Wednesday, April 17, 2013

ಬಸ್ಸಿನಲ್ಲಿ ಹಾಗು ಮದುವೆ ಹಾಲ್ ನಲ್ಲಿ ಪಿಕ್ ಪಾಕೆಟ್ ಮಾಡುವ ತಂಡ ಸಕ್ರಿಯ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಪ್ರಯಾಣಿಕರು ತುಂಬಿಕೊಂಡಿರುವ ಬಸ್ಸುಗಳಲ್ಲಿ ಹಾಗು ಜನ ತುಂಬಿರುವ ಮದುವೆ ಹಾಲ್ ಗಳಲ್ಲಿ ಚಿನ್ನಾಭರಣ ಹಾಗು ಹಣದ ಪರ್ಸ್ ಗಳನ್ನು ಕಳವುಗೈಯುವ ಯುವತಿಯರ ತಂಡವೊಂದು ಕುಂಜತ್ತೂರು,ಮಂಜೇಶ್ವರ ಹಾಗು ಉಪ್ಪಳಗಳಲ್ಲಿ ಸಕ್ರಿಯಗೊಂಡಿದೆ.
ತಮಿಳ್ ಹಾಗು ಕನ್ನಡ ಬಾಷೆಗಳಲ್ಲಿ ಮಾತನಾಡಬಲ್ಲ ಸುಮಾರು 18 ರಿಂದ 20 ವರ್ಷ ಪ್ರಾಯದ ಯುವತಿಯರು ಈ ತಂಡದಲ್ಲಿದ್ದಾರೆ. ಕುಂಬಳೆ,ಉಪ್ಪಳ, ತಲಪಾಡಿ ಹಾಗು ಮಂಗಳೂರು ಕಡೆಗೆ ತೆರಳುವ ಬಸ್ಸುಗಳಲ್ಲಿ ಹೆಚ್ಚಾಗಿ ಇವರು ಕಳವು ನಡೆಸುತಿದ್ದಾರೆ.ಈ ಯುವತಿಯರು ಹೆಗಲಲ್ಲಿ ಒಂದು ಜೋಲಿಗೆಯನ್ನು ಹಾಕಿ ಕೊಂಡು ಹೊಟ್ಟೆಯ ಬಾಗಕ್ಕೆ ಬಟ್ಟೆಗಳನ್ನು ತುರುಕಿಸಿ ಗರ್ಭಿಣಿ ಸ್ತ್ರ‍ಿಯಂತೆ ನಟಿಸಿ ಬಸ್ಸುಗಳನ್ನು ಹತ್ತುವ ಇವರು ಕೂರಲು ಸೀಟಿನ ಸೌಕರ್ಯವಿದ್ದರೂ ಕುಳಿತುಕೊಳ್ಳದೆ ಸ್ತ್ರೀಗಳ ಹಿಂದಿನಿಂದಲೇ ತಾಗಿ ನಿಂತುಕೊಂಡು  ಪಿಕ್ ಪಾಕೆಟ್ ನಡೆಸುತಿದ್ದಾರೆ. ಅದೇ ರೀತಿ ಮದುವೆ ಸಮಾರಂಭಗಳಿಗೆ ಬುರ್ಖಾ ಧರಿಸಿ ಆಗಮಿಸುತ್ತಿರುವ ಈ ಯುವತಿಯರು ಮದುವೆಗೆ ಬಂದ  ಸಣ್ಣ ಮಕ್ಕಳ ಕುತ್ತಿಗೆಯಿಂದ ಚಿನ್ನವನ್ನು ಎಗರಿಸುವುದು,ಮಹಿಳೆಯರ ಬ್ಯಾಗನ್ನು ಎಗರಿಸುವುದು ಮೊದಲಾದ ರೀತಿಯ ಕಳ್ಳತನವನ್ನು ನಡೆಸುತಿದ್ದಾರೆ.ಈ ಹಿಂದೆ ಹಲವಾರು ಪ್ರಕರಣಗಳು ಕುಂಜತ್ತೂರು,ಮಂಜೇಶ್ವರ ಹಾಗು ಉಪ್ಪಳ ಮದುವೆ ಹಾಲ್ ಗಳಲ್ಲಿ ನಡೆದಿದೆ,ಕೆಲವು ದಿನಗಳ ಹಿಂದೆ ಉಪ್ಪಳದಲ್ಲಿ  ಬಸ್ಸಿನಲ್ಲಿ ಸಂಚಹರಿಸುತಿದ್ದ  ಶಾಲಾ ಶಿಕ್ಷಕಿಯೊಬ್ಬಳ ಬ್ಯಾಗ್ ನಿಂದ ಹಣವಿರುವ ಪರ್ಸನ್ನು ಕಳವು ಗೈದ ಘಟನೆ ನಡೆದಿದೆ. ಈ ಸಮಯದಲ್ಲೂ ಜತೆಯಾಗಿ ಬಸ್ಸಿನಲ್ಲಿ ಮೂವರು ಯುವತಿಯರು ಜತೆಯಲ್ಲಿದ್ದರೆನ್ನಲಾಗಿದೆ.ಮಾತ್ರವಲ್ಲದೆ 2 ದಿವಸ ಮೊದಲು ಮದ್ಯಾಹ್ನ ವೇಳೆ  ಮಂಗಳೂರು ಡಿಪೋದಿಂದ ಕಾಸರಗೋಡಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ 3 ಮಂದಿ ಯುವತಿಯರು ಹೆಗಲಿಗೆ ಜೋಲಿಗೆ ಹಾಕಿ ಕೊಂಡು ಕುಳಿತಿದ್ದು  ಶಂಕಿತಗೊಂಡ ಪ್ರಯಾಣಿಕರೋರ್ವರು ಇವರ ಬಗ್ಗೆ ನಿಗಾವಹಿಸಿದ್ದರು.ಬಸ್ಸು ತೊಕ್ಕೋಟಿಗೆ ತಲುಪಿ ಪ್ರಯಾಣಿಕರು ತುಂಬಿದಾಗ ಇದೇ ಯುವತಿಯರು ಸೀಟಿನಿಂದ ಎದ್ದು ಬೇರೊಬ್ಬ ಹೆಂಗಸಿನ ಮೈಗೆ ತಾಗಿಕೊಂಡು ನಿಂತಾಗ ಪ್ರಯಾಣಿಕರು ಅವರನ್ನು ಗಮನ ಹರಿಸುತ್ತಿರುವುದು ಶಂಶಯಗೊಂಡ ಯುವತಿಯರಿಗೆ ಮನವರಿಕೆಯಾಗಿ ಮಂಜೇಶ್ವರದ ಮುಂದಿನ ಸ್ಟಾಪ್ ನಲ್ಲಿ ಇಳಿದುಹೋಗಿದ್ದು ಮೂವರಲ್ಲಿ ಒಬ್ಬಳ ಕೈಯಲ್ಲಿ ಕನ್ನಡದಲ್ಲಿ ಮಚ್ಚೆಹಾಕಿದ ಅಕ್ಷರವನ್ನು ಕಂಡಿರುವುದಾಗಿ ಪ್ರಯಾಣಿಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.ಈ ಬಗ್ಗೆ ಕಾನೂನುಪಾಲಕರು ನಿಗಾವಹಿಸಬೇಕಾಗಿದೆ.ಈಗಾಗಲೇ ಕುಂಜತ್ತೂರು ಮಂಜೇಶ್ವರ ಉಪ್ಪಳಗಳಲ್ಲಿ ಪಿಕ್ ಪಾಕೆಟ್ ನಡೆಸುವ ಯುವತಿಯರ ತಡ ಹರಡಿ ನಿಂತಿದೆ.ಈ ಬಗ್ಗೆ ಪ್ರಯಾಣಿಕರು ಕೂಡಾ ಜಾಗೃತರಾಗಬೇಕಾಗಿದೆ.ಶಂಶಯಕಂಡ ಯುವತಿಯರ ಮಾಹಿತಿಯನ್ನು ಕೂಡಲೇ ಹತ್ತಿರವಿರುವ ಪೊಲೀಸರಿಗೆ ತಿಳಿಸಬೇಕಾಗಿದೆ.

No comments:

Post a Comment