Saturday, April 6, 2013

ಗುಪ್ತವಾಗಿ ಕೊಳಚೆ ನೀರು ಸಾರ್ವಜನಿಕ ಸ್ಥಳಕ್ಕೆ:ಸಾರ್ವಜನಿಕರ ಆಕ್ರೋಶನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಜೇಶ್ವರದ ಹೊಸಂಗಡಿಯ  ಜಂಕ್ಷನ್ ನಲ್ಲಿ ಕಟ್ಟಡದಲ್ಲಿರುವ ವ್ಯಾಪಾರಸ್ಥರು ಗುಪ್ತವಾಗಿ  ಸಾರ್ವಜನಿಕ ಸ್ಥಳದಲ್ಲಿ ಕೊಳಚೆ ನೀರನ್ನು ಹರಿಯಲು ಬಿಟ್ಟು ಇದೀಗ ಪ್ರದೇಶವು ಸಂಪೂರ್ಣವಾಗಿ ಕೊಳಚೆ ನೀರಿನ ವಾಸನೆಯಿಂದ ಗುಬ್ಬೆದ್ದು ನಾರುತಿದ್ದು ಇದರಿಂದ ಸ್ಥಳದಲ್ಲಿ ಸುತ್ತ ಮುತ್ತ ಮನೆಯವರಿಗೆ ವಾಸಿಸಲು ಸಾದ್ಯವಾಗದೆ ಮಾತ್ರವಲ್ಲದೆ ಸಾಂಕ್ರಾಮಿಕ ರೋಗಕ್ಕೂ ಆಹ್ವಾನ ನೀಡುತ್ತದೆಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದು ಮಂಜೇಶ್ವರ ಗ್ರಾ.ಪಂ.ಜನ ಪ್ರತಿನಿಧಿಗಳು, ಅಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ದಿಡೀರನೆ ಬೇಟಿ ನೀಡಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಪ್ರದೇಶದಲ್ಲಿ ಹೊಸಂಗಡಿ ಜಂಕ್ಷನ್   ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಗುಪ್ತವಾಗಿ ಕೊಳಚೆ ನೀರುಗಳನ್ನು ವ್ಯಾಪಾರಸ್ಥರು ಸಾರ್ವಜನಿಕ ಸ್ಥಳದಲ್ಲಿ ಹರಿಯಲು ಬಿಡುತಿದ್ದರು. ಕೊಳಚೆ ನೀರು ಎಲ್ಲಿಂದ ಬರುತ್ತದೆಂಬುದು ನಿಗೂಡವಾಗಿತ್ತು.ಇದನ್ನು ಬೇಧಿಸಲು ಸಾರ್ವಜನಿಕರು ಗುಪ್ತವಾಗಿ ಇದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಿದ್ದರು.ಕೊಳಚೆ ನೀರು ಎಲ್ಲಿಂದ ಹರಿದು ಬರುತ್ತದೆಂಬ ಶಂಶಯವನ್ನು ನಿವಾರಿಸಿ ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳಕ್ಕೆ ತಲುಪಿದ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಸಾರ್ವಜನಿಕರ ಬೆಂಬಲದೊಂದಿಗೆ ಕಟ್ಟಡದ ಮುಂಬಾಗದ ಸ್ಥಳವನ್ನು ಜೆಸಿಬಿ ಯಿಂದ ಅಗೆದು ತೆಗೆದಾಗ ಕಟ್ಟಡದಲ್ಲಿರುವ  ಹೋಟೆಲ್,ಐಸ್ ಕ್ರೀಮ್ ಪಾರ್ಲರ್,ವಸತಿ ಗೃಹ, ಮೊದಲಾದ ಸ್ಥಳಗಳಿಂದ ಕೊಳಚೆ ನೀರನ್ನು ಭೂಮಿಯ ಅಡಿಬಾಗದಿಂದ ಪೈಪ್ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಹರಿಯಲು ಬಿಡುವುದನ್ನು ಪತ್ತೆ ಹಚ್ಚಲಾಯಿತು. ಕೊಳಚೆ ನೀರು ಸಾರ್ವಜನಿಕ ಸ್ಥಲದಲ್ಲಿ ಹರಡಿ ದುರ್ನಾತ ಬೀರುತಿತ್ತು.ಕೊಳಚೆ ನೀರು ನಿಲ್ಲುವ ಸ್ಥಳಗಳ ಸಮೀಪ ಹಲವು ಮನೆಗಳಿದ್ದು ಇವರು ಕೂಡಾ ಇದರಿಂದ ತೊಂದರೆ ಪಡುವಂತಾಗಿತ್ತು.ಮಾತ್ರವಲ್ಲದೆ ಸಮೀಪವಿರುವ ಬಾವಿ ನೀರು ಕೂಡಾ ಕೊಳಚೆ ನೀರು ಹರಿದು ಕಲುಷಿತಗೊಂಡಿರುವುದನ್ನು ಪತ್ತೆ ಹಚ್ಚಲಾಯಿತು.ಅಧಿಕಾರಿಗಳು ತಪ್ಪಿಸ್ಥರನ್ನು ಗುರುತಿಸಿ ಅವರ ವಿರುದ್ದ ನೋಟೀಸು ನೀಡಿರುತ್ತಾರೆ ನೋಟೀಸಿನಲ್ಲಿ ನೀಡಿದ ಕಾಲಾವಧಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

No comments:

Post a Comment