Wednesday, April 10, 2013

ಔಷಧದ ದುರುಪಯೋಗ ತಡೆಗಟ್ಟಲು ಆರೋಗ್ಯ ಇಲಾಖೆ ಕಠಿಣ ಕ್ರಮಕ್ಕೆ ಚಾಲನೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ವೈಧ್ಯರು ರೋಗಿಗಳನ್ನು ಪ್ರಜ್ಞೆಗೆಡಿಸಲು ಹಾಗು ಅಮಲುಭರಿಸಲು ಅಗತ್ಯವಿರುವ ಔಷಧ ಸಾಮಾಗ್ರಿಗಳನ್ನು ಕೆಲವರು ಔಷಧಿ ಅಂಗಡಿಗಳಿಂದ ವೈಧ್ಯರ ಅನುಮತಿ ಪತ್ರವಿಲ್ಲದೆ ಖರೀದಿಸಿ  ದುರುಪಯೋಗಿಸಿಕೊಳ್ಳುತ್ತಿರುವುದಾಗಿ ದೂರುಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಹವ್ಯಾಸಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಚಾಲನೆ ನೀಡಿದೆ.
"ಶೆಡ್ಯೂಲ್ ಎಚ್" ನಲ್ಲಿ ಯಾದಿಯಲ್ಲಿ ಒಳಗೊಂಡಿರುವ ಔಷಧ ಸಾಮಾಗ್ರಿಗಳನ್ನು ಇನ್ನು ಮುಂದೆ ಮದ್ದಿನಂಗಡಿಗಳಿಂದ ಖರೀದಿಸಬೇಕಾದರೆ ಅದಕ್ಕೆ ಸಂಭಂಧಪಟ್ಟ ವೈಧ್ಯರು ನೀಡಿದ ಮದ್ದಿನ ಚೀಟಿ ಮತ್ತು ಪ್ರತಿಗಳನ್ನು ಮದ್ದಿನ ಅಂಗಡಿಗಳಲ್ಲಿ ಹಾಜರು ಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಮೆಡಿಕಲ್ ನವರು ರೋಗಿಗಗಳು ತಂದ ಚೀಟಿಯ ಪ್ರತಿಯನ್ನು ಪಡೆದು ಕಾಯ್ದಿರಿಸಿ ವೈಧ್ಯರುಗಳ ಸೂಚನೆ ಪ್ರಕರಾವೇ ಇನ್ನು ಮುಂದೆ ಅಂತಹ ಔಷಧಿಗಳನ್ನು ವಿತರಿಸಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕೋಡಿನ್ ಮಿಶ್ರಿತ ಕಪ್ ಶಿರಫ್ ಗಳು, ಮಾತ್ರೆಗಳು,ಡೆಕ್ಸೋ ಪ್ರಪೋಕ್ಸಿಪಿಸ್ ಒಳಗೊಂಡ ಔಷಧ ಸಾಮಾಗ್ರಿಗಳು ರೋಗಿಗಳಿಗೆ ಅಮಲುಭರಿಸಲು ಯಾ ಪ್ರಜ್ಞೆಗೆಡಿಸಲು ನೀಡುವ ಔಷಧ ಸಾಮಾಗ್ರಿ ಮಾನಸಿಕ ಒತ್ತಡ ತಣಿಸಲು ಬಳಸುವ ಔಷಧಿಗಳು ಗರ್ಭಸ್ರಾವಕ್ಕಾಗಿ ಬಳಸುವ ಮದ್ದುಗಳು,ಹಾಗು ಗಂಡಸರು ಬಳಸುವಂತಹ ಉತ್ತೇಜಕ ಔಷಧಿಗಳನ್ನು ಇದೀಗ ವಿಶೇಷವಾಗಿ ನಿಯಂತ್ರಿಸುವ ಕ್ರಮಕ್ಕೆ ಚಾಲನೆ ನೀಡಲಾಗಿದೆ.ಅಮಲು ಉಂಟು ಮಾಡುವ ಔಷದಿಗಳನ್ನು ಇತ್ತೀಚಿನ ದಿನಗಳಲ್ಲಿ ಯುವಕರು,ವಿದ್ಯಾರ್ಥಿಗಳು ಪಡೆದು ಕೊಂಡು ದುರುಪಯೋಗಪಡಿಸುತ್ತಿರುವುದು ಪತ್ತೆ ಹಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ

No comments:

Post a Comment