Monday, April 22, 2013

ಉಳ್ಳಾಲದಲ್ಲಿ ಗುಂಪು ಘರ್ಷಣೆ; ಪೊಲೀಸರಿಂದ ಲಾಠಿ ಚಾರ್ಜ್


ಉಳ್ಳಾಲದಲ್ಲಿ ಗುಂಪು ಘರ್ಷಣೆ; ಪೊಲೀಸರಿಂದ ಲಾಠಿ ಚಾರ್ಜ್

ಉಳ್ಳಾಲ, : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪು ಘರ್ಷಣೆಗೆ ಇಳಿದು ಬಸ್‌ಗಳಿಗೆ ಕಲ್ಲೆಸೆದು ಉದ್ವಿಗ್ನ ಸ್ಥಿತಿ ಉಂಟು ಮಾಡಿದ ಘಟನೆ ರವಿವಾರ ಸಂಜೆ ಉಳ್ಳಾಲ ಬೀಚ್ ರೋಡ್ ಬಳಿ ನಡೆದಿದೆ. ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ದ್ದಾರೆ. ಕಲ್ಲೆಸತದಿಂದ ಬಸ್ಸೊಂದರ ಚಾಲಕ, ಮತ್ತು ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
ಘಟನೆ ವಿವರ: ಮಾಸ್ತಿಕಟ್ಟೆ ನಿವಾಸಿ ಗಣೇಶ್ ಎಂಬವರು ತಮ್ಮ ಇಂಡಿಕಾ ಕಾರಿನಲ್ಲಿ ಉಳ್ಳಾಲ ಬೀಚ್‌ಗೆ ಬಾಡಿಗೆ ಗೆಂದು ಬಂದಿದ್ದರು. ಅವರು ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಅವರ ಕಾರು ಬೀಚ್ ರಸ್ತೆಯಲ್ಲಿ ಮದನಿ ನಗರ ನಿವಾಸಿ ಖತೀಜಮ್ಮ(48) ಎಂಬವರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ಸಂದರ್ಭ ಕೆಲವರು ಗಣೇಶ್‌ರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಗಣೇಶ್ ತನ್ನವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಿಸಿ ಹಲ್ಲೆ ನಡೆಸಿದ್ದರ ಪ್ರತೀಕಾರವಾಗಿ ಮುಕ್ಕಚ್ಚೇರಿ ನಿವಾಸಿ ಹಬೀಬ್(27) ಎಂಬವರ ಹಲ್ಲೆ ನಡೆಸಿದ್ದಾಗಿ ಹೇಳಲಾಗಿದೆ.
ಗಾಯಗೊಂಡಿರುವ ಹಬೀಬ್ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಎರಡು ತಂಡಗಳ ಸದಸ್ಯರು ಉಳ್ಳಾಲ ಪೊಲೀಸ್ ಠಾಣೆಯ ಎದುರು ಜಮಾಯಿಸಿದರು. ಅಲ್ಲದೇ ಠಾಣೆಯ ಎದುರೇ ಘರ್ಷಣೆಗೆ ಇಳಿದರು. ಈ ವೇಳೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಪೊಲೀಸ್ ಠಾಣೆಯ ಎದುರು ಸೇರಿದ್ದ ಗುಂಪುಗಳ ಚಿತ್ರೀಕರಣ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬೆಳ್ಮ ನಿವಾಸಿಗಳಾದ ಮುಸ್ತಫಾ ಹಾಗೂ ಹನೀಫ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಎರಡು ಗುಂಪುಗಳನ್ನು ಚದುರಿಸಿದ ಬಳಿಕ ದುಷ್ಕರ್ಮಿಗಳ ಗುಂಪು ಮುಕ್ಕಚ್ಚೇರಿಯಲ್ಲಿ ಎರಡು ಬಸ್‌ಗಳ ಮೇಲೆ ಕಲ್ಲೆಸೆದು ಹಾನಿ ಮಾಡಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿ ಸಲಾಗಿದೆ.
ಶಾಂತಿ ಕಾಪಾಡಲು ಖಾದರ್ ಮನವಿ: ಸಮಾಜ ದ್ರೋಹಿ ಕೃತ್ಯ ಎಸಗುವವರಿಗೆ ಪೊಲೀಸರ ಭಯ ಇಲ್ಲದಂತಾಗಿದೆ. ದುಷ್ಕೃತ್ಯದಲ್ಲಿ ಭಾಗಿ ಯಾಗುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳ ದಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣ ಎಂದಿರುವ ಶಾಸಕ ಯು.ಟಿ. ಖಾದರ್, ಶಾಂತಿ ಕಾಪಾಡಲು ಸಹಕರಿಸುವಂತೆ ಉಳ್ಳಾಲದ ಜನತೆ ಯಲ್ಲಿ ಮನವಿ ಮಾಡಿದ್ದಾರೆ.

No comments:

Post a Comment