Friday, April 12, 2013

ಮಜಿಬೈಲು ಯುವತಿಯ ಮೃತದೇಹ ಕೊಣಾಜೆ ಬಾವಿಯಲ್ಲಿ ಪತ್ತೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ;ಇಲ್ಲಿಗೆ ಸಮಿಪದ ಮಜಿಬೈಲು ನಿವಾಸಿ ಯುವತಿಯೊಬ್ಬಳ ಮೃತದೇಹ  ಮಂಗಳೂರಿನ ಕೊಣಾಜೆಯಲ್ಲಿರುವ ಪತಿ ಮನೆಯ ಬಾವಿಯಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಮಜಿಬೈಲು ಕೂಡ್ಲೆ ನಿವಾಸಿ ಥೋಮಸ್ ರವರ ಪುತ್ರಿ ಮಂಗಳೂರು ಕೊಣಾಜೆ ಸಮೀಪದ ಎಲ್ಯಾರ್ ಪದವು ನಿವಾಸಿ ಎಲಿಯನ್ ಡಿಸೋಜ ರವರ ಪತ್ನಿ ಅನಿತಾ ಡಿ ಸೋಜ ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದಳು ಇದರಿಂದ ವಿವಿಧಡೆ ಹುಡುಕಾಡುತಿದ್ದಂತೆ ಆಕೆಯ ಮೃತ ದೇಹ ಗಂಡನ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.ಈಕೆ ಹೇಗೆ ಬಾವಿಗೆ ಬಿದ್ದಳೆಂಬುದು ನಿಗೂಢವಾಗಿದೆ.ಇವರ ಮದೆವೆ ೧೦ ವರ್ಷಗಳ ಹಿಂದೆ ನಡೆದಿತ್ತು.ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ.

No comments:

Post a Comment