Wednesday, May 1, 2013

ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು: ವಿವಾಹ ಕಾನೂನು ತಿದ್ದುಪಡಿಗೆ ಮುಂದಾದ ಕೇಂದ್ರ ಸರಕಾರ



ಬುಧವಾರ - ಮೇ -01-2013

ಹೊಸದಿಲ್ಲಿ,  ವಿವಾಹ ಕಾನೂನುಗಳಿಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸಚಿವ ಸಂಪುಟ ಯೋಚಿಸುತ್ತಿದೆ. ಕಾನೂನಿಗೆ ತಿದ್ದುಪಡಿಯಾದರೆ ವಿವಾಹ ವಿಚ್ಛೇದನದ ಸಂದರ್ಭದಲ್ಲಿ, ಮದುವೆಯ ಹಾಗೂ ಮದುವೆಯ ಮುಂಚಿನ ಅವಧಿ ಯಲ್ಲಿ ಗಂಡ ಸಂಪಾದಿಸಿದ ಆಸ್ತಿಯಲ್ಲಿ ಹೆಂಡತಿಗೆ ಸಮಾನ ಪಾಲು ಸಿಗುವುದ ಲ್ಲದೆ ಆತ ಪಿತ್ರಾರ್ಜಿತವಾಗಿ ಪಡೆದು ಕೊಂಡ ಅಥವಾ ಪಿತ್ರಾರ್ಜಿತವಾಗಿ ಸಿಗಬಹುದಾದ ಆಸ್ತಿಯಲ್ಲೂ ಪಾಲು ಸಿಗುತ್ತದೆ.
ಪ್ರಸ್ತಾಪಿತ ತಿದ್ದುಪಡಿಯು ‘ವಾಸದ ಆಸ್ತಿ’ (ರೆಸಿಡೆನ್ಶಿಯಲ್ ಪ್ರಾಪರ್ಟಿ) ಎಂಬ ಪದಕ್ಕೆ ಹೊಸ ವ್ಯಾಖ್ಯೆಯನ್ನು ನೀಡಬಯಸುತ್ತದೆ. ಹೊಸ ವ್ಯಾಖ್ಯೆಯ ಪ್ರಕಾರ, ‘ವಾಸದ ಆಸ್ತಿ’ ಎಂದರೆ ವಾಸಿಸುವ ಮನೆ ಮಾತ್ರವಲ್ಲ, ಗಂಡ ಸಂಪಾದಿಸಿದ ಇತರ ಆಸ್ತಿಗಳೂ ಸೇರುತ್ತವೆ.
ಗಂಡ ಮಾತ್ರವಲ್ಲದೆ ಕುಟುಂಬದ ಇತರ ಸದಸ್ಯರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಹೊಂದಿದ್ದರೆ ಹಾಗೂ ಅದನ್ನು ವಿಭಜಿಸುವುದು ಅವಾಸ್ತವಿಕ ವಾದರೆ, ವಿಚ್ಛೇದಿತ ಹೆಂಡತಿಯ ಪಾಲಿಗೆ ಬರಬೇಕಾದ ಪಾಲಿಗೆ ಸಮಾನವಾದ ಹಣವನ್ನು ಕೊಡಬೇಕು ಎಂಬ ಪ್ರಸ್ತಾಪವನ್ನು ತಿದ್ದುಪಡಿ ಹೊಂದಿದೆ.
ಆಸ್ತಿಯನ್ನು ಮದುವೆಗೆ ಮುಂಚಿತ ವಾಗಿ ಸಂಪಾದಿಸಿದ್ದೇ ಅಥವಾ ಮದುವೆಯ ನಂತರವೇ ಹಾಗೂ ಆಸ್ತಿ ಗಂಡನ ಹೆಸರಿನಲ್ಲಿ ಮಾತ್ರ ಇದೆಯೇ ಅಥವಾ ಜಂಟಿ ಹೆಸರಿನಲ್ಲಿದೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು ನೀಡಬೇಕೆಂದು ತಿದ್ದುಪಡಿ ಸೂಚಿಸುತ್ತದೆ.
ವಿವಾಹ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ನಾಗರಿಕ ಸಮಾಜ ಮತ್ತು ಒಂದು ವರ್ಗದ ಸಂಸದರ ಒತ್ತಡದ ಹಿನ್ನೆಲೆಯಲ್ಲಿ ರೂಪಿಸಲಾಗು ತ್ತಿದೆ. ಇದು ಬುಧವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ.
ಹಿಂದೂ ವಿವಾಹ ಕಾಯ್ದೆ, 1955 ಮತ್ತು ವಿಶೇಷ ವಿವಾಹ ಕಾಯ್ದೆ, 1954- ಇವುಗಳಿಗೆ ಸರಕಾರ ಈ ಮೊದಲು ತಿದ್ದುಪಡಿ ತಂದಿತ್ತು. ಮುರಿದು ಹೋದ ವಿವಾಹವನ್ನು ಸರಿಪಡಿಸು ವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿ ವಿಚ್ಛೇದನ ಪಡೆದುಕೊಳ್ಳುವ ಅವಕಾಶ ವನ್ನು ತಿದ್ದುಪಡಿ ಮೂಲಕ ನೀಡಲಾಗಿತ್ತು.

No comments:

Post a Comment