Monday, April 29, 2013

ಗಿನ್ನಿಸ್ ದುರಂತ: ಡಾರ್ಜಿಲಿಂಗಿನಲ್ಲಿ ನೇಣು ಬಿಗಿದು ಸತ್ತ

ಸಿಲಿಗುರಿ,  ಆತ ಗಿನ್ನಿಸ್ ದಾಖಲೆ ಮಾಡುವ ಸಂದರ್ಭದಲ್ಲೇ ಸಾವಿರಾರು ಮಂದಿಯ ಕಣ್ಣೆದುರಿಗೇ ನೇಣು ಬಿಗಿದುಕೊಂಡಿದ್ದರಿಂದ ಸತ್ತೇ ಹೋದ. ಗಿನ್ನಿಸ್ ಸಂಸ್ಥೆಗೆ ಇದೂ ದಾಖಲೆಯಾಗುವುದೋ, ಏನೋ? ಆತನ ಹೆಸರು ಶೈಲೆನ್ ನಾಥ್ ರಾಯ್. ವಯಸ್ಸು 45. ಯಶಸ್ವಿಯಾಗಿ ಅನೇಕ ಸ್ಟಂಟುಗಳನ್ನು ಮಾಡಿ ಗಿನ್ನಿಸ್ ದಾಖಲೆಗೆ ಪಾತ್ರನಾಗಿದ್ದ. ಆದರೆ, ಇಲ್ಲಿನ ತೀಸ್ತಾ ನದಿಯ ಸೇತಿವೆ ಸಮೀಪ ಅಂತಹುದೆ ಮತ್ತೊಂದು ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದರಿಂದ ಹಗ್ಗದಿಂದ ನೇತಾಡುತ್ತಾ ಪ್ರಾಣ ಬಿಟ್ಟಿದ್ದಾನೆ. ಭಾನುವಾರ ಈ ದುರಂತ ಸಂಭವಿಸಿದ್ದು, ತಲೆಯ ಕೂದಲಿಗೆ ರಾಟೆ ಕಟ್ಟಿಕೊಂಡು ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯನ್ನು ಆ ಕೊನೆಯಿಂದ ಈ ಕೊನೆಗೆ ಜಾರುತ್ತಾ ದಾಟ ಬೇಕಿತ್ತು. ಆದರೆ ಹಾಗೆ ದಾಟುತ್ತಿರುವಾಗ ಮಧ್ಯ ಭಾಗದಲ್ಲಿಯೇ ರಾಟೆ ಸ್ಥಗತಗೊಂಡು ಆತನ ಜೀವನ ಕೊನೆಗೊಂಡಿದೆ. ಏನೋ ಎಡವಟ್ಟಾಗುತ್ತಿದೆ ಎಂಬುದು ಶೈಲೆನ್ ನಾಥ್ ಗಮನಕ್ಕೆ ಬಂದಿದೆ. ತಕ್ಷಣ ಆತ ಆತುರಾತುರವಾಗಿ ರಾಟೆಯನ್ನು ಸುಸ್ಥಿತಿಗೆ ತರಲು ಯತ್ನಿಸಿದ್ದಾನೆ. ಆದರೆ ಆತನ ಪ್ರಯತ್ನಗಳು ವಿಫಲಗೊಂಡಿದೆ. ಅಸಾಹಯಕ ಜನ ಆತನ ಪ್ರಾಣಪಕ್ಷಿ ಹಾರಿಹೋಗುತ್ತಿರುವುದನ್ನು ಕಾಣಬೇಕಾಯಿತು. ದುರ್ದೈವವೆಂದರೆ ಆಕಸ್ಮಾತ್ ಕೈಕೊಟ್ಟರೆ ಅವಘಡದಿಂದ ಪಾರಾಗಲು ಯಾವುದೇ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನದಿಯ ಮೇಲೆ ಹಗ್ಗಕ್ಕೆ ನೇತುಬಿದ್ದಿದ್ದ ಶೈಲೆನ್ ನಾಥ್ ಕೊನೆಗೆ ಹೃದಯಾಘಾತದಿಂದ ಸಾವನ್ನು ತಂದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಶೈಲೆನ್ ನಾಥ್, 2012ರಲ್ಲಿ 42 ಟನ್ ಭಾರದ, ಪುರಾತನ ಡಾರ್ಜಿಲಿಂಗ್-ಹಿಮಾಲಯ ಮಾದರಿ ಟ್ರೈನನ್ನು ತನ್ನ ತಲೆಗೂದಲಿನಿಂದ 2.5 ಮೀಟರ್ ದೂರವೆಳೆದು ಪರಾಕ್ರಮ ಮೆರೆದಿದ್ದ.

No comments:

Post a Comment