Wednesday, April 3, 2013

ಮಂತ್ರವಾದಿಯಲ್ಲಿಗೆ ಬಂದ ಮಗು ರಸ್ತೆ ಬದಿಯ ಹಿತ್ಲಿನಲ್ಲಿ ಪತ್ತೆ




ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಮಂತ್ರವಾದಿಯತ್ತಿರ ಬಂದ ಕುಟುಂಬವೊಂದು ಹಿಂತಿರುಗುವಾಗ ಸ್ವಂತ ಮಗುವನ್ನು ರಸ್ತೆ ಮದ್ಯೆ ಮರೆತು ಹೋದ ಘಟನೆ ಇಲ್ಲಿಗೆ ಸಮೀಪದ ಪೊಸೋಟು ನಲ್ಲಿ ಬುದವಾರ ಬೆಳಿಗ್ಗೆ ನಡೆದಿದೆ.
ದೇರಳ ಕಟ್ಟೆ ತೌಡುಗೋಳಿ ನಿವಾಸಿ ಸಿಕಂದರ್ ಹಾಗು ಸೆಕೀನಾ ಎಂಬವರ ಪುತ್ರ ಸೆಮೀಮ್() ಎಂಬವನಾಗಿದ್ದಾನೆ ಪೊಸೋಟು ರಾಷ್ಟ್ರೀಯ ಹೆದ್ದಾರಿಯ ಬಳಿಯಿರುವ ಯೂಸುಫ್ ಎಂಬವರ ಹಿತ್ಲಿನಲ್ಲಿ ಪತ್ತೆಯಾದ ಬಾಲಕ.ಇಂದು ಮುಂಜಾನೆ ದೇರಳ ಕಟ್ಟೆ ತೌಡುಗೋಳಿಯಿಂದ ಓಮ್ನಿ ವ್ಯಾನೊಂದರಲ್ಲಿ ಕುಂಬೋಲ್ ತಂಙಲ್ ರಲ್ಲಿಗೆ ಬಂದ ಸಿಖಂದರ್ ಕುಟುಂಬವು ತಿರುಗಿ ಬರುವಾಗ ಅದೇ ವಾಹನದಲ್ಲಿ ಬಂದು ಪೊಸೋಟ್ ಎಂಬ ಸ್ಥಳಕ್ಕೆ ತಲುಪುವಾಗ ವಾಹನವನ್ನು ಬದಲಿಸಿತೆಂದು ಹೇಳಲಾಗಿದೆ.ವಾಹನವನ್ನು ಬದಲಿಸುವ ಸಂದರ್ಭ ಕುಟುಂಬವು ಮಗುವನ್ನು ಮರೆತು ಸೀದಾ ಪ್ರಯಾಣಿಸಿದ್ದಾರೆ.ನಾಲ್ಕು ವರ್ಷದ ಮಗು ದಿಕ್ಕು ತೋಚದೆ ಸಮೀಪವಿರುವ ಹಿತ್ಲಿನಲ್ಲಿ ಮಲಗಿ ಆಳಲು ಆರಂಭಿಸಿದೆ.ಇದನ್ನು ಕಂಡ ಸ್ಥಳೀಯರು ಯಾರೋ ಮಗುವನ್ನು ಬಿಸಾಡಿ ಹೋಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಮಗುವನ್ನು ಮರೆತು ಹೋದ ಕುಟುಂಬವು ಮನೆಗೆ ತಲುಪಿ ಮಗುವನ್ನು ಕಾಣದಿರುವಾಗ ಹುಡುಕಿ ಕೊಂಡು ಪೊಸೋಟು ಗೆ ಮಗುವಿನ ತಂದೆ ತಲುಪಿದಾಗ ಮಗು ತಂದೆಯನ್ನು ಅಪ್ಪಿ ಮುದ್ದಾಡಿತು.ಸ್ವಂತ ಮಗುವನ್ನೇ ಮರೆತು ಹೋದ ತಂದೆಯ ವಿಚಿತ್ರ ಘಟನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತುತಂದೆ  ಮಗುವಿನ ಚಿತ್ರ ಜತೆಯಾಗಿದೆ

1 comment:

  1. ಇದರಲ್ಲಿ ಹೇಳಿದ ಮಂತ್ರವಾದಿ ಯಾರು? ಅವರ ಹೆಸರು ಕೂಡಾ ಬರೆದಿದ್ದರೆ ಒಳ್ಳೆಯದಿತು ಓದುಗರಿಗೆ ತಿಳಿಯಬಹುದಿತು.

    ReplyDelete