Monday, April 22, 2013

ಪೊಲೀಸರಿಂದ ಬ್ಯಾನರ್ ಗಳ ತೆರವು

ಮಂಜೇಶ್ವರ: ಗಲಭೆಗೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಹಾಕಲಾಗಿದ್ದ ಬ್ಯಾನರ್ ಗಳನ್ನು ಕುಂಬಳೆ ವೃತ್ತ ನಿರೀಕ್ಷಕ ಟಿ.ಪಿ.ರಂಜಿತ್ ರವರ ನೇತೃತ್ವದಲ್ಲಿ ಇಂದು ತೆರವು ಗೊಳಿಸಲಾಯಿತು.
ಕುಂಜತ್ತೂರಿನಲ್ಲಿ ಇಂದು ಬೆಳಿಗ್ಗೆ ಬ್ಯಾನರ್ ನಲ್ಲಿ ಉಂಟಾದ ವಿವಾದವನ್ನು ಗಂಭೀರವಾಗಿ ತೆಗೆದು ಕೊಂಡ ಪೊಲೀಸ್ ಇಲಾಖೆ ಇಂದಿನಿಂದ ಯಾರೂ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಬ್ಯಾನರ್ ಹಾಕಬಾರದಾಗಿ ಸಾರ್ವಜನಿಕರಲ್ಲಿ ವಿನಂತಿಸಿದೆ.

No comments:

Post a Comment