Sunday, April 7, 2013

ತೂಮಿನಾಡು ""ಸ್ನೇಹಾಲಯ ಅನಾಥಾಶ್ರಮದ ವಿರುದ್ದ ಪ್ರತಿಭಟನೆಗೆ ಸಜ್ಜಾದ ಪರಿಸರವಾಸಿಗಳು

೮೦ಕ್ಕಿಂತಲೂ ಅಧಿಕ ಜನರನ್ನು ಒಂದೇ ಸೂರಿನಡಿಯಲಿ ಹಾಕಿ ಕೊಂಡಿರುವ ಕಟ್ಟಡ


ರೋಗಿಗಳನ್ನು ಬರಿ ನೆಲದಲ್ಲಿ ಮಲಗಿಸಿರುವುದು 

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರು ಗ್ರಾಮದ ತೂಮಿನಾಡು ಎಂಬ ಸ್ಥಳದಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ "ಸ್ನೇಹಾಲಯ ಅನಾಥಾಶ್ರಮ"ಎಂಬ ಹೆಸರಿನಲ್ಲಿ ಕಾರ್ಯಚರಿಸುತ್ತಿರುವ ಅನಾಥಾಶ್ರಮದ ಒಳಗಡೆ ಕೊಳಚೆ ಕಶ್ಮಲಗಳಿಂದ ಹೊರಬರುತ್ತಿರುವ ದುರ್ವಾಸನೆಯಿಂದ ಪರಿಸರ ನಿವಾಸಿಗಳು ತಮ್ಮ ಕಿಟಿಕಿ ಬಾಗಿಲುಗಳನ್ನು ಮುಚ್ಚಿಕೊಂಡೇ ಇರಬೇಕಾದ ದುಸ್ಥಿತಿ ಉಂಟಾಗಿದ್ದು ಮಳೆಗಾಲದಂತೂ ಜನರಪಾಡು ನಾಯಿಪಾಡು ಆಗಿರುವುದಾಗಿ ಇಲ್ಲಿಯ ಪರಿಸರವಾಸಿಗಳಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.
ಸುಮಾರು ೨೦ ಸೆಂಟ್ಸ್ ವಿಸ್ತೀರ್ಣವಿರುವ ನಿವೇಶನದಲ್ಲಿರುವ ಒಂದು ಸಾಮಾನ್ಯ ಕುಟುಂಬ ವಾಸಿಸಲು ಯೋಗ್ಯವಾದ ಕೇವಲ ಒಂದು ಮನೆ ಕಟ್ಟಡದಲ್ಲಿ ಸುಮಾರು ೮೦ ಕ್ಕಿಂತಲೂ ಅಧಿಕ ಸಂಖ್ಯೆಯ ವಿವಿಧ ರೀತಿಯ ಅನಾರೋಗ್ಯ ಪೀಡಿತರು,ಅಂಗವಿಕಲರು,ವಯೋವೃದ್ದರು,ಗಾಯಾಳುಗಳು,ಸ್ವಸ್ತರು,ಮಾನಸಿಕ ಅಸ್ವಸ್ಥರು ಆದಿಯಾಗಿ ಎಲ್ಲಾ ತರದ ಜನರೂ ಇದ್ದು ಅವರೆಲ್ಲರೂ ಒಂದೇ ಸೂರಿನಡಿಯಲ್ಲಿ ವಾಸಿಸುತಿದ್ದು ಇವರೆಲ್ಲರನ್ನೂ ಹೊರಗೆ ವೀಕ್ಷಣೆಗೆ ಸಾದ್ಯವಾಗದಂತೆ ೮ ರಿಂದ ೧೦ ಅಡಿ ಎತ್ತರದಲ್ಲಿ ನಾಲ್ಕು ದಿಕ್ಕುಗಳಿಂದ ಎತ್ತರದ ಗೋಡೆಯನ್ನು ನಿರ್ಮಿಸಿ ಅಲ್ಲಿ ಏನು ನಡೆಯುತ್ತಿದೆ ಎಂಬುವುದು ಹೊರಗಿನವರಿಗೆ ತಿಳಿಯದ ರೀತಿಯಲ್ಲಿ ಸುತ್ತಲೂ ಆವರಣಗೋಡೆ ಕಟ್ಟಲಾಗಿದೆ ಎಂದು ದೂರಲಾಗಿದೆ. ಈ ನಿವೇಶನದ ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸಾರ್ವಜನಿಕರು ನಡೆದಾಡುವ ರಸ್ತೆ ಇದ್ದು ತೂಮಿನಾಡು ಪರಿಸರದ ಜನರು ಶಾಲಾ ಮಕ್ಕಳು ದಿನನಿತ್ಯ ಸಂಚರಿಸುವ ದಾರಿಯಾಗಿದೆ.ಮಳೆಗಾಳದಲ್ಲಿ ಈ ನಿವೇಶನದ ಬಳಿಯಿಂದ ಹಾದು ಹೋಗುವ ದಾರಿಯಲ್ಲಿ ಆಶ್ರಮದ ಒಳಗಿನಿಂದ ದುರ್ವಾಸನೆ ಬೀರುವ ಕೊಳಕು ಕಲುಷಿತ ನೀರು ಹರಿದು ಹೋಗುತ್ತಿರುವಾಗ ಈ ಚಿಕ್ಕ ಕಟ್ಟಡದಲ್ಲಿ ಅನಾರೋಗ್ಯಪೀಡಿತರು ಇಷ್ಟು ಅಗಾಧ ಪ್ರಮಾಣದಲ್ಲಿ ಒಂದು ತರಹ ಬಂಧನದ ರೀತಿಯಲ್ಲಿ ತುಂಬಿರುವಾಗ ನಿವೇಶನದ ಒಳಗಡೆ ಯಾವ ರೀತಿ ಕೊಳಚೆ ನಿರ್ಮಾಣವಾಗಿರಬಹುದೆಂದು ಇಲ್ಲಿಯ ಸ್ಥಳೀಯರ ಪ್ರಶ್ನೆ?ಮಾತ್ರವಲ್ಲದೆ ನಿವೇಶನದ ಒಳಗಡೆ ರೋಗಗ್ರಸ್ತ ಜನರಲ್ಲದೆ ಆವರಣ ಗೋಡೆಗೆ ತಾಗಿಕೊಂಡಂತೆ ಉತ್ತರ ಬದಿಯಲ್ಲಿ ಶೆಡ್ಡುಗಳನ್ನು ಕಟ್ಟಿಕೊಂಡು ಕೋಳಿಗಳು,ಬಾತುಕೋಳಿಗಳು ಮತ್ತು ನಾಯಿಗಳನ್ನು ಕೂಡಾ ಸಾಕುತಿದ್ದು ಇವುಗಳಿಂದಲೂ ಪರಿಸರದಲ್ಲಿ ದುರ್ಗಂಧ ಬೀರುವ ವಾತಾವರಣ ನಿರ್ಮಾಣ ಉಂಟಾಗಿದ್ದು,ಮಳೆಗಾಲದಲ್ಲಿ ಕೊಳಚೆ ನೀರು ತುಂಬಿದ ಹೊಂಡದಲ್ಲಿ ಬಾತುಕೋಳಿಗಳು ಇಳಿದು ಜಾಲಾಡುವುದರಿಂದ ಕಲುಷಿತ ನೀರಿನ ದುರ್ವಾಸನೆಯಿಂದ ಪರಿಸರವಾಸಿಗಳು ಹಾಗು ಈ ದಾರಿಯಾಗಿ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗಿ ಬರುವ ಸಾರ್ವಜನಿಕರು ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡೇ ಓಡಾಡುವ ಅನಿವಾರ್ಯತೆ ಉಂಟಾಗಿರುವುದಾಗಿ ಆರೋಪವಿದೆ.ಈ ನಿವೇಶನವು ಹೊರಗಿನಿಂದ ಕಾಣುವವರಿಗೆ ಕೈದಿಗಳನ್ನು ಕೂಡಿ ಹಾಕುವ ಜೈಲಿನಂತೆ ಕಂಡು ಬರುತಿದ್ದು ಒಳಗಡೆ ನಿವಾಸಿಗಳನ್ನು ಹತೋಟಿಯಲ್ಲಿರಿಸಿಕೊಳ್ಳಲು ಕೆಲವೊಮ್ಮೆ ದೈಹಿಕ ಹಾಗು ಮಾನಸಿಕ ಹಿಂಸೆ ನೀಡುತ್ತಿರುವುದು ಕಂಡು ಬರುತ್ತಿರುವುದಾಗಿ ಪರಿಸರ ನಿವಾಸಿಯಾದ ಪ್ರತ್ಯಕ್ಷ ದರ್ಶಿಯೊಬ್ಬರು ಆರೋಪಿಸಿದ್ದಾರೆ.ಈ ಅನಾಥಾಶ್ರಮದ ಅಧಿಕೃತರು ಸರಿಯಾದ ರೀತಿಯಲ್ಲಿ ಶುಚಿತ್ವವನ್ನು ಪಾಲಿಸದೇ ಇರುವುದರಿಂದ ಪರಿಸರದ ನಿವಾಸಿಗಳು ಇನ್ನು ಕೆಲವೇ ಸಮಯದಲ್ಲಿ ನೊಣ ಸೊಳ್ಳೆ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ -ರುಜಿನಗಳಿಗೆ ತುತ್ತಾದರೂ ಆಶ್ಚರ್ಯಪಡಬೇಕಾಗಿಲ್ಲವೆಂಬುದಾಗಿ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.ಇಷ್ಟೆಲ್ಲಾ ಕಾರ್ಯಕಲಾಪಗಳು ಅನಧಿಕೃತವಾಗಿ ಕಳೆದ ಮೂರು ವರ್ಷಗಳಿಂದ ನಡೆಯುತಿದ್ದರೂ ಸಂಭಂಧಪಟ್ಟವರು ಯಾರೂ ಎಚ್ಚರಗೊಂಡಿಲ್ಲ ಜನನಿಬಿಡ ಪ್ರದೇಶದಲ್ಲಿ ಅನಧಿಕೃತವಾಗಿ ಯಾವುದೇ ನೀತಿ ನಿಯಮಗಳಿಲ್ಲದೆ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿರುವ ಈ ಅನಾಥಾಶ್ರಮವನ್ನು ಪರಿಸರದಲ್ಲಿ ಅನಾಹುತಗಳು ಸಂಭವಿಸುವ ಮೊದಲೇ ಸಂಭಂಧಪಟ್ಟವರು ಗಮನಹರಿಸಲು ಇಲ್ಲಿಯ ಸ್ಥಳೀಯರು ಆಗ್ರಹಿಸಿದ್ದಾರೆ.ಈಗಾಗಲೇ ಈ ಪ್ರದೇಶದಲ್ಲಿ ಈ ಅನಾಥಾಶ್ರಮವನ್ನು ಪ್ರತಿಭಟಿಸಲು ತೂಮಿನಾಡು ನಾಗರಿಕ ಕ್ರಿಯಾ ಸಮಿತಿ ಎಂಬ ಸಂಘಟನೆಯೊಂದು ಅಸ್ಥಿತ್ವಕ್ಕೆ ಬಂದಿದ್ದು.ಸಂಭಂಧ ಪಟ್ಟವರು ಇತ್ತಕಡೆ ಗಮನ ಹರಿಸದಿದ್ದರೆ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಗೆ ಸಜ್ಜಾಗುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.( ಚಿತ್ರ ಜತೆಗಿದೆ) 

No comments:

Post a Comment