Thursday, April 25, 2013

ಕೇರಳ: ಎಸೆಸೆಲ್ಸಿ ಫಲಿತಾಂಶ ಪ್ರಕಟ ಕಾಸರಗೋಡು, : ಕೇರಳ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ರಾಜ್ಯವಾರು 94.17 ಶೇ. ಫಲಿತಾಂಶ ದಾಖಲಾಗಿದೆ. ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ 0.53 ಶೇ. ಹೆಚ್ಚಳವಾಗಿದೆ. ಶಿಕ್ಷಣ ಸಚಿವ ಅಬ್ದುರಬ್ ಇಂದು ಬೆಳಗ್ಗೆ ತಿರುವನಂತಪುರಂನಲ್ಲಿ ಫಲಿತಾಂಶವನ್ನು ಪ್ರಕಟಿಸಿದರು. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿ ಗಳಲ್ಲಿ 10,073 ವಿದ್ಯಾರ್ಥಿಗಳು ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ವಿದೇಶದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ. 98.8 ಮಂದಿ ಉತ್ತೀರ್ಣರಾಗಿದ್ದಾರೆ. 272 ಸರಕಾರಿ ಶಾಲೆಗಳು 100 ಶೇ. ಫಲಿತಾಂಶ ಪಡೆದುಕೊಂಡಿವೆ.
ಇದೇ ಮೊದಲ ಬಾರಿಗೆ ಇಷ್ಟು ಬೇಗ ಫಲಿತಾಂಶ ಪ್ರಕಟಿಸಲಾಗಿದೆ.
ಈ ಬಾರಿ 4.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ಬಾರಿ 93.64 ಶೇ. ಫಲಿತಾಂಶ ಬಂದಿತ್ತು.
ಮರುಪರೀಕ್ಷೆ:  ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 13ರಿಂದ 18ರ ತನಕ ಮರು ಪರೀಕ್ಷೆ ನಡೆಯಲಿದೆ. ಮೇ 15ರಿಂದ ಸರ್ಟಿಫಿಕೆಟ್ ವಿತರಿ ಸಲಾಗುವುದು

No comments:

Post a Comment