Tuesday, April 16, 2013

ಮಂಜೇಶ್ವರದಲ್ಲಿ ಶಾಂತಿ ಸಭೆಯ ಉಲ್ಲಂಘನೆ:ಬಿ.ವಿ.ರಾಜನ್ ಆರೋಪ
ಕುಂಜತ್ತೂರು:ಮಂಜೇಶ್ವರದ ಹೊಸಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಕಿರುವ ಧ್ವಜಗಳ ತೋರಣಗಳು  ಮೊದಲು ಪೊಲೀಸ್ ಅಧಿಕಾರಿಗಳಸಮ್ಮುಖದಲ್ಲಿ ಕೈಗೊಂಡಿರಲಾಗಿರುವ ತಿರ್ಮಾನಕ್ಕೆ ವಿರುದ್ದವಾಗಿದ್ದು ಇದೊಂದು ಶಾಂತಿ ಸಭೆಯ ಉಲ್ಲಂಘನೆಯಾಗಿರುವುದಾಗಿ ಸಿಪಿಐ ಜಿಲ್ಲಾ ಕಾರ್ಯನಿರ್ವಾಹಕಸಮಿತಿ ಸದಸ್ಯರಾದ ಬಿ.ವಿ.ರಾಜನ್ ರವರು ಆರೋಪಿಸಿದ್ದಾರೆ.

  ಮೊದಲು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ  ನಡೆದ ಎಲ್ಲಾ ರಾಜಕೀಯ ನೇತಾರರ ಶಾಂತಿ ಸಭೆಯಲ್ಲಿ ಹೊಸಂಗಡಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳುಧ್ವಜ ಅಥವಾ ತೋರಣಗಳನ್ನು ಹಾಕಬಾರದಾಗಿ ಕಟ್ಟುನಿಟ್ಟಿನ ತೀರ್ಮಾನವನ್ನು ಕೈಗೊಂಡಿತ್ತುಇದೀಗ ಕೆಪಿಸಿಸಿ ಅಧ್ಯಕ್ಷರಾದ ರಮೇಶ್ ಚೆನ್ನಿತ್ತಲ ರವರು ನೇತೃತ್ವನೀಡುವ ಕೇರಳ ಯಾತ್ರೆಯ ಪ್ರಚರಣಾರ್ಥ ಹೊಸಂಗಡಿಯ ಸರ್ಕಲ್ ನಲ್ಲಿ ಕಾಂಗ್ರೆಸ್ ಪಕ್ಷದವರು ಹಾಕಿರುವ ತೋರಣಗಳು ವಿವಾದಕ್ಕೆ ಎಡೆ ಮಾಡಿ ಕೊಟ್ಟಿದೆ. ಬಗ್ಗೆಸಿಪಿಐ ಮಂಜೇಶ್ವರ ಮಂಡಲ ಸಮಿತಿ ಮಂಜೇಶ್ವರ ಠಾಣಾಧಿಕಾರಿಗೆ ದೂರು ನೀಡಿದ್ದು ದೂರಿಗೆ ಸ್ಪಂಧಿಸಿದ ಕುಂಬಳೆ ಸರ್ಕಲ್ ಟಿ.ಪಿ.ರಂಜಿತ್ ಇವತ್ತು ಎಲ್ಲಾ ರಾಜಕೀಯಪಕ್ಷದವರನ್ನು ಶಾಂತಿ ಸಭೆಗಾಗಿ ಆಹ್ವಾನಿಸಿದ್ದರು.ಇವತ್ತಿನ ಶಾಂತಿ ಸಭೆಯ ಆಹ್ವಾನಕ್ಕೆ ಸಿಪಿಐ,ಸಿಪಿಐ(ಎಂ),ಎಸ್ ಡಿ ಪಿ  ಮಾತ್ರ ಹಾಜರಾಗಿದ್ದು ಅಧಿಕಾರದ ಚುಕ್ಕಾಣಿಹಿಡಿದಿರುವ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸಭೆಗೆ ಹಾಜರಾಗಲಿಲ್ಲ ಇದರಿಂದಾಗಿ ಶಾಂತಿ ಸಭೆಯಲ್ಲಿ   ಮೊದಲು ಚರ್ಚಿಸಿ ಕೈಗೊಂಡ  ತೀರ್ಮಾನಗಳನ್ನುಜ್ಯಾರಿಗೊಳಿಸಲು ಸಾಧ್ಯವಾಗದೆ ಕುಂಬಳೆ ಸರ್ಕಲ್  ಹಾಗು ಸೇರಿದ ರಾಜಕೀಯ ಪಕ್ಷಗಳ ಮುಖಂಡರು ಹಿಂತಿರುಗಿದ್ದಾರೆ.(

No comments:

Post a Comment