Monday, April 22, 2013

ಗ್ರಾಹಕರಿಂದ ದೂರನ್ನು ದಾಖಲಿಸದ ಮಂಜೇಶ್ವರ ವಿದ್ಯುತ್ ಇಲಾಖೆಯ ಸಿಬ್ಬಂಧಿ: ಮೇಲಾಧಿಕಾರಿಗಳಿಗೆ ದೂರು
ಮಂಜೇಶ್ವರ:ಮಂಜೇಶ್ವರ ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂಧಿಯೊಬ್ಬ ಗ್ರಾಹಕರು ನೀಡಿದ ದೂರನ್ನು ದಾಖಲಿಸದೆ ಉಡಾಫೆಯಿಂದ ಉತ್ತರಿಸಿದ ಬಗ್ಗೆ ವರದಿಯಾಗಿದ್ದು ಈತನ ವಿರುದ್ದ ಮುಖ್ಯ ಮಂತ್ರಿಯವರ ಸುಧಾರ್ಯ ಕೇರಳಂ ಸಹಿತ ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ರವಾನಿಸಲಾಗಿದೆ.
ಕಳೆದ ಶನಿವಾರದಂದು ಅನಿರೀಕ್ಷಿತವಾಗಿ ಉಂಟಾದ ವಿದ್ಯುತ್ ಮೊಟಕನ್ನು ಮಂಜೇಶ್ವರ ವಿದ್ಯುತ್ ಇಲಾಖೆಗೆ ದೂರನ್ನು ದಾಖಲಿಸಲು ದೂರವಾಣಿ ಮೂಲಕ ಸಂಪರ್ಕಿಸಿದ ಮಂಜೇಶ್ವರ ಗ್ರಾಹಕರ ವೇದಿಕೆಯ ಕಾರ್ಯದರ್ಶಿಯವರಲ್ಲಿ ಕರ್ತವ್ಯದಲ್ಲಿದ್ದ ನೌಕರನೊಬ್ಬ ದೂರನ್ನು ದಾಖಲಿಸಲು ನಿರಾಕರಿಸಿ ಉಡಾಫೆಯಿಂದ ವರ್ತಿಸಿರುವುದಾಗಿ ದೂರಲಾಗಿದೆ.ಈ ಸಂಭಂಧ ಗ್ರಾಹಕರ ವೇದಿಕೆಯ ಕಾರ್ಯದರ್ಶಿಯವರು ಮಂಜೇಶ್ವರ ವಿದ್ಯುತ್ ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್,ಮುಖ್ಯ ಮಂತ್ರಿಯವರ ಸುಧಾರ್ಯ ಕೇರಳಂ,ಹಾಗು ವಿದ್ಯುತ್ ಇಲಾಖೆಯ ವಿಜಿಲೆನ್ಸ್ ಅಧಿಕಾರಿಗಳಿಗೆ ದೂರನ್ನು ರವಾನಿಸಿರುತ್ತಾರೆ.ದೂರು ಸ್ವೀಕರಿಸಿದ ಮಂಜೇಶ್ವರ ವಿದ್ಯುತ್ ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್ ರವರು ದೂರಿಗೆ ಸ್ಪಂಧಿಸಿ ಉಡಾಫೆಯಿಂದ ಅನುಚಿತ ವರ್ತನೆ ತೋರಿದ ನೌಕರನ ವಿರುದ್ದ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ದೂರನ್ನು ರವಾನಿಸುವುದಾಗಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಜೇಶ್ವರ ವಿದ್ಯುತ್ ಇಲಾಖೆಯ ಪೋನ್ ಓಪರೇಟರ್ ಗಳು ಗ್ರಾಹಕರಲ್ಲಿ ಸರಿಯಾದ ಉತ್ತರವನ್ನು ನೀಡದೆ ಉಡಾಫೆಯಿಂದ ವರ್ತಿಸುವುದಾಗಿ ಸಾರ್ವಜನಿಕರಿಂದಲೂ ಕೇಳಿ ಬಂದಿದೆ. 
No comments:

Post a Comment