Thursday, April 11, 2013

ಉಯ್ಯಾಲೆ ಆಟದಲ್ಲಿ ಬಟ್ಟೆ ಕುತ್ತಿಗೆಗೆ ಬಿಗಿದು ಬಾಲಕ ಮೃತ್ಯು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮನೆಯೊಳಗೆ ಉಯ್ಯಾಲೆ ಆಟವಾಡುತಿದ್ದ ವೇಳೆ ಬಟ್ಟೆ ಕುತ್ತಿಗೆಗೆ ಬಿಗಿದು ಬಾಲಕ ಮೃಪಟ್ಟ ಘಟನೆ ಉಪ್ಪಳಕ್ಕೆ ಸಮೀಪದ ಬೇಕೂರುನಿಂದ ವರದಿಯಾಗಿದೆ.
ಮೃತಪಟ್ಟ ಬಾಲಕ ಬೇಕೂರು ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಹಾಗು ಬೇಕೂರು ಕಾಲನಿ ನಿವಾಸಿ ರಾಮಕೃಷ್ಣ ರವರ ಪುತ್ರ ಸುದೀಪ್ ಕುಮಾರ್(11) ಎಂಬವನಾಗಿದ್ದಾನೆ.
ತಂದೆ,ತಾಯಿ ಅಜ್ಜಿ ಕೆಲಸಕ್ಕೆಂದು ಹೊರಗಡೆ ತೆರಳಿದ್ದ ವೇಳೆ ಕೋಣೆಯೊಂದರಲ್ಲಿ ಉಯ್ಯಾಲೆಯಲ್ಲಿ ಆಟವಾಡುತಿದ್ದ ವೇಳೆ ಬಟ್ಟೆ ಕುತ್ತಿಗೆಗೆ ಬಿಗಿದು ಈ ದುರ್ಘಟನೆ ಸಂಭವಿಸಿದೆ.ಮದ್ಯಾಹ್ನದ ವೇಳೆ ಅಜ್ಜಿ ಮನೆಗೆ ತಲುಪಿದಾಗ ಸುದೀಪ್ ಬಟ್ಟೆ ಬಿಗಿದ ರೀತಿಯಲ್ಲಿ ನೆಲಕ್ಕೆ ಬಿದ್ದಿದ್ದನು. ಕೂಡಲೇ ನೆರೆಮನೆಯವರ ಸಹಾಯದಿಂದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

No comments:

Post a Comment