Friday, May 3, 2013

ಯುವತಿಯ ಅತ್ಯಾಚರಕ್ಕೆ ಯತ್ನ:ಆರೋಪಿ ಪೊಲೀಸರ ಬಲೆಗೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರಸ್ತೆ ಬದಿಯಲ್ಲಿ ಮೀನು ಖರೀದಿಸಿ ರಿಕ್ಷಾಕ್ಕಾಗಿ ಕಾಯುತಿದ್ದ ಯುವತಿಯೊಬ್ಬಳನ್ನು ರಿಕ್ಷಾದಲ್ಲಿ ಕೊಂಡೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಇಲ್ಲಿಗೆ ಸಮೀಪದ ಪಾತೂರು ತಲಕ್ಕಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಪಾತೂರು ಸಮೀಪದ ತಲಕ್ಕಿಯಲ್ಲಿ ಮೀನು ಖರೀದಿಸಿ ಸಾಲೆತ್ತೂರಿಗೆ ಹೋಗಲು ರಿಕ್ಷಾಕ್ಕಾಗಿ ಕಾಯುತಿದ್ದ ಯುವತಿಯೊಬ್ಬಳನ್ನು ಸ್ಥಳೀಯ ರಿಕ್ಷಾ ಚಾಲಕನಾದ ಜಯಂತ್ ಎಂಬಾತ ತನ್ನ ರಿಕ್ಷಾದಲ್ಲಿ ಕೂರಿಸಿ ತಿರುಗಾಡಿಸಿ ನಿರ್ಜನ ಪ್ರದೇಶವೊಂದಕ್ಕೆ ಕೊಂಡೊಯ್ದು ಅತ್ಯಾಚಾರಕ್ಕೆ ಯತ್ನ ನಡೆಸಲು ಯತ್ನಿಸಿದಾಗ ಯುವತಿಯ ಬೊಬ್ಬೆಯಿಂದ ಪರಿಸರದವರು ಸೇರಿ ಆರೋಪಿ ಜಯಂತನನ್ನು ಕೈಯಾರೆ ಹಿಡಿದು ಹಿಗ್ಗಾ ಮಗ್ಗಾ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಮಂಜೇಶ್ವರ ಠಾಣಾಧಿಕಾರಿ ಬಿಜುಲಾಲ್ ತಂಡವು ಆರೋಪಿಯನ್ನು ಹಿಡಿದು ವೈದ್ಯಕೀಯ ತಪಾಸಣೆಗಾಗಿ ಮಂಜೇಶ್ವರ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ

No comments:

Post a Comment