Tuesday, April 16, 2013

ಪಿ.ಬಿ.ಶ್ರೀನಿವಾಸ್‌ಗೆ ದುಃಖತಪ್ತ ವಿದಾಯ


 ಏಪ್ರಿಲ್ -16-2013

ಚೆನ್ನೈ,: ದಕ್ಷಿಣ ಭಾರತದ ಭಾಷೆಗಳ ಖ್ಯಾತ ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್‌ರ ಅಂತ್ಯಸಂಸ್ಕಾರ ಇಂದು ಇಲ್ಲಿ ನಡೆಯಿತು. ದುಃಖತಪ್ತ ಅಭಿಮಾನಿಗಳು ಅವರಿಗೆ ಬಾಷ್ಪಾಂಜಲಿ ಸಲ್ಲಿಸಿದರು.
ಇಂದು ಮಧ್ಯಾಹ್ನ ಕನ್ನಂಪೆಟ್ಟೈ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ಅಂತ್ಯಸಂಸ್ಕಾರದ ವೇಳೆ ಹಿರಿಯ ಮಗ ಚಿತೆಗೆ ಅಗ್ನಿಸ್ಪರ್ಷ ಮಾಡಿದರು.
ಅಂತ್ಯಸಂಸ್ಕಾರದ ವೇಳೆ ತಮಿಳುನಾಡಿನ ಮಂತ್ರಿ ಕೆ.ಟಿ. ರಾಜೇಂದ್ರ ಬಾಲಾಜಿ ಮತ್ತು ಚೆನ್ನೈ ಮೇಯರ್ ಸೈದಾಯ್ ದುರೈಸ್ವಾಮಿ ಉಪಸ್ಥಿತರಿದ್ದರು.
ವಾಣಿ ಜಯರಾಮ್, ಪಿ. ಸುಶೀಲಾ ಮತ್ತು ಎಸ್. ಜಾನಕಿ ಸೇರಿದಂತೆ ದಕ್ಷಿಣ ಭಾರತದ ಚಿತ್ರ ಜಗತ್ತಿನ ಹಲವಾರು ಹಿನ್ನೆಲೆ ಗಾಯಕರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರು.
82 ವರ್ಷದ ಶ್ರೀನಿವಾಸ್ ಇಲ್ಲಿನ ಸಿಐಟಿ ನಗರ ನಿವಾಸದಲ್ಲಿ ಅಲ್ಪ ಕಾಲದ ಅಸೌಖ್ಯದ ಬಳಿಕ ನಿನ್ನೆ ನಿಧನಹೊಂದಿದರು.

ಶ್ರೀನಿವಾಸ್‌ರ ಅಂತ್ಯಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲಿ ಮಾಡಲು ಒಪ್ಪದ ಅವರ ಕುಟುಂಬಿಕರು ಕಟ್ಟಿಗೆ ಚಿತೆಯಲ್ಲಿ ಏರ್ಪಡಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರತಿವಾದಿ ಭಯಂಕರ ಶ್ರೀನಿವಾಸ್ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳಲ್ಲಿ ಹಾಡಿದ್ದರು. ಹಿಂದಿಯಲ್ಲೂ ಕಂಠದಾನ ಮಾಡಿ ದ್ದರು. ಪ್ರತಿವಾದಿ ಭಯಂಕರ ಎನ್ನುವುದು ಅವರ ಕುಟುಂಬದ ಹೆಸರಾಗಿತ್ತು.
ಕನ್ನಡದಲ್ಲಿ ರಾಜ್‌ಕುಮಾರ್ ಮತ್ತು ತಮಿಳಿನಲ್ಲಿ ಜೆಮಿನಿ ಗಣೇಶನ್‌ಗೆ ಅವರು ಮುಖ್ಯವಾಗಿ ಕಂಠದಾನ ಮಾಡಿದ್ದರು. ಅದೂ ಅಲ್ಲದೆ, ಆ ಕಾಲದ ಎಲ್ಲ ಪ್ರಮುಖ ನಟರಿಗಾಗಿ ಹಾಡಿದ್ದರು.
ಅವರು ತನ್ನ ಕೊನೆಯ ಹಾಡನ್ನು 2010ರಲ್ಲಿ ತಮಿಳು ಚಿತ್ರ ‘ಅಯಿರತಿಲ್ ಒರುವನ್’ಗಾಗಿ ಹಾಡಿದ್ದರು.

No comments:

Post a Comment