Saturday, April 6, 2013

ಇನೋವಾ ಕಾರು ಹಾಗು ಕರ್ನಾಟಕ ಸಾರಿಗೆ ಬಸ್ಸು ಡಿಕ್ಕಿನಮ್ಮ ಪ್ರತಿನಿಧಿ ವರದಿಮಂಜೇಶ್ವರ:ಕರ್ನಾಟಕ ಸಾರಿಗೆ ಬಸ್ಸು ಹಾಗು ಇನೋವಾ ಕಾರು ಪರಸ್ಪರ ಡಿಕ್ಕಿ ಹೊಡೆದು ಇನೋವಾ ಕಾರಿನಲ್ಲಿದ್ದ ಹಾಗು ಬಸ್ಸಿನ ಮುಂಬಾಗದಲ್ಲಿದ್ದ ಯಾತ್ರಿಕರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಬೆಳಿಗ್ಗೆ ಸುಮಾರು ೧೦.೩೦ ಹೊತ್ತಿಗೆ ಇಲ್ಲಿಗೆ ಸಮೀಪದ ಕರೋಡ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಾಸರಗೋಡಿನಿಂದ ಮಂಗಳೂರಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸಿಗೆ ಮಂಗಳೂರಿನಿಂದ ಮಲಪ್ಪುರಂ ಕಡೆ ಸಾಗುತಿದ್ದ ಇನೋವಾ ಕಾರೊಂದು ಲಾರಿಯೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ದುರ್ಘಟನೆ ಸಂಭವಿಸಿದೆ.
ಇನೋವಾ ಕಾರಿನಲ್ಲಿದ್ದ ಕೇರಳದ ಮಲಪ್ಪುರಂ ಪೆರುಂದಲ್ ಮಣ್ಣ ನಿವಾಸಿಗಳಾದ  ಮುಸ್ತಫಾ(೩೫)ರಶೀದ್(೩೦)ರಫಿಕ್(೩೨)ಸಿದ್ದೀಖ್(೩೬)ಮೂಸಾ(೩೫)ಮೊದಲಾದವರು ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಇನೋವಾ ಕಾರಿನ ಚಾಲಕರಾದ ಮಹಮ್ಮದಲಿ (೩೫) ಎಂಬವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.ಕಾರಿನ ಎದುರು ಬಾಗವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಇನೋವಾ ಕಾರಿನಲ್ಲಿದ್ದ ಪ್ರಯಾಣಿಕರು ಮಂಗಳೂರಿನ ದರ್ಗಾವೊಂದಕ್ಕೆ ಬೇಟಿ ನೀಡಿ ಹಿಂತಿರುಗುತಿದ್ದರು.ಬಸ್ಸಿನ ಎದುರು ಬಾಗದಲ್ಲಿದ್ದ ಉಪ್ಪಳ ಪಚ್ಲಂಪ್ಪಾರ ನಿವಾಸಿಯಾದ ರಹ್ಮತ್ ಸಹಿತ ಇಬ್ಬರಿಗೆ ಅಲ್ಪ ಸ್ವಲ್ಪ ಗಾಯಗಳಾಗಿರುತ್ತವೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕರೋಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ತಾಸು ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು.ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿ ರಸ್ತೆಯನ್ನು ಸಂಚಾರಕ್ಕೆ ಸುಗಮ ಗೊಳಿಸಿದರು

No comments:

Post a Comment