Wednesday, April 3, 2013

ಹಲವಾರು ಶಂಶಯಗಳಿಗೆ ಎಡೆ ಮಾಡಿ ಕೊಟ್ಟ ಎಲ್.ಎಲ್.ಬಿ.ಪದವೀಧರನ ನಾಪತ್ತೆ ಪ್ರಕರಣನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಎಲ್.ಎಲ್.ಬಿ.ಪದವೀಧರನೊಬ್ಬರು ಗಲ್ಫ್ ರಾಜ್ಯಕ್ಕೆ ತೆರಳುವುದಾಗಿ ಮನೆಯಿಂದ ಹೊರಟವರು ಸಾಧಾರಣ ಕಳೆದ ಒಂದು ವರ್ಷದಿಂದ ಯಾವುದೇ ಮಾಹಿತಿ ಲಭ್ಯವಾಗದೆ ಇರುವುದು ಹಲವು ಶಂಶಯಗಳಿಗೆ ಎಡೆ ಮಾಡಿ ಕೊಟ್ಟಿದೆ.
ಬಂಗ್ರ ಮಂಜೇಶ್ವರ ರೈಲ್ವೇ ಗೇಟಿನ ಸಮೀಪದ ಸುಂದರ ಮಾಸ್ಟರ್ ಎಂಬವರ ಪುತ್ರ ಎಲ್.ಎಲ್.ಬಿ.ಪದವೀಧರನಾದ ಮೋಹನ್ ರಾಜ್(೩೨) ಎಂಬವರಾಗಿದ್ದಾರೆ ನಾಪತ್ತೆಯಾದ ವ್ಯಕ್ತಿ.ಮನೆಯಿಂದ ಹೊರಟ ಕೆಲವು ದಿನ ಕಳೆದು ಇವರು ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಅರ್ಜಂಟಾಗಿ ೬೦ ಸಾವಿರ ಬೇಕೆಂದು ತಿಳಿಸಿದ್ದಾರೆನ್ನಲಾಗಿದೆ.ಅದರಂತೆ ಮನೆಯವರು ಮೋಹನ್ ರಾಜ್ ರವರ ಬ್ಯಾಂಕ್ ಖಾತೆಗೆ ಹಣ ರವಾನಿಸಿದ್ದಾರೆ.ಮೋಹನ್ ರಾಜ್ ರವರು ಮನೆಯವರಿಗೆ ಹಣದ ಬೇಡಿಕೆಯನ್ನು ಇಟ್ಟು ಪೋನ್ ಮಾಡಿದ ನಂಬ್ರವನ್ನು ಪರಿಸೋಧಿಸಿದಾಗ ಅದು ನೇಪಾಲ್ ನಿಂದ ಬಂದ ಕರೆಯಾಗಿತ್ತೆಂದು ಹೇಳಲಾಗಿದೆ.ಮೋಹನ್ ರಾಜ್ ರವರನ್ನು ಸಂಪರ್ಕಿಸಲು ಅವರ ಮೊಬೈಲ್  ನ್ನು ಪ್ರಯತ್ನಿಸಿದಾಗ ಅದು ಕೂಡಾ ಸ್ವಿಚ್ ಆಫ್ ಆಗಿತ್ತೆಂದು ದೂರಲಾಗಿದೆ.ಅದರ ನಂತ್ರ ಇದುವರೆಗೂ ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ತಿಂಗಲು ಕಳೆದು ಹಣ ಕಳಿಸಿದ್ದನ್ನು ಅವರ ಎಚ್.ಡಿ.ಎಫ್.ಸಿ ಬ್ಯಾಂಕ್ ಮುಖಾಂತರ ವಿಚಾರಿಸಿದಾಗ ಹಣ ಕೂಡಾ ನೇಪಾಲದ ಕಾಟ್ಮಂಡು ವಿನಿಂದ ಅವರ ಎಟಿಎಂ ಕಾರ್ಡ್ ನಿಂದಲೇ ಕ್ಯಾಶ್ ಮಾಡಲಾಗಿದೆ. ಗಲ್ಫ್ ಗೆಂದು ಹೋದವರಿಗೆ ನೇಪಾಲದಲ್ಲಿ ಹೇಗೆ ಸಂಪರ್ಕ ಬಂತು? ಅವರನ್ನು ಯಾರಾದರೂ ಕಿಡ್ನಾಪ್ ಮಾಡಿರಬಹುದೇ? ಮೊದಲಾದ ರೀತಿಯ ಹಲವು ಶಂಶಯಗಳು ಇವರ ನಾಪತ್ತೆಯ ಹಿಂದೆ ಹುಟ್ಟಿಕೊಂಡಿದೆ.
ಇದುವರೇಗೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿ ಕೊಂಡಿದ್ದಾರೆ.(ಚಿತ್ರ ಜತೆಯಾಗಿದೆ)

No comments:

Post a Comment