ ದಿನಾಂಕ ಮಾತ್ರ ಗೋಚರವಾಗುತಿದ್ದು ಉಳಿದ ಬಾಗ ಸಂಪುರ್ಣ ಖಾಲಿಯಾಗಿದೆ.ಎಪ್ರಿಲ್ ೬ ರಂದು ಈ ನೋಟೀಸನ್ನು ರವಾನಿಸಲಾಗಿದೆ.ಒಂದು ತಿಂಗಳೊಳಗಾಗಿ ಡ್ರೈನೇಜ್ ವ್ಯವಸ್ಥೆ ಮಾಡಿ ಕೊಳ್ಳಲು ಪಂಚಾಯತ್ ತಿಳಿಸಿದೆ.ಆದರೆ ಅಕ್ಷರ ಶೂನ್ಯವಾದ ಬಿಳಿ ಕಾಗದವನ್ನು ನೋಟೀಸೆಂದು ಕಳಿಸಿ ಜನರನ್ನು ಮರಳು ಮಾಡುತ್ತಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.ಇನ್ನು ಮುಂದಕ್ಕಾದರೂ ಇ-ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪಂಚಾಯತಿನಲ್ಲಿ ಪಂಚಾಯತ್ ಅಧಿಕೃತರು ಇನ್ನಾದರೂ ಎಚ್ಚೆತ್ತುಗೊಳ್ಳುವರೇ ಇದು ಇಲ್ಲಿಯ ನಾಗರಿಕರ ಪ್ರಶ್ನೆಯಾಗಿದೆ.

No comments:

Post a Comment