Tuesday, May 7, 2013


ಅಮೆರಿಕದಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್!

 ಮೇ -07-2013

ಮುಂಬೈ,  ನಗರದಲ್ಲಿ ನಡೆಯುತ್ತಿರುವ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವಂಚನಾ ಜಾಲಕ್ಕೆ ಇನ್ನೊಂದು ಪ್ರಕರಣ ಸೇರ್ಪಡೆಗೊಂಡಿದೆ.
ಎಪ್ರಿಲ್ 15ರಂದು ಇಲ್ಲಿನ ಮಲಬಾರ್ ಹಿಲ್ಸ್ ನಿವಾಸಿ ರಾಲ್ಫೀ ಡಿಸೋಜ ತನ್ನ ಬ್ಯಾಂಕ್‌ನಿಂದ ಫೋನ್ ಕರೆಯೊಂದನ್ನು ಸ್ವೀಕರಿಸಿದರು. ಅಮೆರಿಕದ ವಾಲ್‌ಮಾರ್ಟ್ ಸ್ಟೋರ್‌ನಲ್ಲಿ ತನ್ನ ಪ್ರೈಮರಿ ಕ್ರೆಡಿಟ್ ಕಾರ್ಡ್‌ನಲ್ಲಿ ನಡೆದ 31,900 ರೂ. ವೌಲ್ಯದ ಪಾವತಿಗೆ ತಾವು ಅನುಮತಿ ನೀಡಿರುವಿರೇ ಎಂದು ಫೋನ್ ಕರೆ ಮಾಡಿದ ಬ್ಯಾಂಕ್ ಕೇಳಿತ್ತು. ಎಪ್ರಿಲ್ 24ರಂದು ಅವರಿಗೆ ಬ್ಯಾಂಕ್‌ನಿಂದ ಇನ್ನೊಂದು ಕರೆ ಬಂತು. 28,588 ರೂ. ಪಾವತಿಗೆ ಬ್ಯಾಂಕ್ ಅಂಗೀಕಾರ ಕೋರಿ ಫೋನ್ ಮಾಡಿತ್ತು. ಈ ಖರೀದಿಯನ್ನೂ ಅಮೆರಿಕದಲ್ಲೇ ಮಾಡಲಾಗಿತ್ತು. ಅವರ ಹೆಂಡತಿಯ ಹೆಸರಿನಲ್ಲಿದ್ದ ಆ್ಯಡ್-ಆನ್ ಕಾರ್ಡ್ ಮೂಲಕ ಖರೀದಿ ಮಾಡಲಾಗಿತ್ತು.
ಪಾಸ್‌ಪೋರ್ಟ್ ವಿವರಗಳು ಮತ್ತು ವಿವಾದ ಇತ್ಯರ್ಥ ದೂರು ಸಲ್ಲಿಸುವಂತೆ ಬ್ಯಾಂಕ್ ಗ್ರಾಹಕನಿಗೆ ಸೂಚಿಸಿದೆ. ಈ ಬಗ್ಗೆ ತನಿಖೆ ನಡೆಸಿ ಹಣ ಪಾವತಿ ಮನ್ನಾ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವುದಾಗಿ ಬ್ಯಾಂಕ್ ಹೇಳಿದೆ.

No comments:

Post a Comment