Friday, May 3, 2013

ನಾಪತ್ತೆಯಾದ ಯುವಕ ಯುವತಿ ತೃಶೂರಿನಲ್ಲಿ ಪತ್ತೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಇತ್ತೀಚೆಗೆ ಉಪ್ಪಳದಿಂದ ನಾಪತ್ತೆಯಾದ ಯುವಕ ಹಾಗು ಯುವತಿ ತೃಶೂರಿನಲ್ಲಿ ಪತ್ತೆಯಾದ ಬಗ್ಗೆ ಮಂಜೇಶ್ವರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಉಪ್ಪಳ ಶಾರದಾನಗರ ಕಡಪ್ಪುರ ನಿವಾಸಿ ವೈಶಾಲಿ(೧೮) ಎಂಬಾಕೆ ಎಪ್ರಿಲ್ ೩೦ ರಂದು ನಾಪತ್ತೆಯಾದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಮಂಗಳೂರು ಕಾರ್ ಸ್ಟ್ರೀಟ್ ಕಾಲೇಜು ವಿದ್ಯಾರ್ಥಿನಿಯಾದ ವೈಶಾಲಿ ಎಪ್ರಿಲ್ ೩೦ ರಂದು ಕಾಲೇಜಿಗೆಂದು ಹೋದವಳು ನಂತ್ರ ಮರಳಿ ಬರಲಿಲ್ಲವೆಂದು ದೂರಲಾಗಿತ್ತು.ಇದೇ ವೇಳೆ ಐಲ ನಿವಾಸಿಯಾದ ಯುವಕ ಕೂಡಾ ನಾಪತ್ತೆಯಾದ ಬಗ್ಗೆ ಶಂಶಯವನ್ನು ವ್ಯಕ್ತಪಡಿಸಲಾಗಿತ್ತು.ಇದೇ ವೇಳೆ ವೈಶಾಲಿಯ ನಾಪತ್ತೆ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಂತೆ ತೃಶೂರಿನ ಏಡನಾಪಳ್ಳಿ ಪೊಲೀಸರು ಉಪ್ಪಳ ನಿವಾಸಿಗಳಾದ ಯುವಕ ಹಾಗು  ಯುವತಿಯನ್ನು ಬಂಧಿಸಿರುವುದಾಗಿ ಮಂಜೇಶ್ವರ ಠಾಣೆಗೆ ಮಾಹಿತಿ ಲಭಿಸಿದೆ.ಇದರಂತೆ ಮಂಜೇಶ್ವರ ಠಾಣೆಯ ಇಬ್ಬರು ಪೊಲೀಸರು ತೃಶೂರಿಗೆ ತೆರಳಿರುವುದಾಗಿ ತಿಳಿದು ಬಂದಿದೆ.

No comments:

Post a Comment