Monday, April 1, 2013

ಸಾರಿಗೆ ಬಸ್ಸು ತಡೆದು ಹಲ್ಲೆ:ಇಬ್ಬರ ವಿರುದ್ದ ಕೇಸು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ;ಕರ್ನಾಟಕ ಸರಕಾರಿ ಬಸ್ಸನ್ನು ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆ ಗೈದ ಪ್ರಕರಣಕ್ಕೆ ಸಂಭಂಧಿಸಿ ಮಂಜೇಶ್ವರ ಪೊಲೀಸರು ಇಬ್ಬರ ವಿರುದ್ದ ಕೇಸು ದಾಖಲಿಸಿದ್ದಾರೆ.
ಮಾರ್ಚ್ ೩೦ರಂದು ಮದ್ಯಾಹ್ನ ಕಾಸರಗೋಡಿನಿಂದ ಮಂಗಳೂರು ಕಡೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸನ್ನು  ಬೈಕ್ ನಲ್ಲಿ ತಂಡವೊಂದು ಪೊಸೋಟು ಸಮೀಪ  ತಡೆದು ನಿಲ್ಲಿಸಿ ಚಾಲಕ ಮೊಹಮ್ಮದ್ ರಫೀಕ್ ಎಂಬವರಿಗೆ ಹಲ್ಲೆ ಗೈದು ಪರಾರಿಯಾಗಿತ್ತು..ಈ ಸಂಭಂಧ ಚಾಲಕ ನೀಡಿದ ದೂರಿನಂತೆ ಇಬ್ಬರ ವಿರುದ್ದ ಕೇಸು ದಾಖಲಿಸಲಾಗಿದೆ.

No comments:

Post a Comment