Wednesday, May 1, 2013

ಪೆಟ್ರೋಲ್ ದರದಲ್ಲಿ 3 ರೂ. ಇಳಿಕೆ ಮೇ -01-2013

ಹೊಸದಿಲ್ಲಿ, : ಜನಸಾಮಾನ್ಯ ಸಮಾಧಾನದ ನಿಟ್ಟುಸಿರೆಳೆಯುವಂತಹ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರಕಾರವು ಮಂಗಳವಾರ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 3 ರೂ.ಗಳಷ್ಟು ಇಳಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ದರದಲ್ಲಿ ಇಳಿಕೆ ಮಾಡಲಾಗಿದೆ.   ಪರಿಷ್ಕೃತ ಪೆಟ್ರೋಲ್ ದರಗಳು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಬೆಲೆ ಕುಸಿತದ ಬಳಿಕ ದೇಶದ ನಾಲ್ಕು ಮಹಾನಗರಗಳಲ್ಲಿನ ಪರಿಷ್ಕೃತ ಪೆಟ್ರೋಲ್ ದರಗಳು (ಪ್ರತಿ ಲೀ.ಗೆ) ಹೀಗಿವೆ. ದಿಲ್ಲಿಯಲ್ಲಿ 63.09 ರೂ., ಕೋಲ್ಕತಾ 70.35 ರೂ., ಮುಂಬೈ 69.73 ರೂ., ಚೆನ್ನೈ 65 ರೂ.ಕಳೆದ ಎರಡು ತಿಂಗಳುಗಳಲ್ಲಿ ಪೆಟ್ರೋಲ್ ದರದಲ್ಲಿ ಕುಸಿತವುಂಟಾಗಿರುವುದು ಇದು ನಾಲ್ಕನೆ ಸಲವಾಗಿದೆ. ಇದಕ್ಕೂ ಮುನ್ನ ಎಪ್ರಿಲ್ 15ರಂದು ಪೆಟ್ರೋಲ್ ದರದಲ್ಲಿ 2 ರೂ. ಕಡಿತವಾಗಿತ್ತು. ಎಪ್ರಿಲ್ ತಿಂಗಳಲ್ಲೇ ಮೂರು ಬಾರಿ ಪೆಟ್ರೋಲ್ ಬೆಲೆ ಇಳಿಕೆಯಾಗಿದೆ.

No comments:

Post a Comment