Friday, April 26, 2013

ಬಡಾಜೆ: ಬೈಕ್ ತಡೆದು ಹಲ್ಲೆ
ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಂಠ ಪೂರ್ತಿ ಕುಡಿದ ವ್ಯಕ್ತಿಯೊಬ್ಬ ಬೈಕ್ ತಡೆದು ಸವಾರನಿಗೆ ಹಲ್ಲೆಗೊಳಿಸಿ ಬೈಕನ್ನು ಹತ್ತಿರವಿರುವ ಕಣಿವೆಗೆ ದೂಡಿ ಹಾಕಿದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಬಡಾಜೆ ಶಾಲೆಯತ್ತಿರ ಗುರುವಾರ ರಾತ್ರಿ ಸಂಭವಿಸಿದೆ.
 ಗುರುವಾರ ರಾತ್ರಿ  ಬಡಾಜೆ ನಿವಾಸಿ ಮಹಮ್ಮದ್(45) ಹಾಗು ಪಾವೂರು ನಿವಾಸಿ ಕಾದರ್(32)ಎಂಬವರು ಮಂಜೇಶ್ವರದಿಂದ ಬಡಾಜೆಯಲ್ಲಿರುವ ಮನೆಯತ್ತಿರ ಬೈಕ್ ನಲ್ಲಿ  ಬರುತಿದ್ದಾಗ ಬಡಾಜೆ ಶಾಲೆಯ ಸಮೀಪ ತಲುಪುವಾಗ ಸಮೀಪದ ಕಟ್ಟೆಯಲ್ಲಿ ಕಂಠಪೂರ್ತಿ ಕುಡಿದು ಕುಳಿತಿದ್ದ ಕಲೀಲ್ ಯಾನೆ ಅಬ್ಬಕಾಬೇಟಾ ಕಲೀಲ್(35) ಎಂಬಾತ ಇವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ನಿಂದಿಸಿ ಹಲ್ಲೆಗೈದು ಅವರ ಬೈಕನ್ನು ಹತ್ತಿರವಿರುವ ಕಣಿವೆಗೆ ದೂಡಿಹಾಕಿರುವುದಾಗಿ ದೂರಲಾಗಿದೆ.ಬೈಕ್ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಡಿದು ಗಲಾಟೆ ಎಬ್ಬಿಸಿ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಕಲೀಲ್ ಯಾನೆ ಅಬ್ಬಕಾಬೇಟಾ ಕಲೀಲ್ ನನ್ನು ಇದೀಗ ಪೊಲೀಸರು  ಹುಡುಕಾಟದಲ್ಲಿದ್ದಾರೆ.

No comments:

Post a Comment