Saturday, April 13, 2013

ಹಿಂದಿ ಚಿತ್ರರಂಗದ ಹಿರಿಯ ನಟ ಪ್ರಾಣ್‌ಗೆ ಫಾಲ್ಕೆ


ಪ್ರಾಣ್‌ಗೆ ಫಾಲ್ಕೆ


 ಏಪ್ರಿಲ್ -13-2013

ಮುಂಬೈ,:  ಹಿಂದಿ ಚಿತ್ರರಂಗದ ಹಿರಿಯ ನಟ ಪ್ರಾಣ್‌ಗೆ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಶುಕ್ರವಾರ ಘೋಷಿಸಲಾಗಿದೆ. ಏಳು ದಶಕಗಳಿಗೂ ಮಿಕ್ಕಿದ ತನ್ನ  ಚಿತ್ರರಂಗದ ಬದುಕಿನಲ್ಲಿ ಪ್ರಾಣ್ ೩೫೦ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ೧೯೪೫ರಲ್ಲಿ ದಲ್ಸುಖ್ ಪಾಂಚೋಲಿಯವರ  ‘ಯಾಮ್ಲಾ ಜಾಟ್’ ಪಂಜಾಬಿ ಚಿತ್ರದೊಂದಿಗೆ ಸಿನೆಮಾರಂಗ ಪ್ರವೇಶಿಸಿದ ಪ್ರಾಣ್, ಆ ಬಳಿಕ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯ ಶಿಖರವನ್ನೇರಿದ್ದರು.
ಹಿಂದಿ ಚಿತ್ರರಂಗದ ಮುತ್ತಾತನೆಂದೇ ಖ್ಯಾತಿವೆತ್ತ ಪ್ರಾಣ್ , ತನ್ನ ವಿಶಿಷ್ಟವಾದ  ಅಭಿನಯ ಹಾಗೂ ಸಂಭಾಷಣೆಗಳಿಂದ ಹಲವಾರು ದಶಕಗಳಿಂದ ಚಿತ್ರಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಈ ವರ್ಷ ಅವರು ತನ್ನ ೯೩ನೆ ಜನ್ಮದಿನವನ್ನು ಆಚರಿಸುತ್ತಿದ್ದಾರೆ.                           
                       

No comments:

Post a Comment