Tuesday, April 9, 2013

ರಾಷ್ಟ್ರೀಯ ಹೆದ್ದಾರಿಯ ಬದಿಯ ಕಾಡಿಗೆ ಬೆಂಕಿನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ  ಕಾಡಿಗೆ ಬೆಂಕಿ ತಗಲಿ ಸಂಪೂರ್ಣವಾಗಿ ಕಾಡಿನಲ್ಲಿ ಬೆಂಕಿ ಹರಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಇಲ್ಲಿಗೆ ಸಮೀಪದ ಕರೋಡದಲ್ಲಿ ಸೋಮವಾರ ಮದ್ಯಾಹ್ನ ಸಂಭವಿಸಿದೆ
 ಕರೋಡಾ ರಾಷ್ಟ್ರೀಯ  ಹೆದ್ದಾರಿಯ ಸಮೀಪವಿರುವ ಕಾಡಿಗೆ  ಬೆಂಕಿ ತಗಲಿ ಕಾಡಿಗೆ ಸಂಪೂರ್ಣ ವ್ಯಾಪಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತಡೆವುಂಟಾಯಿತು.ನಂತ್ರ ಉಪ್ಪಳದಿಂದ ಅಗ್ನಿಶಾಮಕ ಧಳದ ವಾಹನಗಳು ಹಾಗು ಸಿಬ್ಬಂಧಿಗಳು ಸ್ಥಳಕ್ಕೆ ತಲುಪಿ ಸುಮಾರು 1 ತಾಸಿಗಿಂತಲೂ ಅಧಿಕ ಕಾಲ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಶ್ವೀಯಾಗಿದ್ದಾರೆ.ಯಾವುದೇ ಹಾನಿ ಸಂಭವಿಸಿಲ್ಲವಾದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ತಾಸುಕಾಲ ವಾಹನ ಸಂಚಾರದಲ್ಲಿ ಮೊಟಕು ಉಂಟಾಯಿತು. ಯಾರೋ ಕಿಡಿಗೇಡಿಗಳು ಬೆಂಕಿ ಕಡ್ಡಿ ಹಾಕಿದ್ದರಿಂದ ಕಾಡಿಗೆ ಬೆಂಕಿ ತಗಲಿರಬಹುದೆಂದು ಶಂಶಯಿಸಲಾಗಿದೆ

No comments:

Post a Comment