Sunday, April 14, 2013

ಪ್ರಯಾಣ ದರ ವಿವಾದ: ಬಸ್ಸಲ್ಲೇ ಬೆಂಕಿ ಹಚ್ಚಿಕೊಂಡ ಪ್ರಯಾಣಿಕ!ಏಪ್ರಿಲ್ -14-2013

ಅಮರಾವತಿ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ಸಿನ ಪ್ರಯಾಣ ದರದ ಕುರಿತು ನಿರ್ವಾಹಕನೊಂದಿಗೆ ಚರ್ಚೆ ನಡೆಸಿದ ಪ್ರಯಾಣಿಕನೊಬ್ಬ, ಬಸ್ಸು ಮುಂದೆ ಸಾಗುತ್ತಿದ್ದಂತೆಯೆ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ವಿದ್ಯಮಾನ ವೊಂದು ಅಮರಾವತಿ ಜಿಲ್ಲೆಯಿಂದ ವರದಿ ಯಾಗಿದೆಯೆಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಯ ವೇಳೆ ತಿವ್ಸಾ- ಚಂದುರು ರಸ್ತೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಬಸ್ಸಿನ ನಿರ್ವಾಹಕ ಪ್ರಯಾಣಿಕನಲ್ಲಿ ಟಿಕೆಟ್ ಖರೀದಿಸುವಂತೆ ಕೇಳಿದಾಗ ಈ ದುರಂತ ಸಂಭವಿಸಿದೆ.
ಮದ್ಯಪಾನ ಮಾಡಿದ್ದನೆನ್ನಲಾದ ಆ ವ್ಯಕ್ತಿ ಪ್ರಯಾಣ ದರದ ಕುರಿತು ನಿರ್ವಾಹಕನಲ್ಲಿ ಬಿಸಿಬಿಸಿ ವಾಗ್ವಾದಕ್ಕೆ ತೊಡಗಿದನು.
ಬಸ್ಸು ಮುಂದೆ ಸಾಗುತ್ತಿರುವಂತೆಯೇ ಪ್ರಯಾಣಿಕ ತನ್ನಲ್ಲಿದ್ದ ಕ್ಯಾನಿನಿಂದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡನೆಂದು ತಿವ್ಸಾ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಆ ವ್ಯಕ್ತಿ ಸುಟ್ಟ ಗಾಯಗಳಿಂದ ಸಾವಿಗೀಡಾ ಗಿದ್ದು, ಇತರ 17 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮೃತನ ಗುರುತು ಹಾಗೂ ಸಾರ್ವಜನಿಕ ಬಸ್ಸಿನಲ್ಲಿ ಆತ ಈ ರೀತಿ ಮಾಡಲು ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಬಸ್ಸಿಗೂ ಹಾನಿಯಾಗಿದೆ ಯೆಂದು ತನಿಖಾಧಿಕಾರಿ ಸಹಾಯಕ ಪೊಲೀಸ್ ನಿರೀಕ್ಷಕ ಆರ್.ಎಸ್.ಶಾಹುಲ್ ತಿಳಿಸಿದ್ದಾರೆ.

No comments:

Post a Comment