Tuesday, May 7, 2013

ಮಿಸ್ಡ್ ಕಾಲ್ ಅವಾಂತರ:ಯುವಕರಿಗೆ ನಾಗರಿಕರಿಂದ ಗೂಸಾ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮೊಬೈಲ್ ಪೋನ್ ಮುಖಾಂತರ ಮಿಸ್ಡ್ ಕಾಲ್ ಮೂಲಕ ಪರಿಚಯಗೊಂಡ ಯುವತಿಯನ್ನು ಕಾಣಲು ಕೇರಳದ ಕೊಲ್ಲಂ ನಿಂದ ಬಂದ ಯುವಕರಿಬ್ಬರಿಗೆ ಊರಿನವರು ಹಿಗ್ಗಾಮಗ್ಗಾ ಥಳಿಸಿ ಓಡಿಸಿದ ಘಟನೆ ಇಲ್ಲಿಗೆ ಸಮೀಪದ ಉಪ್ಪಳದಲ್ಲಿ ನಡೆದಿದೆ.
ಉಪ್ಪಳದ ಯುವತಿಯೊಬ್ಬಳನ್ನು ಮಿಸ್ಡ್ ಕಾಲ್ ಮೂಲಕ ಪರಿಚಯಗೊಂಡ ಕೇರಳದ ಕೊಲ್ಲಂ ಯುವಕನೊಬ್ಬ ಅವಳನ್ನು ಕಾಣಲೆಂದು ತನ್ನ ಸ್ನೇಹಿತನ ಜತೆಯಾಗಿ ನಿನ್ನೆ ಉಪ್ಪಳಕ್ಕೆ ತಲುಪಿದ್ದ ಅದೇ ಹೊತ್ತಿನಲ್ಲಿ ಯುವತಿ ಕೂಡಾ ಪೇಟೆಗೆ ತಲುಪಿದ್ದಳು ಸಾಧಾರಣ ತಾಸುಗಳ ತನಕ ಇವರು ಸಂಭಾಷಣೆಯಲ್ಲಿ ನಿರತರಾಗಿದ್ದರು ಇದನ್ನು ಗಮನಿಸಿದ ಸ್ಥಳೀಯ ಕೆಲವು ಯುವಕರು ಅವರ ಬಳಿ ತೆರಳುತಿದ್ದಂತೆ ಯುವತಿ ತನ್ನ ದಾರಿ ಹಿಡಿದಳು ಜತೆಯಾಗಿ ಬಂದ ಯುವಕ ಕೂಡಾ ಸ್ಥಳದಿಂದ ಮಾಯವಾದ ಕೂಡಲೇ ಸ್ಥಳೀಯ ಯುವಕರು ಯುವತಿಯ ಜತೆ ಮಾತನಾಡಿದ ಯುವಕನನ್ನು ವಿಚಾರಿಸಿದಾಗ ತದ್ವಿರುದ್ದ ಹೇಳಿಕೆ ನೀಡಿದಾಗ ಪೇಟೆಯಲ್ಲೇ ಯುವಕರು ಆತನಿಗೆ ಸರಿಯಾಗಿ ಹಿಗ್ಗಾಮಗ್ಗಾ ಥಳಿಸಿದಾಗ ಮಿಸ್ಡ್ ಕಾಲ್ ಅವಾಂತರದ ಕಥೆಯನ್ನು ಸಾರ್ವಜನಿಕರ ಮುಂದೆ ಬಿಚ್ಚಿದ್ದಾನೆ.ಕೂಡಲೇ ಉಪ್ಪಳ ಕಂಟ್ರೋಲ್ ರೂಂ ಪೊಲೀಸರು ಸ್ಥಳಕ್ಕೆ ತಲುಪಿ ಮಿಸ್ಡ್ ಕಾಲ್ ಯುವಕನನ್ನು ವಶಕ್ಕೆ ತೆಗೆದು ಠಾಣೆಗೆ ಕರೆದೊಯ್ದು ಸಂಜೆ ವೇಳೆ ತಾಕೀತು ನೀಡಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.

No comments:

Post a Comment