Thursday, April 4, 2013

ಸೌದಿಯಿಂದ ಕೆಲಸ ಬಿಡಿಸಿ ಓಡಿಸುತ್ತಿಲ್ಲ: ಕಾರ್ಣಿಕ್


ಸೌದಿಯಿಂದ ಕೆಲಸ ಬಿಡಿಸಿ ಓಡಿಸುತ್ತಿಲ್ಲ: ಕಾರ್ಣಿಕ್


- ಏಪ್ರಿಲ್ -04-2013

ಇಂತಹ ಸಮಸ್ಯೆಗಳಿಗೆ ಯೋಜನೆ ಇರುವುದಿಲ್ಲ
ಮಂಗಳೂರು: ಸೌದಿಯ ಆಂತರಿಕ ಕಾನೂನಿನ ಕಾರಣದಿಂದ ಭಾರತೀಯ ಉದ್ಯೋಗಿಗಳು ಸಮಸ್ಯೆಗೆ ಸಿಲುಕಿದ್ದಾರೆ ಎಂಬುದು ಸತ್ಯವಾದರೂ ಇದು ಈಗ ಪ್ರಚಾರವಾಗುತ್ತಿರುವಷ್ಟು ಗಂಭೀರ ಸಮಸ್ಯೆ ಅಲ್ಲ ಎಂದು ಸೌದಿಯ ನಿತಾಕತ್ ಕಾನೂನಿನ ಕುರಿತಂತೆ ವಿಧಾನ ಪರಿಷತ್ ಸದಸ್ಯ, ಅನಿವಾಸಿ ಭಾರತೀಯ ವ್ಯವಹಾರಗಳ ಸಮಿತಿಯ ಮಾಜಿ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಪ್ರತಿಕ್ರಿಯಿಸಿದ್ದಾರೆ.
ಸೌದಿಯ ಸ್ವದೇಶೀಕರಣದಿಂದಾಗಿ ಸಾವಿರಾರು ಭಾರತೀಯರು ಸಂತ್ರಸ್ತರಾಗಿದ್ದಾರೆ. ಆದರೆ ಇಂತಹ ಸಮಸ್ಯೆ ಗಳಿಗೆ ಸ್ಪಂದಿಸಲು ಕೇಂದ್ರ ಸರಕಾರದ ಬಳಿಯಾಗಲಿ, ರಾಜ್ಯ ಸರಕಾರದ ಬಳಿಯೇ ಆಗಲಿ ಯಾವುದೇ ಯೋಜನೆ ಇಲ್ಲ. ಸೌದಿಯಿಂದ ಯಾರನ್ನೂ ಕೆಲಸ ಬಿಡಿಸಿ ಓಡಿಸುತ್ತಿಲ್ಲ. ಗಾಬರಿಯಿಂದ ಜನರು ಕೆಲಸ ಬಿಟ್ಟು ಬರುತ್ತಿದ್ದಾರೆ ಎಂದು ಕಾರ್ಣಿಕ್ ನುಡಿದರು.
ಭಾರತದೊಂದಿಗೆ ಸೌದಿ ಅರೇಬಿಯಾದ ಸಂಬಂಧ ಚೆನ್ನಾಗಿದೆ. ಇಂತಹ ಸಂಬಂಧ ಕಳೆದುಕೊಳ್ಳಲು ಯಾವುದೆ ದೇಶ ಸಿದ್ಧವಿರುವುದಿಲ್ಲ. ಆದುದರಿಂದ ಸೌದಿ ಆಡಳಿತ ಭಾರತೀಯ ಉದ್ಯೋಗಿಗಳನ್ನು ಸಂಕಟದಲ್ಲಿ ಸಿಲುಕಿಸುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಪಾಸ್‌ಪೋರ್ಟ್, ವೀಸಾ ಮತ್ತಿತರ ಕಾನೂನು ತೊಡಕುಗಳು ಇದ್ದರೆ ನಿವಾರಿಸಲು ಭಾರತೀಯ ರಾಯಭಾರಿ ಕಚೇರಿಯ ವತಿಯಿಂದ ಸಹಾಯ ಒದಗಿಸಲಾಗುತ್ತದೆ. ಆದರೆ ಕಂಪೆನಿಗಳು ಉದ್ಯೋಗಿಗಳನ್ನು ಕೆಲಸ ದಿಂದ ತೆಗೆದು ಹಾಕಿದರೆ ಏನೂ ಮಾಡಲಾಗುವುದಿಲ್ಲ ಎಂದು ಗಣೇಶ್ ಕಾರ್ಣಿಕ್ ಮಾಹಿತಿ ನೀಡಿದ್ದಾರೆ

No comments:

Post a Comment