Sunday, April 14, 2013

ಜಯಪ್ರದಾ ಕಾರಿನ ಕೆಂಪುಗೂಟ ಕಿತ್ತೆಸೆದ ಉ.ಪ್ರ. ಅಧಿಕಾರಿಗಳು


 ಏಪ್ರಿಲ್ -15-2013

ರಾಮ್‌ಪುರ,: ತನ್ನ ವಾಹನದ ಕೆಂಪುಗೂಟವನ್ನು ಉತ್ತರಪ್ರದೇಶ ಸರಕಾರದ ಕೆಲವು ಅಧಿಕಾರಿಗಳು ಬಲವಂತವಾಗಿ ಕಿತ್ತುಹಾಕಿದ್ದಾರೆಂದು ಖ್ಯಾತ ನಟಿ, ಸಮಾಜವಾದಿ ಪಕ್ಷದ ಸಂಸತ್ ಸದಸ್ಯೆ ಜಯಪ್ರದಾ ಆರೋಪಿಸಿದ್ದಾರೆ ಹಾಗೂ ಈ ವಿಷಯವನ್ನು ತಾನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದಾರೆ.
ಪೊಲೀಸರು ಸೇರಿದಂತೆ ಎರಡು ಡಜನ್‌ಗೂ ಅಧಿಕ ಅಧಿಕಾರಿಗಳ ತಂಡವೊಂದು ತನ್ನ ನಿವಾಸಕ್ಕೆ ಆಗಮಿಸಿ ವಾಹನದ ಕೆಂಪುಗೂಟವನ್ನು ಕಿತ್ತುಹಾಕಿತೆಂದು ಅವರು ತಿಳಿಸಿದ್ದಾರೆ.
‘‘ಅಧಿಕಾರಿಗಳಿಗೆ ನನ್ನ ಮನೆಗೆ ಆಗಮಿಸುವ ಅಗತ್ಯವಿರಲಿಲ್ಲ. ಅವರು ರಸ್ತೆಯಲ್ಲಿ ನನ್ನ ಕಾರಿನ ತಪಾಸಣೆ ಮಾಡಿದರೆ ಸಾಕಿತ್ತು’’ ಎಂದು ಜಯಪ್ರದಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮ್‌ಪುರ ಜಿಲ್ಲೆಯಲ್ಲಿ ಮಾರ್ಚ್ 3ರಂದು ಪೊಲೀಸರು ಜಯಪ್ರದಾ ತಂಗಿದ್ದ ಹೊಟೇಲ್ ಕೊಠಡಿಯ ಮೇಲೆ ದಾಳಿ ನಡೆಸಿದ ಘಟನೆ ನಡೆದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.
ಜಯಪ್ರದಾ ಅವರು ಮತದಾರರಿಗೆ ವಿತರಿಸಲೆಂದು ದೊಡ್ಡ ಮೊತ್ತದ ಹಣವನ್ನು ಹೊತ್ತೊಯ್ಯುತ್ತಿದ್ದರೆಂಬ ಶಂಕೆಯಲ್ಲಿ ಆಕೆಯ ನಿವಾಸದ ಮೇಲೆ ದಾಳಿ ನಡೆಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

No comments:

Post a Comment