Thursday, April 11, 2013

ಬರುತ್ತಿವೆ ಬ್ರಾಹ್ಮಣ- ಲಿಂಗಾಯತರಿಗಾಗಿ ಮೀಸಲಾದ ಉಪನಗರಗಳು ಏಪ್ರಿಲ್ -12-2013

ಬೆಂಗಳೂರು: ನಗರೀಕರಣದಿಂದಾಗಿ ಬೆಂಗಳೂರಿನಲ್ಲಿ ಜಾತಿ ತಾರತ್ಯಮ್ಯ ಸ್ವಲ್ಪ ಕೇವಲ ಸ100ಕಿ.ಮೀಗೂ ಕಡಿಮೆ ದೂರದಲ್ಲಿ ಜಾತಿಗಳ ಅಗ್ರಹಾರಗಳು ನಿರ್ಮಾಣವಾಗುತ್ತಿರುವಂತೆ ತೋರುತ್ತಿವೆ.
ಚಿಕ್ಕಬಳ್ಳಾಪುರದಲ್ಲಿ ಬಾಗೇಪಲ್ಲಿಯಲ್ಲಿ ಎರಡು ಲೇಔಟ್‌ಗಳು ನಿರ್ಮಾಣವಾಗಲಿದ್ದು ಅವುಗಳಲ್ಲಿ ಒಂದು ಬ್ರಾಹ್ಮಣರಿಗಾದರೆ ಇನ್ನೊಂದು ಲಿಂಗಾಯತರಿಗೆ. ಈ ಉಪನಗರಗಳ ಪ್ರಾಯೋಜಕ ಸಂಘಟನೆಗಳು ಜಾಹೀರಾತ ನೀಡುವ ಮೂಲಕ ಈ ಸಮುದಾಯಗಳ ಸದಸ್ಯರಿಂದ ವಾಸ್ತವ್ಯ ಸೈಟ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿವೆ.

ಸರಕಾರದ ಗಮನಕ್ಕೆ
ಚಿಕ್ಕಬಳ್ಳಾಪುರದ ಜಿಲ್ಲೆಯ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಜಾತ್ಯಾಧಾರಿತ ಉಪನಗರ ನಿರ್ಮಾಣ ಯೋಜನೆ ಜಾಹೀರಾತುಗಳನ್ನು ಮಾಝಿ ಮುಖ್ಯ ಕಾರ್ಯದರ್ಶಿ ಬಿ.ಆರ್.ಪ್ರಭಾಕರ್ ಗಮನಿಸಿದ್ದು ಈ ಬೆಳವಣಿಗೆ ಸ್ವಲ್ಪ ಕಳವಳಕಾರಿ ಎಂದು ಸೂಚಿಸಿ 2012ರ ಅ.29ರಂದು, ಮುಖ್ಯಮಂತ್ರಿ ಜಗದೀಸ ಶೆಟ್ಟರ್‌ರಿಗೆ ಪತ್ರ ಬರೆದಿದ್ದರು. ಪ್ರಸ್ತಾಪಿತ ಉಪನಗರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದರು.
ನಿವೇಶನ ಪಡೆಯಲು ಮತ, ಭಾಷೆ, ಜಾತಿಗಳನ್ನು ಅರ್ಹತಾಮಾನದಂಡವಾಗಿ ನಿಗದಿಗಳ ಜಾತಿವಾರು ವಾಸ್ಯವ್ಯ ಕಾಲನಿಗಳನ್ನು ನಿರ್ಮಸುವುದು ಹಾಗೂ ಅಭಿವೃದ್ಧಿ ಪಡಿಸುವುದ ಸಂವಿಧಾನಾತ್ಮಕವಾಗಿ ಹಾಗೂ ಕಾನೂನಿನನ್ವಯ ಸರಿಯೇ ಎಂಬುದನ್ನು ಪರೀಕ್ಷಿಸುವುದು ಅಗತ್ಯವೆಂದು ಪ್ರಭಾಕರ ತನ್ನ ಪತ್ರದಲ್ಲಿ ಹೇಳಿದ್ದರು.
ಮುಖ್ಯಮಂತ್ರಿ ಕಚೇರಿಯ ಆ ಪತ್ರವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿತು. ಅದು ಮಾ.14ರಂದು ವಿವರಣೆ ಕೋರಿ ಅದನ್ನು ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಎಂಆರ್‌ಡಿಎ) ರವಾನಿಸಿತ್ತು. ಇದಕ್ಕೆ ಉತ್ತರಿಸಿದ್ದ ಬಿಎಂಆರ್‌ಡಿಎ ಆಯುಕ್ತ ಶಿವಾರಂ, ಜಾತಿಯ ಆಧಾರದಲ್ಲಿ ಉಪನಗರಗಳನ್ನು ನಿರ್ಮಿಸುವಂತಿಲ್ಲ.
ಸರಕಾರವು ತಕ್ಷಣ ಈ ಯೀಜನೆಗಳಲ್ಲಿ ಮಧ್ಯಪ್ರವೇಶಿಸ ಬೇಕು. ಈ ಯೋಜನೆಗಳು ಬಿಎಂಆರ್‌ಡಿಎಯ ವ್ಯಾಪ್ತಿಗೆ ಬಾರದಿರುವುದರಿಂದ ಪಟ್ಟಣ ಮತ್ತು ಗ್ರಾಮ ಯೋಜನೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದರು.
ಇದು ತಪ್ಪಲ್ಲ
ಉಪನಗರಗಳ ಪ್ರಾಯೋಜಕ ಹಾಗೂ ಶ್ರೀ ರೇಣಕಾ ಬಸವೇಶ್ವರ ದಿವ್ಯಧಾಮದ ಆಡಳಿತ ವಿಶ್ವಸ್ತ ಮತ್ತು ಸನಾತನ ಧಾಮ ಪರಿರಕ್ಷಣ ಟ್ರಸ್ಡ್‌ನ ಕಾರ್ಯವಾಹಿ ವಿಶ್ವಸ್ತ ಎಸ್. ಫಣಿಕುಮಾರ್ ಎಂಬವರನ್ನು ಬೆಂಗಳೂರು ಮಿರಕ ಪತ್ರಿಕೆ ಸಂಪರ್ಕಿಸಿದಾಗ ಜಾತಿ ಪದ್ಧತಿ ತಾನು ಸೃಷ್ಟಿಸಿದುದಲ್ಲ. ಜಾತಿಯಾಧಾರದಲಿ ಯಪನಗರ ನಿರ್ಮಾಣದಲ್ಲಿ ಯಾವುದೇ ತಪ್ಪಿಲ್ಲ.
ತಾನು ಈ ಉಪನಗರವನ್ನು ಶೇ.110ರಷ್ಟು ಬೆಂಬಲಿಸುತ್ತೇನೆ. ಸಮುದಾಯ ಉಪನಗರಗಳೆಂದರೆ, ಒಂದು ನಿರ್ದಿಷ್ಟ ಮತ ಮತ್ತು ನಂಬಿಕೆಯನ್ನು ಅನುಸರಿಸುವ ಜನರು ಒಟ್ಟಾಗಿ ವಾಸಿಸುವ ಸ್ಥಳ. ಅಂತಹ ಉಪನಗರಗಳನ್ನು ಅಭಿವೃದ್ಧಿಗಾಗಿ ರಚಿಸಲಾಗುತ್ತದೆಯೆಂದು ಪ್ರತಿಪಾದಿಸಿದ್ದಾರೆ.
ಬ್ರಾಹ್ಮಣರಿಗೆ ಮಾತ್ರ
ಕೇವಲ ಬ್ರಾಹ್ಮಣರಿಗಾಗಿಯೇ ಮೀಸಲಾದ ಉಪನಗರಕ್ಕೆ ಶಂಕರ ಅಗ್ರಹಾರಂ ಎಂದು ಹೆಸರಿಸಲಾಗುವುದು. ಸನಾತನ ಧರ್ಮ ಪರಿರಕ್ಷಣ ಟ್ರಸ್ಟ್‌ಅದನ್ನು ಅಭಿವೃದ್ಧಿಪಡಿಸಲಿದೆ. ಅದು ದೇವನಹಳ್ಳಿ ವಿಮಾನ ನಿಲ್ದಾಣದಿಂದ 60ಕಿ.ಮೀ. ದೂರ ಹಾಗೂ ಬಾಗೇಪಲ್ಲಿ ಪಟ್ಟಣದಿಂದ ಸ10ಕಿ.ಮೀ. ದೂರವಿರಲಿದೆ. ಉಪನಗರ ನಿರ್ಮಾಣದ ಜಾಹೀರಾತೊಂದರಲ್ಲಿ -ವಾಸ್ತವ್ಯ ನಿವೇಶನಗಳು ಮಾರಾಟಕ್ಕಿವೆ- ಬ್ರಾಹ್ಮಣರಿಗೆ ಮಾತ್ರ ಎಂದು ನೀಡಲಾಗಿದೆ.
ವೇದ ಗ್ರಾಮಕ್ಕಾಗಿ ನಿವೇಶನವನ್ನು ಗುರುತಿಸಿ, ನಕ್ಷೆ ರಚಿಸಿ ಸರ್ವೇ ಮಾಡಲಾಗಿದೆ. ಕರ್ನಾಟಕದ ಜಮೀನು ನೋಂದಣಿ ಕಾಯ್ದೆಯಂತೆ ಕಾನೂನು ಬದ್ಧ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆಯೆಂದು ವೇದಿಕೆ ಅಗ್ರಹಾರಂ ಡಾಟ್ ಕಾಂ ವೆಬ್‌ಸೈಟ್ ಪ್ರತಿವಾದಿಸಿದೆ. ಸಮುದಾಯವು ಭೂಕಂದಾಯ ವಿಷಯದಲ್ಲಿ ಸವ್ಯಾಪಕ ತಿಳುವಳಿಕೆಯುಳ್ಳ ನಿವೃತ್ತ ಐಎಎಸ್ ಹಿರಿಯ ಸರಕಾರಿ ಅಧಿಕಾರಿಗಳ ಕಾನೂನು ಸಲಹಾ ಸಮಿತಿಯೊಂದನ್ನು ರಚಿಸಿದೆ.
ಲಿಂಗಾಯತರಿಗೆ ಮಾತ್ರ
ಲಿಂಗಾಯತರಿಗಾಗಿಯೇ ಇರುವ ಅಗ್ರಹಾರವನ್ನು ಶರಣಾರ್ಥಿ ಸಂಗಮ ಎಂದು ಹೆಸರಿಡಲಾಗುವುದು. ಅದರ ಪ್ರಾಯೋಜಕ ಶ್ರೀ ರೇಣುಕಾಬಸವೇಶ್ವರ ದಿವ್ಯಧಾಮವು ಅದನ್ನು ಲಿಂಗಾಯತರಿಗಾಗಿಯೇ ಇರುವ ಏಕೈಕ ಸಾಮಾಜಿಕ- ಆಥಾತ್ಮಿಕ ಉಪನಗರವೆಂದು ಕರೆದಿದೆ. ಉಪನಗರ ಬಾಗೇಪಲ್ಲಿಯಿಂದ 5ಕಿ.ಮೀ. ದೂರವಿದೆ.
ಹಿರಿಯ ವಕೀಲರುಸ, ನಿವೃತ್ತ ಕಂದಾಯ ಅಧಿಕಾರಿಗಳು ಹಾಗೂ ಅನುಭವಸ್ಥ ವೃತ್ತಿಪರರು ಇದರ ಮೇಲ್ವಿಚಾರಣೆ ನೋಡಿಕೊಳ್ಳಿತ್ತಿದ್ದಾರೆಂದು ಶರಣಾರ್ಥಿಸಂಗಮ ಡಾಟ್ ಕಾಮ್ ಹೇಳಿದೆ.

No comments:

Post a Comment