Saturday, April 6, 2013

ಮಂಜೇಶ್ವರ ಗ್ರಾಹಕರ ವೇದಿಕೆಯ ಮಾಸಿಕ ಸಭೆ


ಮಂಜೇಶ್ವರ:ಮಂಜೇಶ್ವರ ಗ್ರಾಹಕರ ವೇದಿಕೆಯ ಮಾಸಿಕ ಸಭೆಯು ಉದ್ಯಾವರ ಆಝಾದ್ ಕಾಂಪ್ಲೆಕ್ಸ್ ನಲ್ಲಿ ಮುರಳೀಧರ್ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು.ಸಭೆಯಲ್ಲಿ ದೂರು ಸ್ವೀಕಾರದ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಆಹ್ಮದ್ ಕುಂಞಿ ಯವರು ಉದ್ಘಾಟಿಸಿದರು.ತೂಮಿನಾಡಿನಲ್ಲಿ ಸ್ನೇಹಾಲಯ ವೆಂಬ ಹೆಸರಿನಲ್ಲಿ  ಕಾರ್ಯಾಚರಿಸುತ್ತಿರುವ ಆಶ್ರಮದ ಬಗ್ಗೆ ದೂರನ್ನು ಪರಿಶೀಲಿಸಿದ ವೇದಿಕೆಯು ಎರಡೂ ಕಡೆಯಿಂದಲೂ ಹೇಳಿಕೆಯನ್ನು ಪಡೆದುಕೊಂಡು ಆಶ್ರಮದ ಪರಿಸರವಾಸಿಗಳಿಗೆ ದೂರಿನಲ್ಲಿ ವಿವರಿಸಿದ ರೀತಿಯಲ್ಲಿ ಅನಾಹುತಗಳು ಸಂಭವಿಸುವ ಮೊದಲು ಆರೋಗ್ಯಕರ ಜೀವನವನ್ನು ಕಾಪಾಡಲು ಶುಚಿತ್ವವನ್ನು ಪಾಲಿಸಲು ಆಶ್ರಮದ ಮಾಲಿಕರಾದ ಜೋಸೆಫ್ ಕ್ರಾಸ್ತಾ ರವರಿಗೆ ತಾಕೀತು ನೀಡಲಾಯ್ತು. ಹಾಗು ವೇದಿಕೆಗೆ ಬಂದ ಇತರ ದೂರುಗಳನ್ನು ಪರೀಶೀಲಿಸಿ ಪರಿಹಾರ ಮಾರ್ಗವನ್ನು ಸೂಚಿಸಲಾಯಿತು. ಮಂಜೇಶ್ವರ ತಾಲೂಕಿನ ನ ಕೇಂದ್ರವನ್ನು ಎಲ್ಲದಕ್ಕೂ ಸೌಕರ್ಯವಿರುವ ಮಂಜೇಶ್ವರ ಮಂಡಲದಲ್ಲೇ ಸ್ಥಾಪಿಸಲು ಮುಖ್ಯಮಂತ್ರಿಗೆ ಮನವಿ ನೀಡಲು ತೀರ್ಮಾನಿಸಲಾಯಿತು.ಸಂಜೀವ ಶೆಟ್ಟಿ,ಲಿಲ್ಲಿಬಾಯಿ ಟೀಚರ್,ಯಾಕೂಬ್,ಮಾಧವಿ ಟೀಚರ್,ಶಶಿ ಕಣ್ವತೀರ್ಥ,ಬಿ.ಮೊಹಮ್ಮದ್ ಮೊದಲಾದವರು ಮಾತನಾಡಿದರು.ಪ್ರ.ಕಾರ್ಯದರ್ಶಿ ರಹಿಮಾನ್ ಉದ್ಯಾವರ ಸ್ವಾಗತಿಸಿ ಕೆ.ನಾಸರ್ ವಂದಿಸಿದರು.

No comments:

Post a Comment