Monday, April 8, 2013

ಹೊಸಂಗಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೊಳಚೆ ನೀರು:ಎಸ್.ಡಿ.ಪಿ.ಐ ಯಿಂದ ಪಂಚಾಯತ್ ಗೆ ಮಾರ್ಚ್ಮಂಜೇಶ್ವರ:ಹೊಸಂಗಡಿ ಜಂಕ್ಷನ್ ನಲ್ಲಿ ವ್ಯಾಪಾರಿಗಳು ಕೊಳಚೆ ನೀರನ್ನು ಸಾರ್ವಜನಿಕ ಸ್ಥಳದಲ್ಲಿ ಹರಿಯಲು ಬಿಡುತಿದ್ದು ಇದನ್ನು ಕಂಡು ಕಣ್ಣಿದ್ದೂ ಕುರುಡರಂತೆ ವರ್ತಿಸುವ ಪಂಚಾಯತ್ ಅಧಿಕೃತರ ವಿರುದ್ದ ಎಸ್.ಡಿ.ಪಿ.ಐ  ಮಂಜೇಶ್ವರ ಮಂಡಲ ಕಾರ್ಯಕರ್ತರು ಇಂದು ಬೆಳಿಗ್ಗೆ ಮಂಜೇಶ್ವರ ಪಂಚಾಯತ್ ಮಾರ್ಚ್ ನಡೆಸಿದರು. ಹೊಸಂಗಡಿಯಿಂದ ಹೊರಟ ಜಾಥಾ ವನ್ನು ಮಂಜೇಶ್ವರ ಪಂ. ಮುಂಬಾಗದಲ್ಲಿ ಪೊಲೀಸರು ತಡೆಗಟ್ಟಿದರು. 15 ದಿವಸದೊಳಗಾಗಿ ಸಾರ್ವಜನಿಕ ಸ್ಥಳದಲ್ಲಿ ಹರಿಯುತ್ತಿರುವ ಕೊಳಚೆ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇದ್ದರೆ ಕೊಳಚೆ ನೀರು ಸಹಿತ ತ್ಯಾಜ್ಯ ವಸ್ತುಗಳನ್ನು ಪಂಚಾಯತ್ ಆವರಣ ಗೋಡೆಯೊಳಗೆ ತಂದು ಹಾಕುವುದಾಗಿ ಈ ಸಂದರ್ಭ ಎಚ್ಚರಿಕೆ ನೀಡಲಾಗಿದೆ. ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶ್ರೀ ಅಬ್ದುಲ್ ಹಮೀದ್ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಮೈಮೂನ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿ ಮುಬಾರಕ್ ಕಡಂಬಾರ್ ಸ್ವಾಗತಿಸಿದರೆಂದು ಪ್ರಕಟನೆ ತಿಳಿಸಿದೆ

No comments:

Post a Comment