Tuesday, April 23, 2013

ಉದ್ಯಾವರ:ನಿಲ್ಲಿಸಿದ್ದ ಗ್ಯಾಸ್ ಏಜನ್ಸಿ ಲಾರಿಗೆ ರಿಕ್ಷಾ ಡಿಕ್ಕಿ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಬಳಿ ನಿಲ್ಲಿಸಲಾಗಿದ್ದ ಅಡುಗೆ ಅನಿಲ ಹೇರಿಸಿದ್ದ ಲಾರಿಗೆ ರಿಕ್ಷಾವೊಂದು ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಬೆಳಿಗ್ಗೆ ಉದ್ಯಾವರ ಮಾಡದ ಬಳಿ ಸಂಭವಿಸಿದೆ.
ಮಂಜೇಶ್ವರದಿಂದ ತಲಪಾಡಿ ಕಡೆ ಸಾಗುತಿದ್ದ ರಿಕ್ಷಾವೊಂದು ಚಾಲಕನ ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಬರುತಿಒದ್ದ ಶಿಫ್ಟ್ ಕಾರೊಂದು ಡಿಕ್ಕಿ ಹೊಡೆದು ರಿಕ್ಷಾ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಅಡುಗೆ ಅನಿಲ ಹೇರಿಸಿಕೊಂಡು ಹೋಗುತಿದ್ದ ಲಾರಿಗೆ ಡಿಕ್ಕಿ ಹೊಡೆದು ರಿಕ್ಷಾದ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿ ಚಾಲಕ ಉದ್ಯಾವರ ನಿವಾಸಿ ಅಸ್ಪಾಕ್ ಎಂಬವರ ಕಾಲಿಗೆ ಬಲವಾದ ಏಟು ಬಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಭಂಧ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಸ್ವಲ್ಪ ತಡೆ ಉಂಟಾಗಿದ್ದು ಕೂಡಲೇ ಪೊಲೀಸರು ಬಂದು ರಿಕ್ಷಾವನ್ನು ತೆಗೆದು ಸಂಚಾರವನ್ನು ಸುಗಮಗೊಳಿಸಿದರು. ಉದ್ಯಾವರ ಮಾಡದ ಬಳಿಯಿರುವ ದಾಮೋದರ್ ಗ್ಯಾರೇಜ್ ಮುಂಬಾಗದಲ್ಲಿ ಅಡ್ಡಾದಿಡ್ಡಿಯಾಗಿ ಘನ ವಾಹನಗಳನ್ನು ನಿಲುಗಡೆಗೊಳಿಸುವುದು ಅಫಘಾತಕ್ಕೆ ಕಾರಣವಾಗುತ್ತಿರುವುದಾಗಿ ಸ್ಥಳೀಯರಿಂದ ಕೇಳಿ ಬಂದಿದೆ.

No comments:

Post a Comment