Thursday, April 4, 2013

ಅಲ್ಪಸಂಖ್ಯಾತರಿಗೆ ಅಂತಿಮ ನ್ಯಾಯ: ಕಟ್ಜು ಆಗ್ರಹ



 ಏಪ್ರಿಲ್ -04-2013

ಹೊಸದಿಲ್ಲಿ, ಎ.3: ದೇಶದಲ್ಲಿ ಇಂದು ಅಸಂಖ್ಯಾತ ಮಂದಿ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ತಮ್ಮ ಮೇಲೆ ಹೂಡಲಾಗಿರುವ ಆರೋಪಗಳ ಕುರಿತು ಯಾವುದೇ ಸಮರ್ಪಕ ಸಾಕ್ಷಿಯಿಲ್ಲದ ಕಾರಣ ವಿಚಾರಣಾಧೀನ ಕೈದಿಗಳಾಗಿ ನ್ಯಾಯದಾನದ ವಿಶ್ವಾಸವನ್ನೇ ಕಳೆದುಕೊಂಡವರಾಗಿ ಜೈಲಿ ನಲ್ಲಿ ಕಳೆಯುತ್ತಿದ್ದಾರೆ.
ಅವರ ಮೇಲೆ ಹೂಡಲಾಗಿರುವ ಆರೋಪಗಳ ಕುರಿತು ಅತಿ ಶೀಘ್ರದಲ್ಲಿ ವಿಚಾರಣೆ ನಡೆಸಿ ತ್ವರಿತಗತಿಯಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಂತಿಮ ಪರಿಹಾರ ನೀಡುವ ನ್ಯಾಯಾಲಯಗಳ ಸ್ಥಾಪನೆಯ ಅಗತ್ಯವಿದೆ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಅಧ್ಯಕ್ಷ ಮಾರ್ಕಂಡೇಯ ಕಟ್ಜು ಆಗ್ರಹಿಸಿದ್ದಾರೆ.
 
ಇಂತಹ ಪ್ರಕರಣದಲ್ಲಿ ಒಂದಾ ಪೊಲೀಸರು ಸಾಕ್ಷಿಗಳನ್ನು ಸೃಷ್ಟಿಸುತ್ತಾರೆ ಅಥವಾ ಅಸಮರ್ಪಕ ಕಾನೂನು ಪ್ರಾತಿನಿಧ್ಯ ಸಂಭವಿಸುತ್ತದೆ ಅಥವಾ ಕೊನೆಗೆ ಆರೋಪಿಗಳು ಹಲವು ವರ್ಷಗಳನ್ನು ಜೈಲಲ್ಲಿ ಕಳೆದು ಕೊನೆಗೆ ನಿರಪರಾಧಿಗಳಾಗಿ ಹೊರಬರುತ್ತಾರೆ ಎಂದು ಅವರು ಸಾಂದರ್ಭಿಕವಾಗಿನುಡಿದರು. ಅಲ್ಪಸಂಖ್ಯಾತರ ಮೇಲೆಯಷ್ಟೇ ಈ ರೀತ್ಯಾ ಘಟನೆಗಳು ಸಂಭವಿಸುತ್ತಿರುವುದಾಗಿ ನಾವು ಕಂಡುಕೊಂಡಿದ್ದೇವೆ.
ಅಲ್ಪಸಂಖ್ಯಾತರ ಕುರಿತು ಹೊಂದಿರುವ ಸಂಶಯಾಸ್ಪದ ಹಾಗೂ ಪೂರ್ವಾಗ್ರಹ ಪೀಡಿತ ಮನೋಭಾವನೆಯೇ ಅವರು ಈ ರೀತಿಯಾಗಿ ಅನ್ಯಾಯದಿಂದ ನರಳಲು ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಿಸಿದರು. 2001ರಲ್ಲಿ ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಭಾರತೀಯ ಜನತೆಯಲ್ಲಿ ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾಕರೆಲ್ಲರೂ ಮುಸ್ಲಿಮರು ಎನ್ನುವ ಸಂಕುಚಿತ ಮನೋಭಾವನೆಯು ಸೃಪ್ಟಿಯಾಯಿತು.
ಇದರಿಂದಾಗಿ ಭಯೋತ್ಪಾದನಾ ಕೃತ್ಯ ಎಲ್ಲಿ ಸಂಭವಿಸಿರೂ ಆ ಕೂಡಲೇ ಅಮಾಯಕರನ್ನು ಸಂಶಯದ ಮೇಲೆ ಬಂಧಿಸಲ್ಪಡುವ ಪ್ರಕ್ರಿಯೆ ಆರಂಭವಾಯಿತು. ಈ ಕಾರಣದಿಂದಾಗಿ ದ್ವೇಷ ಹಾಗೂ ಪ್ರತೀಕಾರದ ಮನೋಭಾವನೆ ಜನರಲ್ಲಿ ಉಂಟಾಗುವ ಹೊಸ ಶಕೆ ಶುರುವಾಯಿತು.
ಇದು ಈ ರೀತಿಯಾಗಿಯೇ ಮುಂದುವರಿದರೆ ದ್ವೇಷ ಹಾಗೂ ಅಹಿಂಸಾ ಗುಣವನ್ನೇ ಹೊಂದಿರುವ ಹೊಸ ತಲೆಮಾರು ಸೃಷ್ಟಿಯಾಗಿ ಅದು ದೇಶದ ಮೇಲೆ ಕರಾಳ ಪರಿಣಾಮವನ್ನು ಉಂಟುಮಾಡುವ ಸನ್ನಿವೇಶ ದೂರವಿಲ್ಲ ಎಂದು ಅವರು ಎಚ್ಚರಿಸಿದರು. ಹಲವಾರು ವರ್ಷ ಜೈಲಲ್ಲಿ ಕಳೆದ ವಿಚಾರಣಾಧೀನ ಕೈದಿಗಳು ಅಂತ್ಯೋಪಾಯದ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಒದಗಿಸಬೇಕು.
ಅಪರಾಧಿಗಳೆಂದು ಬಂಧಿಸಲ್ಪಟ್ಟವರು ಇದರ ಮೂಲಕ ತಮ್ಮ ನಿರಪರಾಧಿತ್ವವನ್ನು ಸಾಬೀತು ಪಡಿಸಲು ಅಥವಾ ಕ್ಷಮೆ ವಿಧಿಸಲ್ಪಟ್ಟ ಶಿಕ್ಷೆಯನ್ನು ಕಡಿತಗೊಳಿಸಲು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ವ್ಯವಸ್ಥೆಯನ್ನು ಉಂಟುಮಾಡಬೇಕು. ಅಲ್ಪಸಂಖ್ಯಾತರ ವಿರುದ್ಧ ಪೂರ್ವಾಗ್ರಹ ಪೀಡಿತ ಮನೋಭಾವನೆಯನ್ನು ಹೊಂದಿರುವ ಪೊಲೀಸರಿಗೆ ವಿಶೇಷ ತರಬೇತಿ ನೀಡಿ ಅಮಾಯಕರು ಶಿಕ್ಷೆಯಿಂದ ಪಾರಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ರೀತಿಯ ಉಪಕ್ರಮವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದವರಲ್ಲಿ ಖ್ಯಾತ ಚಿತ್ರ ನಿರ್ಮಾಪಕ ಮಹೇಶ್ ಭಟ್ ಹಾಗೂ ನ್ಯಾಯವಾದಿ ಮಜೀದ್ ಮೆಮೊಂ ಕೂಡಾ ಸೇರಿದ್ದಾರೆ

No comments:

Post a Comment