Saturday, April 6, 2013

ಬಹುಪತ್ನಿ ವಲ್ಲಭನಿಗೆ ತೂಮಿನಾಡಿನಲ್ಲಿ ಸಾರ್ವಜನಿಕರಿಂದ ಗೂಸಾ




ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಹಣವನ್ನು ಪಡೆದು ಅಲ್ಲಲ್ಲಿ ಮದುವೆಯಾಗಿ ಬಡ ಹೆಣ್ಣು ಮಕ್ಕಳನ್ನು ವಂಚಿಸುತಿದ್ದ ಬಹುಪತ್ನಿ ವಲ್ಲಭನಿಗೆ ಸಾರ್ವಜನಿಕರು ಸೇರಿ ಗೂಸಾ ನೀಡಿದ ಘಟನೆ ಇಲ್ಲಿಗೆ ಸಮೀಪದ ತೂಮಿನಾಡು ನಲ್ಲಿ ನಡೆದಿದೆ.
ಕೇರಳ ಕಣ್ಣೂರು ನಿವಾಸಿ ಮುನೀರ್ ಎಂಬವನೇ ಸಾರ್ವಜನಿಕರಿಂದ ಥಳಿತಕ್ಕೊಳಗಾದವನು.ಈತ ಕೇರಳ ಕರ್ನಾಟಕ ಸೇರಿದಂತೆ ಸುಮಾರು ಸ್ಥಳಗಳಲ್ಲಿ ತನ್ನ ಹೆಸರನ್ನು ಬದಲಾಯಿಸಿ ಕೊಂಡು ಬಡ ಕುಟುಂಬವನ್ನು ಗುರುತಿಸಿ ಅವರಿಂದ  ಹಣವನ್ನು ಪಡೆದು ಮದುವೆಯಾಗಿ ವಂಚಿಸಿರುವುದಾಗಿ ದೂರಲಾಗಿದೆ. ಇತ್ತೀಚೆಗೆ ತೂಮಿನಾಡಿಗೆ ತಲುಪಿದ  ಈತ  ಕಣ್ಣೂರು ನಿವಾಸಿಯಾದ ನನಗೆ ಯಾರು ಇಲ್ಲ ನನಗೊಂದು ಮದುವೆಯಾಗಬೇಕೆಂದು ಬಡಕುಟುಂಬವನ್ನು ನಂಬಿಸಿದ್ದ.ಇದರಂತೆ  ತೂಮಿನಾಡು ನಿವಾಸಿಯಾದ ಒಂದು ಬಡ ಕುಟುಂಬದಲ್ಲಿರುವ ಒಂದು ಹೆಣ್ಣನ್ನು ಈತನಿಗೆ ಮದುವೆ ಮಾಡಿ ಕೊಡಲಾಗಿತ್ತು.ಮಾತ್ರವಲ್ಲದೆ ಆತನಿಗೆ ಒಂದು ಲಕ್ಷ ವರದಕ್ಷಿಣೆ ನೀಡಲು ಕೂಡಾ ಕರಾರು ಆಗಿತ್ತು ಮದುವೆ ಸಂದರ್ಭದಲ್ಲಿ ಆತನಿಗೆ ೫೦ ಸಾವಿರ ನೀಡಲಾಗಿತ್ತು ನಂತ್ರ ಸ್ವಲ್ಪ ಕಳೆದು ಬಾಕಿ ಹಣ ನೀಡಲಾಗುವುದೆಂದು ಹೇಳಲಾಗಿತ್ತು.ಇದರಂತೆ ಒಂದು ತಿಂಗಳು ಯಾವುದೇ ತೊಂದರೆಯಿಲ್ಲದೆ ಪತಿ ಪತ್ನಿಯಾರಾಗಿ ಜೀವಿಸುತಿದ್ದರು. ದಿವಸ ಮೊದಲು ಈತ ಕಣ್ಣೂರಿನಿಂದ ದೂರವಾಣಿ ಮೂಲಕ ಪತ್ನಿಯನ್ನು ಸಂಪರ್ಕಿಸಿ ತಾನು ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುವುದಾಗಿ ನಂಬಿಸಿ ಚಿಕಿತ್ಸೆಗೆ ೫೦ ಸಾವಿರ ಕೂಡಲೇ ಕಲಿಸಿ ಕೊಡಬೇಕೆಂದು ಬೇಡಿಕೆ ಇಟ್ಟನೆನ್ನಲಾಗಿದೆ.ಇದರಂತೆ ಹೆಣ್ಣಿನ ಸಹೋದರರು ಕಣ್ಣೂರಿಗೆ ತಲುಪಿ ವಿಚಾರಿಸಿದಾಗ ಈತ ಹಲವು ಮದುವೆಯಾಗಿ ಬಡ ಹೆಣ್ಣು ಮಕ್ಕಳನ್ನು ವಂಚಿಸಿದ ವಿಷಯ ಬಯಲಿಗೆ ಬಂದಿದೆ.ಆಸ್ಪತ್ರೆಯಲ್ಲೂ ಹುಡುಕಿದಾಗಲೂ ಬಹುಪತ್ನಿ ವಲ್ಲಭನ ಪತ್ತೆಯಾಗಲಿಲ್ಲ.ನಂತ್ರ ಅವನು ಮದುವೆಯಾಗಿದ್ದ ಇನ್ನೊಂದು ಹೆಂಡ್ತಿಯ ಮನೆಯಲ್ಲಿ ವಿಚಾರಿಸಿದಾಗ ಆತ ಮಂಗಳೂರಿಗೆ ತೆರಳಿರುವುದಾಗಿ ತಿಳಿದು ಬಂತು ಅದರಂತೆ ಹೆಣ್ಣಿನ ಸಹೋದರರು ಮಂಗಳೂರಿಗೆ ತಲುಪಿ ಹೇಗಾದರೂ ಅವನನ್ನು ಪತ್ತೆ ಹಚ್ಚಿ ತೂಮಿನಾಡಿಗೆ ಕರೆಕೊಂಡು ಬಂದು ಸಾರ್ವಜನಿಕರು ಸೇರಿ ಹಿಗ್ಗಾ ಮಗ್ಗಾ ಥಳಿಸಿದ್ದಾರೆ.ಆವಾಗ ಆತ ಮದುವೆಯಾಗಿರುವುದಾಗಿ ಒಪ್ಪಿರುವುದಾಗಿ ತಿಳಿದು ಬಂದಿದೆ. ಈತನನ್ನು ಪೊಲೀಸರಿಗೆ ಒಪ್ಪಿಸಲು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು.ಇಂದು ಬೆಳಿಗ್ಗೆ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಬಹುಪತ್ನಿ ವಲ್ಲಭ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.ಇದೀಗ ತೂಮಿನಾಡಿನ ನಾಗರಿಕರು ಬಹುಪತ್ನಿ ವಲ್ಲಭ ಹುಡುಕಾಟದಲ್ಲಿದ್ದಾರೆ.  (ಬಹುಪತ್ನಿ ವಲ್ಲಭನ ಚಿತ್ರ ಜತೆಗಿದೆ)

No comments:

Post a Comment