Wednesday, April 3, 2013

ಪ್ರಧಾನಿಗೆ ಸಿನ್ಹಾ ಪತ್ರ: ಜೆಪಿಸಿಯಲ್ಲಿ ಭುಗಿಲೆದ್ದ ವಾಗ್ವಾದ ಏಪ್ರಿಲ್ -03-2013

ಹೊಸದಿಲ್ಲಿ: ಪ್ರಧಾನಿ ಮನಮೋಹನ ಸಿಂಗ್ 2ಜಿ ಹಗರಣದ ವಿಚಾರಣೆ ನಡೆಸು ತ್ತಿರುವ ಜಂಟಿ ಸಂಸದೀಯ ಮಂಡಳಿಯ (ಜೆಪಿಸಿ) ಮುಂದೆ ಹಾಜರಾಗಬೇಕೆಂಬ ಬಿಜೆಪಿಯ ಬೇಡಿಕೆ ಒಂದು ‘ರಾಜಕೀಯ ನಾಟಕ’ ಎಂದು ಮಂಡಳಿಯ ಅಧ್ಯಕ್ಷ ಪಿ.ಸಿ.ಚಾಕೊ ತಳ್ಳಿ ಹಾಕುವುದರೊಂದಿಗೆ ಹೊಸ ವಾಗ್ವಾದವೊಂದು ಭುಗಿಲೆದ್ದಿದೆ.
ಮಾಜಿ ದೂರಸಂಪರ್ಕ ಸಚಿವ ಎ.ರಾಜಾರ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜೆಪಿಸಿಯ ಮುಂದೆ ಹಾಜರಾಗು ವಂತೆ ನಿನ್ನೆ ಬಿಜೆಪಿ ಸದಸ್ಯ ಯಶವಂತ ಸಿನ್ಹಾ ಪ್ರಧಾನಿಗೆ ಪತ್ರ ಬರೆದಿರುವುದನ್ನು ಚಾಕೊ ಪ್ರಶ್ನಿಸಿದ್ದಾರೆ.
ಪ್ರಧಾನಿ ಹಾಗೂ ವಿತ್ತ ಸಚಿವ ಪಿ.ಚಿದಂಬರಂ ‘ಗಂಭೀರ ತೊಂದರೆಯಲ್ಲಿ’ ಸಿಲುಕುವ ಸಾಧ್ಯತೆಯಿದೆ ಎಂಬ ಕಾರಣಕ್ಕಾಗಿ ರಾಜಾಗೆ ಹೇಳಿಕೆ ನೀಡದಂತೆ ತಡೆಯಲಾಗುತ್ತಿದೆಯೆಂದು ತನ್ನ ಹೆಸರನ್ನು ‘ಆರೋಪ ಮುಕ್ತ’ಗೊಳಿಸಲು ಜೆಪಿಸಿಯ ಮುಂದೆ ಹಾಜರಾಗುವಂತೆ ಪತ್ರ ಬರೆದ ಒಂದು ದಿನದ ಬಳಿಕ ಸಿನ್ಹಾ ಆರೋಪಿಸಿದ್ದಾರೆ.
ಸಿನ್ಹಾರ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಚಾಕೊ, ಜೆಪಿಸಿಯ ಸದಸ್ಯನೊಬ್ಬ ಪ್ರಧಾನಿಗೆ ಪತ್ರ ಬರೆಯಲು ಹೇಗೆ ಸಾಧ್ಯ? ಆ ನಿರ್ಧಾರ ತೆಗೆದುಕೊಳ್ಳಬೇಕಾದುದು ಸಮಿತಿ. ಇದೊಂದು ರಾಜಕೀಯ ತಂತ್ರವಾಗಿದ್ದು, ಸಂಸದೀಯ ನಡಾವಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಸಚಿವನೊಬ್ಬನನ್ನು ತನ್ನ ಮುಂದೆ ಕರೆಸುವುದು ಸಹಿತ ಯಾವುದೇ ನಿರ್ಧಾರವನ್ನು ಸಮಿತಿ ಕೈಗೊಳ್ಳಬೇಕು ಹೊರತು ವ್ಯಕ್ತಿಯಲ್ಲ. ಆದುದರಿಂದ ಸಿನ್ಹಾರ ಪತ್ರಕ್ಕೆ ಯಾವುದೇ ಮಾನ್ಯತೆಯಿಲ್ಲವೆಂದು ಅವರು ಹರಿಹಾಯ್ದಿದ್ದಾರೆ.
ಪ್ರಧಾನಿಗೆ ಸ್ವ ಇಚ್ಛೆಯಿಂದ ಜೆಪಿಸಿಯ ಮುಂದೆ ಹಾಜರಾಗುವಂತೆ ಸಿನ್ಹಾ ಕೋರಿದ್ದಾರೆಂಬುದನ್ನು ಗಮನಕ್ಕೆ ತಂದಾಗ, ಪ್ರಧಾನಿ ಬಯಸಿದರೂ ಅವರು ಜೆಪಿಸಿಯ ಮುಂದೆ ಹಾಜರಾಗುವಂತಿಲ್ಲ. ಇದು ಎಲ್ಲರಿಗೂ ಅನ್ವಯಿಸುವ ನಿಯಮವಾಗಿದೆಯೆಂದು ಚಾಕೊ ಪ್ರತಿಪಾದಿಸಿದ್ದಾರೆ.
ಸಿನ್ಹಾರ ಬೇಡಿಕೆಯನ್ನು ಬಿಜೆಪಿ ಬೆಂಬಲಿಸಿದ್ದು, ರಾಜಾರೊಂದಿಗೆ ಪ್ರಧಾನಿ ಹಾಗೂ ಚಿದಂಬರಂರನ್ನು ಜೆಪಿಸಿಯ ಮುಂದೆ ಕರೆಸುವ ಯಾವುದೇ ಕ್ರಮವನ್ನು ಕಾಂಗ್ರೆಸ್ ಹಾಗೂ ಕೇಂದ್ರ ಸರಕಾರ ತಡೆಯುತ್ತಿರುವುದೇಕೆಂದು ಪಕ್ಷದ ವಕ್ತಾರೆ ನಿರ್ಮಲಾ ನಟರಾಜನ್ ಪ್ರಶ್ನಿಸಿದ್ದಾರೆ.
ರಾಜಾ ತನ್ನನ್ನು ಹೇಳಿಕೆ ನೀಡಲು ಕರೆಸುವಂತೆ ಜೆಪಿಸಿಯನ್ನು ಮತ್ತೆ ಮತ್ತೆ ವಿನಂತಿಸುತ್ತಿದ್ದಾರೆ. ಅವರಿಗೆ ಅವಕಾಶ ನಿರಾಕರಿಸಿದ ಬಳಿಕ ಕಳೆದ ತಿಂಗಳು ಸಮಿತಿಗೆ ಪತ್ರವೊಂದನ್ನು ಬರೆದು, 2008ರಲ್ಲಿ 2ಜಿ ತರಂಗಾಂತರದ ವಿವಾದಿತ ಮಂಜೂರಾತಿಯ ನಿರ್ಧಾರದ ಹಿಂದೆ ಪ್ರಧಾನಿಯೂ ಇದ್ದಾರೆಂದು ಆರೋಪಿಸಿದ್ದರು.
ಕೃಪೆ;ವಾ.ಭಾರತಿ 

No comments:

Post a Comment