Sunday, April 28, 2013

ಕರ್ನಾಟಕ ಚುನಾವಣೆ:ಗಡಿ ಪ್ರದೇಶದಲ್ಲಿ ಬಿಗಿ ಸುರಕ್ಷಾ ಕ್ರಮ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕರ್ನಾಟಕ ಚುನಾವಣೆಗೆ ಸಂಭಂಧಿಸಿ ಪೂರ್ವಭಾವಿಯಾಗಿ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಬಿಗಿ ಸುರಕ್ಷಾಕ್ರಮ ಕೈಗೊಳ್ಳಲು ಕೇರಳ ಕರ್ನಾಟಕ ರಾಜ್ಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ  ಸೇರಿದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಚುನಾವಣೆಗೆ ಸಂಭಂಧಿಸಿ ವಾಹನಗಳಲ್ಲಿ ಹಣ,ಆಯುಧ ಮೊದಲಾದ ರೀತಿಯ ಸಾಗಾಟವನ್ನು ತಡೆಯಲು ಹಾಗು  ಗಡಿ ಪ್ರದೇಶದಲ್ಲಿ ವಾಹನಗಳನ್ನು ತೀವೃ ತಪಾಸಣೆಗೊಳಪಡಿಸಲು ಸಭೆಯಲ್ಲಿ ಸಮಾಲೋಚಿಸಲಾಯಿತು. ಪ್ರದೇಶಗಳಲಿ ಸೇನೆಯನ್ನು ಕೂಡಾ ನೇಮಿಸಲಾಗಿದೆ.ಮಾತ್ರವಲ್ಲದೆ ಮೆ ರಿಂದ ಪ್ರತ್ಯೇಕ ಸೇನೆಯನ್ನು ನಿಯೋಜಿಸಿ ವಾಹನತಪಾಸಣೆ ಪಿಕಟಿಂಗ್,ಹಾಗು ಮೊಬೈಲ್ ಪೆಟ್ರೋಲಿಂಗ್ ಕೂಡಾ ನಡೆಯಲಿದೆ.ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿ ಎಸ್.ಸುರೇಂದ್ರನ್,..ಜಿಲ್ಲಾ ಪೊಲೀಸ್ ಅದಿಕಾರಿ ಅಭಿಷೇಕ್ ಗೋಯಲ್ ಹಾಗು ಇತರ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

No comments:

Post a Comment