Monday, May 6, 2013

103ನೆ ವಯಸ್ಸಿನಲ್ಲೂ ಮತ ಚಲಾಯಿಸಿದ ಬುಡ್ಡಮ್ಮ...!!

103ನೆ ವಯಸ್ಸಿನಲ್ಲೂ ಮತ ಚಲಾಯಿಸಿದ ಬುಡ್ಡಮ್ಮ...!!


ಸೋಮವಾರ - ಮೇ -06-2013

ಕುಂದಾಪುರ, ಮೇ 5: ಯುವ ಜನತೆ ಹಾಗೂ ವಿದ್ಯಾವಂತರೇ ಮತದಾನ ಮಾಡಲು ಉದಾ ಸೀನತೆ ತೋರಿಸುವ ಇಂದಿನ ದಿನಗಳಲ್ಲಿ 103ರ ಹರೆಯದ ವೃದ್ಧೆಯೊಬ್ಬರು ಕಷ್ಟಪಟ್ಟು ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ತೆಕ್ಕಟ್ಟೆ ಸಮೀಪದ ಉಳ್ತೂರಿನ ನಿವಾಸಿ 103ರ ಇಳಿವಯಸ್ಸಿನ ಬುಡ್ಡಮ್ಮ ಪೂಜಾರ್ತಿ ಎಂಬವರು ಇಂದು ಬೆಳಗ್ಗೆ ತನ್ನ ಮಗಳು ಲಕ್ಷ್ಮೀಯ ಸಹಾಯದೊಂದಿಗೆ ಉಳ್ತೂರಿನ ಸರಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿ ಮತ ಚಲಾಯಿಸಿದರು.
ಬದುಕಿನಲ್ಲಿ ಮತದಾನ ಎಂಬುದು ಒಂದು ಹಕ್ಕಾಗಿದ್ದು ಅದನ್ನು ಬಿಡಲಾಗು ತ್ತದೆಯೇ ಎಂದು ಕುಂದಾಪುರ ಕನ್ನಡದಲ್ಲಿ ಹೇಳಿದರು. ತಾನು ಎಷ್ಟು ವಯಸ್ಸಿನಿಂದ ಮತದಾನ ಮಾಡುತ್ತಿದ್ದೇನೆಂಬುದು ಈಗ ನೆನಪಿಲ್ಲವಾದರೂ ಇನ್ನುಳಿದ ಅವಧಿಯಲ್ಲಿ ದೇಹದಲ್ಲಿ ಶಕ್ತಿ ಇರುವವರೆಗೆ ಮತದಾನ ಮಾಡುವುದಾಗಿ ಬೊಚ್ಚುಬಾಯಿ ಅಗಲಿಸಿ ಹೇಳಿದರು.
ಬುಡ್ಡಮ್ಮ ಪೂಜಾರ್ತಿಯ ಮಗಳು ಲಕ್ಷ್ಮೀ ಮಾತನಾಡಿ, ತನ್ನ ತಾಯಿ ಬಹಳ ಹಿಂದಿನಿಂದಲೂ ಮತದಾನ ಮಾಡುವುದನ್ನು ನೋಡಿದ್ದೇನೆ. ಈ ಇಳಿವಯಸ್ಸಿ ನಲ್ಲಿಯೂ ನಮ್ಮನ್ನು ಮನೆಯಿಂದ ಹೊರಡಿಸಿ ಮತದಾನಕ್ಕೆ ಕರೆತರುತ್ತಾರೆ. ಅವರ ಉತ್ಸಾಹ ನಮಗೆ ಮಾದರಿಯಾಗಿದೆ. ಅವರು ಮತದಾನವನ್ನು ಈವರೆಗೂ ತಪ್ಪಿಸಿಲ್ಲ ಎಂದರು. ಶತಕ ದಾಟಿದರೂ ಬುಡ್ಡಮ್ಮ ಮತಗಟ್ಟೆಗೆ ಆಗಮಿಸಿದ್ದು ನೋಡಿ ಮತಗಟ್ಟೆಯ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರೂ ಅಚ್ಚರಿ ವ್ಯಕ್ತಪಡಿಸಿದರು

No comments:

Post a Comment