Wednesday, April 10, 2013

ಹಳಿ ತಪ್ಪಿದ ರೈಲು: ಇಬ್ಬರ ಸಾವು



 ಏಪ್ರಿಲ್ -10-2013

  ತಮಿಳುನಾಡು : ಬೆಂಗಳೂರಿಗೆ ಆಗಮಿಸುತ್ತಿದ್ದ ಮುಜಾಫುರ್-ಯಶವಂತಪುರ ಎಕ್ಸ್ ಪ್ರೆಸ್ ರೈಲು ತಮಿಳುನಾಡಿನ ಅರಕೋಣಂ ಬಳಿ ಹಳಿ ತಪ್ಪಿ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ ಸುಮಾರು 5:45ರ ಸುಮಾರಿಗೆ ಅರಕೋಣಂ ರೈಲ್ವೆ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲೇ ಹಳಿತಪ್ಪಿ ದುರಂತ ಸಂಭವಿಸಿದೆ. 11 ಬೋಗಿಗಳು ಹಳಿತಪ್ಪಿ ಉರುಳಿ ಬಿದ್ದಿವೆ. ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಜಾಫುರ್ ನಿಂದ ರೈಲು ಯಶವಂತಪುರಕ್ಕೆ ಆಗಮಿಸುತ್ತಿತ್ತು. ಇದುವರೆಗೂ ಉರುಳಿ ಬಿದ್ದ ಬೋಗಿಯಿಂದ 29 ಮಂದಿಯನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ 8 ಅಗ್ನಿ ಶಾಮಕದಗಳು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿತರವಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚೆನ್ನೈನಿಂದ ಪರಿಹಾರ ತಂಡ ರವಾನಿಸಲಾಗಿದೆ.
  ರೈಲು ಅಪಘಾತದ ಹಿನ್ನೆಲೆಯಲ್ಲಿ ಚೆನ್ನೈನಿಂದ ತೆರಳುವ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿಗೆ ತೆರಳಬೇಕಾಗಿದ್ದ ಬೃಂದಾವನ ಎಕ್ಸ್ ಪ್ರೆಸ್, ಚೆನ್ನೈ ಕೊಯಮತ್ತೂರು ತುರುಂತೊ ಎಕ್ಸ್ ಪ್ರೆಸ್, ಲಾಲಾ ಬಾಗ್ ಎಕ್ಸ್ ಪ್ರೆಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.

No comments:

Post a Comment