Monday, April 1, 2013

ಸಂಜಯ್ ಕ್ಷಮಾದಾನ ಮನವಿ: ರಾಜ್ಯಪಾಲರಿಂದ ಗೃಹ ಇಲಾಖೆಗೆಏಪ್ರಿಲ್ -01-2013


ಮುಂಬೈ,: ನಟ ಸಂಜಯ್ ದತ್ತ್‌ಗೆ ಕ್ಷಮಾದಾನ ನೀಡುವಂತೆ ಕೋರಿರುವ ಮನವಿಯೊಂ್ನದನ್ನು ಮಹಾರಾಷ್ಟ್ರದ ರಾಜ್ಯಪಾಲರಿಂದು ಅಭಿಪ್ರಾಯ ಕೇಳಿ ಗೃಹ ಇಲಾಖೆಗೆ ಕಳುಹಿಸಿದ್ದಾರೆ.
ಮಂಗಳವಾರ ಸಂಸದೆ ಜಯಪ್ರದಾ ಹಾಗೂ ಮಾಜಿ ಎಸ್ಪಿ ನಾಯಕ ಅಮರ ಸಿಂಗ್, ರಾಜ್ಯಪಾಲ ಕೆ. ಶಂಕರ ನಾರಾಯಾಣ್‌ನ್‌ರನ್ನು ಭೇಟಿಯಾಗಿ, 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನಿಂದ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲ್ಪಟ್ಟಿರುವ ಸಂಜಯ್‌ಗೆ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದರು.
ನಟನಿಗೆ ಕ್ಷಮೆ ನೀಡುವಂತೆ ವಿನಂತಿಸಿದ ಸಿಂಗ್, ದತ್ತ್ ಭಯೋತ್ಪಾದಕನಲ್ಲವೆಂದು ವಿಚರಣಾ ಹಾಗೂ ಸುಪ್ರೀಂಕೋರ್ಟ್‌ಗಳೆರಡೂ ಹೇಳಿವೆ. ಮಾಧ್ಯಮಗಳೇ ದತ್ತ್‌ರ ವಿಚಾರಣೆ ನಡೆಸಿವೆ. ಘಟನೆ ನಡೆದು 20 ವರ್ಷಗಳಾಗಿವೆ. ಅವರಿಗೀಗ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಈಗ ಗಾಂಧೀಜಿಯವರ ಕುರಿತು ಮಾತನಾಡುತ್ತಾರೆ ಎಂದಿದ್ದಾರೆ.
ಸಂಜತ್‌ರ ಕಿರು ಅವಧಿಯ ಸಮಾಜವಾದಿ ಪಕ್ಷದ ರಾಜಕೀಯ ಜೀವನದ ವೇಳೆ ಅಮರ್ ಸಿಂಗ್ ಅವರ ಗುರುವಾಗಿದ್ದರು.
ಅನಧಿಕೃತವಾಗಿ ಎಕೆ- 56 ರೈಫಲ್ ಸಹಿತ ಆಯುಧಗಳನ್ನು ಹೊಂದಿದ್ದ ಆರೋಪದಲ್ಲಿ ಸಂಜಯ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂಕೋರ್ಟ್ 5 ವರ್ಷಕ್ಕೆ ಇಳಿಸಿದೆ.
ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಕಟ್ಟು ಸಹಿತ ಕೆಲವರು ದತ್ತ್‌ಗೆ ಕ್ಷಮೆ ನೀಡುವಂತೆ ಆಗ್ರಹಿಸುತ್ತಿದ್ದರೆ. ಹಲವರು ಅದನ್ನು ವಿರೋಧಿಸುತ್ತಿದ್ದಾರೆ

No comments:

Post a Comment